ರಾಣೆಬೆನ್ನೂರ

ಹುಲ್ಲತ್ತಿ ಗ್ರಾಮದಲ್ಲಿ ಎರಡು ಮರಿಗಳೊಂದಿಗೆ ಹೆಣ್ಣು ಚಿರತೆ ಪ್ರತ್ಯಕ್ಷ: ಆತಂಕದಲ್ಲಿ ಗ್ರಾಮಸ್ಥರು; ಬಂದನಕ್ಕೆ ರೈತರ ಆಗ್ರಹ

ಹುಲ್ಲತ್ತಿ ಗ್ರಾಮದಲ್ಲಿ ಎರಡು ಮರಿಗಳೊಂದಿಗೆ ಹೆಣ್ಣು ಚಿರತೆ ಪ್ರತ್ಯಕ್ಷ: ಆತಂಕದಲ್ಲಿ ಗ್ರಾಮಸ್ಥರು; ಬಂದನಕ್ಕೆ ರೈತರ ಆಗ್ರಹ
Female leopard spotted with two cubs in Hullatti village; villagers alarmed; farmers demand its capt


 ರಾಣೆಬೆನ್ನೂರು: ತಾಲೂಕಿನ ಹುಲ್ಲತ್ತಿ ಗ್ರಾಮದ ಸುತ್ತಮುತ್ತಲಿನ ರೈತರ ಕೃಷಿ ಜಮೀನುಗಳಲ್ಲಿ ಕಳೆದ 15 ದಿನಗಳಿಂದ ಎರಡು ಸಣ್ಣ ಮರಿಗಳೊಂದಿಗೆ ಹೆಣ್ಣು ಚಿರತೆ ಬಿಡುಬಿಟ್ಟಿದೆ. ನೀರಾವರಿ ಜಮೀನುಗಳಲ್ಲಿ ಚಿರತೆಯ ಹೆಜ್ಜೆ ಗುರುತುಗಳು  ಕಾಣುತ್ತಿವೆ ಅನ್ವೇರಿ ಗ್ರಾಮದ ಕುರಿಗಾಯಿಗಳ ಹಿಂಡಿನಲ್ಲಿ ಮೇಕೆಗಳನ್ನ ತಿನ್ನುತ್ತಿರುವ ಘಟನೆಗಳು ಸಹ ನಿತ್ಯವೂ  ನೆಡಿಯುತ್ತಲೇ ಇವೆ. ಇದರಿಂದ ಗ್ರಾಮಸ್ಥರು ಗ್ರಾಮದ ನಾಗರಿಕರು ಜೊತೆಗೆ ರೈತರು ಮತ್ತು ಕುರಿಗಾಯಿಗಳು  ಭಯಭಿತರಾಗಿ ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ಆತಂಕದಲ್ಲಿ ದಿನದೂಡುವಂತಾಗಿದೆ. ತಮ್ಮ ತಮ್ಮ ರಕ್ಷಣೆಗಾಗಿ ಬಡಗಿ, ಮಚ್ಚು ಇತರೆ ಆಯುಧಗಳನ್ನ ಇಟ್ಟುಕೊಂಡು ದಿನಕಳೆಯುವ ಸಂದರ್ಭಗಳು ಎದುರಾಗಿವೆ. ಗ್ರಾಮಸ್ಥರು ಚಿರತೆಯ ಚಲವಲನಗಳ ಮಾಹಿತಿ ನೀಡಿದರೊ ಸಹ  ಅರಣ್ಯ ಇಲಾಖೆ ಕಾಟಚಾರದ ಭೇಟಿ ನೀಡಿ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.  ಪ್ರಸ್ತುತ  ಈ ಬಾಗದ ರೈತರು ತಮ್ಮ ಜಮೀನುಗಳಿಗೆ ಹೋದರೆ ಮರಳಿ ಬರುವ ಗ್ಯಾರಂಟಿ ಇಲ್ಲಾ ಜೀವವನ್ನ ಕೈಯ ಲ್ಲಿಡಿದು ದಿನ ಕಳೆಯುವಂತ್ತಾಗಿದೆ.  


ಸುದ್ದಿ ಓದಿ