ಪೌರಕಾರ್ಮಿಕರ ದಿನಾಚರಣೆ: ಕ್ರೀಡಾ ವಿಜೇತರಿಗೆ ಬಹುಮಾನ, ಉತ್ತಮ ಸೇವೆ ಸಲ್ಲಿಸಿದವರಿಗೆ ಸನ್ಮಾನ
ರಾಣೇಬೆನ್ನೂರು, ಸೆ.25: ನಗರಸಭೆ ವತಿಯಿಂದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪೌರಾಯುಕ್ತ ಫಕೀರ್ಪ ಎಂ. ಇಂಗಳಗಿ, ಪರಿಸರ ಅಭಿಯಂತರ ಮಹೇಶ್ವರ ಕೊಡಬಾಳ, ಆರೋಗ್ಯ ನೀರೀಕ್ಷಕರಾದ ಮಧು ಕಂಬಳಿ, ರಾಘವೇಂದ್ರ ಗಾವಡೆ, ಶೃತಿ ಮಾರಮ್ಮನವರ, ಪೌರಸೇವಾ ನೌಕರರ ಸಂಘದ ಜಿಲ್ಲಾಧ್ಯಕ್ಷ ಏಳೂರುಕೋಟೆಪ್ಪ ಗೋಣಿಬಸಮ್ಮನವರ ಸೇರಿದಂತೆ ನಗರಸಭೆ ಸಿಬ್ಬಂದಿ ಹಾಗೂ ಪೌರಕಾರ್ಮಿಕರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಪೌರಕಾರ್ಮಿಕರಿಗಾಗಿ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ಹಾಗೂ ಪಾರಿತೋಷಕ ವಿತರಿಸಲಾಯಿತು. ನಗರಸಭೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ಪೌರಾಯುಕ್ತ ಫಕೀರ್ಪ ಎಂ. ಇಂಗಳಗಿ ಅವರನ್ನು ಅಭಿಮಾನಿಗಳು ಅಭಿನಂದಿಸಿ ಸನ್ಮಾನಿಸಿದರು. ಯುವ ಕಲಾವಿದ ಹಾಗೂ ಜೀ ಕನ್ನಡ ಖ್ಯಾತಿಯ ಮಹಾನ್ಯ ಪಾಟೀಲ ಮತ್ತು ಗುರುರಾಜ ಪಾಟೀಲ ತಂಡದಿಂದ ನಡೆದ ರಸಮಂಜರಿ ಕಾರ್ಯಕ್ರಮ ಗಮನ ಸೆಳೆಯಿತು.