ರಾಣೆಬೆನ್ನೂರ

ಬೇಟೆಯಾಡಲು ಕಾಡು ಹಂದಿ ಮಾಂಸ: ಸಾಗಾಟ: ಅರಣ್ಯ ಇಲಾಖೆ ಮಿಂಚಿನ ಸಂಚಾರ ಓರ್ವನ ಬಂಧನ

ಬೇಟೆಯಾಡಲು ಕಾಡು ಹಂದಿ ಮಾಂಸ:  ಸಾಗಾಟ: ಅರಣ್ಯ ಇಲಾಖೆ ಮಿಂಚಿನ ಸಂಚಾರ ಓರ್ವನ ಬಂಧನ
Wild boar meat for hunting/consumption: Transport — Forest Department conducts a lightning raid; one


ರಾಣೆಬೆನ್ನೂರ 25: ಕಾಡು ಹಂದಿಯನ್ನು ಭೇಟಿಯಾಡಿ ಅದರ ಮಾಂಸವನ್ನು ಸಾಗಿಸಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ಅರಣ್ಯ ಅಧಿಕಾರಿಗಳು ಮಿಂಚಿನ ದಾಳಿ ನಡೆಸಿ ಓರ್ವನನ್ನು ಬಂಧಿಸಿದ ಘಟನೆ ತಾಲೂಕಿನ ಹುಲ್ಲತ್ತಿ ಗ್ರಾಮದ ಬಳಿ ನಡೆದಿದೆ.  

ಕೃಷ್ಣ ಮೃಗ ಅಭಯಾರಣ್ಯದ ವ್ಯಾಪ್ತಿಯಲ್ಲಿ ನಡೆದಿರುವ ಈ ಘಟನೆಯ ಆರೋಪಿ ತಾಲೂಕಿನ ಬಸಲಿಕಟ್ಟೆ ತಾಂಡಾದ ಚಂದ್ರು ಹನುಮಂತಪ್ಪ ಲಮಾಣಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.  

ಬಸಲಿಕಟ್ಟಿ ತಾಂಡಾದ ಬೀರೇಶ್ ಲಮಾಣಿ, ಸಂಜು ಲಮಾಣಿ, ವಿಜಿ ಲಮಾಣಿ ತಲೆಮರಿಸಿಕೊಂಡಿದ್ದಾರೆ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್ ಪೂಜಾರ ಸೇರಿದಂತೆ ಹಿರಿಯ ಕಿರಿಯ ಅರಣ್ಯಾಧಿಕಾರಿಗಳು, ಸಿಬ್ಬಂದಿಗಳು ಮತ್ತಿತರರು ದಾಳಿಯಲ್ಲಿ ಪಾಲ್ಗೊಂಡಿದ್ದರು. 


ಸುದ್ದಿ ಓದಿ