ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೀಯೋ ನಿಕ್ಸ್ 32 ವರ್ಷಗಳ ಅಪ್ರತಿಮ ಸಾಧನೆ- ಸಿ. ಟಿ.ಸುರೇಶ
ರಾಣೇಬೆನ್ನೂರು, ಸೆ.25: ಯುವ ಪೀಳಿಗೆಯನ್ನು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಜ್ಜುಗೊಳಿಸುವ ಕಾರ್ಯವನ್ನು ಕಿಯೋನಿಕ್ಸ್ ಸಂಸ್ಥೆ 1989ರಿಂದ ನಿರಂತರವಾಗಿ ನಿರ್ವಹಿಸುತ್ತಿದೆ. 37 ವರ್ಷಗಳಲ್ಲಿ ವಿವಿಧ 15ರಿಂದ 20 ಕೋರ್ಸ್ಗಳ ಮೂಲಕ ಸುಮಾರು 38 ಸಾವಿರಕ್ಕೂ ಅಧಿಕ ಯುವಕ-ಯುವತಿಯರಿಗೆ ಕಂಪ್ಯೂಟರ್ ತಂತ್ರಜ್ಞಾನದ ತರಬೇತಿ ನೀಡಿ, ಸಾವಿರಾರು ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವಲ್ಲಿ ದಾರೀದೀಪವಾಗಿದೆ ಎಂದು ಕಿಯೋನಿಕ್ಸ್ ಸೆಂಟರ್ ಹೆಡ್ ಡಾ. ಸಿ.ಟಿ. ಸುರೇಶ್ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರವು ಸಂಸ್ಥೆಯ ಸೇವೆಯನ್ನು ಗುರುತಿಸಿ ರಾಜ್ಯದಲ್ಲಿಯೇ ಕಿಯೋನಿಕ್ಸ್ಗೆ ನಂ.1 ಸ್ಥಾನ ನೀಡಿರುವುದು ಹೆಮ್ಮೆಯ ಸಂಗತಿ ಎಂದರು. ಕಿಯೋನಿಕ್ಸ್ಗೆ 130 ಸೆಂಟರ್ಗಳ ಪೈಕಿ ಮತ್ತೆ ನಂ.1 ಸ್ಥಾನ ದೊರೆತಿದೆ ಎಂದು ತಿಳಿಸಿದರು.
ಕಿಯೋನಿಕ್ಸ್ನ ಬೆಂಗಳೂರು 50ನೇ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ವೀರ್ಪ ಮೊಯ್ಲಿ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವೆ ಪ್ರಿಯಾಂಕ್ ಖರ್ಗೆ, ಕಿಯೋನಿಕ್ಸ್ ಬೆಂಗಳೂರು ಸಂಸ್ಥೆಯ ಚೇರ್ಮನ್ ಹಾಗೂ ಶಾಸಕ ಶರತ್ ಬಚ್ಚೇಗೌಡ ಮತ್ತು ಕಿಯೋನಿಕ್ಸ್ ಹೆಡ್ ಆಫೀಸ್ ಎಂ.ಡಿ. ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಅವರು ಪ್ರಶಸ್ತಿ ನೀಡಿ ಗೌರವಿಸಿದ್ದಾರೆ ಎಂದು ಡಾ. ಸುರೇಶ್ ತಿಳಿಸಿದರು.
ಕಿಯೋನಿಕ್ಸ್ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯ ನಿರಂತರ ಪರಿಶ್ರಮ ಮತ್ತು ಕಾಲಮಾನಕ್ಕೆ ತಕ್ಕಂತೆ ರೂಪಿಸಿರುವ ನಾವೀನ್ಯತೆಗಳನ್ನು ಗುರುತಿಸಿ ಕರ್ನಾಟಕ ಸರ್ಕಾರ ನಂ.1 ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ. ಈ ಪ್ರಶಸ್ತಿ ಇನ್ನಷ್ಟು ಉತ್ತಮ ಸೇವೆ ಸಲ್ಲಿಸಲು ಪ್ರೇರಣೆ ನೀಡಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಿಯೋನಿಕ್ಸ್ ಅಕಾಡೆಮಿಕ್ ಹೆಡ್ ಲಲಿತಾ ಸುರೇಶ್, ಮ್ಯಾನೇಜಿಂಗ್ ಡೈರೆಕ್ಟರ್ ಆಕಾಶ್, ಸೌಂದರ್ಯ ಆಕಾಶ್, ಪ್ರೊ. ಎಸ್.ಎನ್. ಕಟ್ಟಿಮನಿ, ವೀರಣ್ಣ ಸಿ.ಟಿ., ಶಾರದಾ, ಶಿವಣ್ಣ ಸಿ.ಟಿ., ರಾಜು ಎನ್.ಟಿ., ಮಾಲತೇಶ್ ಎಲ್.ಕೆ., ಗೀತಾ, ವ್ಯವಸ್ಥಾಪಕ ವಿಶಾಲ್, ಲ್ಯಾಬ್ ಹೆಡ್ ನಾಗರಾಜ ಕಟ್ಟಿಮನಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.