ಬ್ಯಾಡ್ಗಿ

ಸ್ವಚ್ಛತೆ ನಮ್ಮ ಸಂಕಲ್ಪ ಹಿ ಸ್ವಚ್ಛ ಭಾರತ ನಮ್ಮ ಗುರಿ: ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ

ಸ್ವಚ್ಛತೆ ನಮ್ಮ ಸಂಕಲ್ಪ ಹಿ ಸ್ವಚ್ಛ ಭಾರತ ನಮ್ಮ ಗುರಿ: ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ

. 

ಬ್ಯಾಡಗಿ 02:   ಸ್ವಚ್ಛತೆ ಪ್ರತಿಯೊಬ್ಬ ನಾಗರಿಕನ  ಜವಾಬ್ದಾರಿಯಾಗಿದ್ದು, ಸ್ವಚ್ಛ ಪರಿಸರ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ ಹೇಳಿದರು.ಪಟ್ಟಣದ ಕೆ ಎಸ್ ಆರ್  ಟಿ ಸಿ ನಿಲ್ದಾಣದಲ್ಲಿ ಗಾಂಧಿ ಜಯಂತಿ ನಿಮಿತ್ತ ಸ್ವಚ್ಛತಾ ಅಭಿಯಾನಕ್ಕೆ ಸ್ವಚ್ಛತೆ ಮಾಡುವ ಮೂಲಕ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಸ್ವಚ್ಛತೆ ನಮ್ಮ ಸಂಕಲ್ಪ ಹಿ ಸ್ವಚ್ಛ ಭಾರತ ನಮ್ಮ ಗುರಿ” ಎಂಬ ಧ್ಯೇಯದೊಂದಿಗೆ ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಕಸವನ್ನು ಎಲ್ಲೆಂದರಲ್ಲಿ ಎಸೆಯದೆ, ನಿಗದಿತ ಸ್ಥಳದಲ್ಲೇ ಹಾಕುವ ಮೂಲಕ ಸ್ವಚ್ಛತೆ ಕಾಪಾಡಬೇಕು ಎಂದರು.ಸ್ವಚ್ಛತಾ ಕಾರ್ಯವು ಕೇವಲ ಒಂದು ದಿನದ ಕಾರ್ಯಕ್ರಮಕ್ಕೆ ಸೀಮಿತವಾಗದೆ, ನಿರಂತರವಾಗಿ ನಡೆಯುವ ಜನಾಂದೋಲನವಾಗಬೇಕು. ಸ್ವಚ್ಛತೆ, ಆರೋಗ್ಯ ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.ಕಾರ್ಯಕ್ರಮದಲ್ಲಿ ತಾಲೂಕು ಅಧ್ಯಕ್ಷ ನಿಂಗಪ್ಪ ಬಟ್ಟಲಕಟ್ಟಿ.ಸರೋಜಮ್ಮ ಉಳ್ಳಾಗಡ್ಡಿ. ವಿನಯ್ ಹಿರೇಮಠ.ಮಾಜಿ ಅಧ್ಯಕ್ಷರು ಬಸವಣ್ಣೆಪ್ಪ ಛತ್ರದ. ಹನುಮಂತಪ್ಪ. ವಿಜಯ್ ಮಾಳಗಿ. ನಿಂಗಪ್ಪ. ಪರಶುರಾಮ. ವಿಷ್ಣುಕಾಂತ. ಶಂಕ್ರಣ್ಣ. ಸುರೇಶ. ನಾಗರಾಜ್ ಮತ್ತು ಜಿತೇಂದ್ರ ಸುಣಗಾರ ಸಂತೋಷ್ ಮೂಲಿಮನಿ ಮೌನೇಶ್ ಬಡಿಗೇರ್ ಮಹಿಳಾ ಮೋರ್ಚ ಕಲಾವತಿ ಬಡಿಗೇರ್   ಗಿರಿಜಾ ಪಟ್ಟಣಶೆಟ್ಟಿ ಮತ್ತು ಬಿಜೆಪಿ ಕಾರ್ಯಕರ್ತರು ಮತ್ತು ಎಲ್ಲಾ ನಾಯಕರು ಉಪಸ್ಥಿತರಿದ್ಧರು. 


ಸುದ್ದಿ ಓದಿ