ಬ್ಯಾಡ್ಗಿ

ಬನ್ನಿಹಟ್ಟಿಯಲ್ಲಿ ಪ್ರಜಾಸೇವೆ ಆಂದೋಲನ

ಬನ್ನಿಹಟ್ಟಿಯಲ್ಲಿ ಪ್ರಜಾಸೇವೆ ಆಂದೋಲನ


             ಬ್ಯಾಡಗಿ  21: ಪ್ರಜಾಸೇವಾ ಆಂದೋಲನ ಸಭೆಯಲ್ಲಿ ಸ್ವೀಕೃತ ಅರ್ಜಿಗಳ ಬಗ್ಗೆ ಅಧಿಕಾರಿಗಳು ಹಗುರವಾಗಿ ಭಾವಿಸಬಾರದೆಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.ಅವರು ತಾಲೂಕಿನ ಬನ್ನಿಹಟ್ಟಿಯಲ್ಲಿ ನಡೆದ ಗ್ರಾಮ ಪಂಚಾಯಿತಿ ಮಟ್ಟದ ಪ್ರಜಾಸೇವೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

             ಗ್ರಾಮೀಣ ಪ್ರದೇಶದ ಜನರು ನೀಡಿದ ಅರ್ಜಿಗಳಿಗೆ ಮನಬಂದಂತೆ ಉತ್ತರ ನೀಡಬಾರದು ಪ್ರತಿಯೊಂದು ಅರ್ಜಿಯನ್ನು ಶಿಸ್ತುಬದ್ಧ ರೀತಿಯಲ್ಲಿ ವಿಲೇವಾರಿ ಮಾಡಬೇಕು. ನಿರ್ಲಕ್ಷ್ಯ ವಹಿಸಿದಲ್ಲಿ ಮುಲಾಜಿಲ್ಲದೇ ಕ್ರಮ ಜರುಗಿಸುವುದಾಗಿ ಶಾಸಕರು ಹೇಳಿದರಲ್ಲದೇಪ್ರಜಾಸೇವಾ ಆಂದೋಲನ ಸಭೆಯು ಉತ್ತಮ ಉದ್ದೇಶ ಹೊಂದಿದೆ ಎಂದು ತಿಳಿಸಿದರು.  

            ತಹಶೀಲ್ದಾರ ಎಸ್‌.ಟಿ.ರಘು ಪ್ರಾಸ್ತಾವಿಕವಾಗಿ ಅವರು ಮಾತನಾಡಿ, ಆಡಳಿತವನ್ನು ಜನರ ಮನೆಬಾಗಿಲಿಗೆ ಕರೆದೊಯ್ಯುವ ಉದ್ದೇಶದಿಂದಾಗಿ ರಾಜ್ಯ ಸರ್ಕಾರವು ಪ್ರತ್ಯೇಕ ಇಲಾಖೆಯೊಂದನ್ನು ಸ್ಥಾಪಿಸಿದ್ದು, ಆಡಳಿತದಲ್ಲಿ ಪಾರದರ್ಶಕತೆ ತರುವುದು ಸರ್ಕಾರ ಮುಖ್ಯ ಉದ್ದೇಶವಾಗಿದೆ. ಈಗಾಗಲೇ ಸ್ವೀಕೃತವಾದ ಪ್ರಜಾಸೇವಾ ಅರ್ಜಿಗಳನ್ನು ಗುಣಾತ್ಮಕ ರೀತಿಯಲ್ಲಿ ವಿಲೇ ಮಾಡಲಾಗುತ್ತದೆ. ಹೆಚ್ಚಿನ ಸಮಸ್ಯೆಗಳನ್ನು ಹೊತ್ತು ತರುವ ಅರ್ಜಿಗಳನ್ನು ಸಹ ಹಂತಹಂತವಾಗಿ ವಿಲೆ ಮಾಡಲಾಗುತ್ತಿದೆ ಎಂದು ತಿಳಿಸಿದರು. 

              ಈ ಸಂದರ್ಭದಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಮಲ್ಲಿಕಾರ್ಜುನ, ಗ್ರೇಡ್‌-2 ತಹಶೀಲ್ದಾರ ಸಾರಿಕಾ ಸಿಂಗನಮಕ್ಕಿ, ಶಿರಸ್ತೇದಾರ್ ಕುಲವಯ್ಯಶ್ಯಾಮ ಗೊರವರ, ನ್ಯಾಯವಾದಿ ಡಿ.ಎಚ್‌.ಬುಡ್ಡನಗೌಡ, ಎಸ್‌.ಡಿ.ಎಂ.ಸಿ ಅಧ್ಯಕ್ಷ ಮಾಲತೇಶ ಚೊಕ್ಕನಗೌಡ, ಜಗದೀಶ್ ಕೆರಕರ, ರಾಮನಗೌಡ ಬುಡ್ಡನಗೌಡ, ಗಣೇಶ ಕಾಟೇನಹಳ್ಳಿ, ಪಿಡಿಓ ನಾಗರಾಜ್ ಹಡಗಲಿ ಇದ್ದರು.ಇಂದು ನಡೆದ ಪ್ರಜಾಸೇವಾ ಆಂದೋಲನ ಸಭಾ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ತಾಲೂಕ ಮಟ್ಟದ ಎಲ್ಲ ಅಧಿಕಾರಿಗಳು ಹಾಗೂ ಗ್ರಾ.ಪಂ.  ಶಾಲಾ ಸಿಬ್ಬಂದಿ ಭಾಗಿಯಾಗಿದ್ದರು. 


ಸುದ್ದಿ ಓದಿ