ಬಳ್ಳಾರಿ

ಡಿಜಿಟಲ್ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆಯ ಜ್ಞಾನ ಅಗತ್ಯ : ಅವ್ವಾರು ಮಂಜುನಾಥ

ಡಿಜಿಟಲ್ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆಯ ಜ್ಞಾನ ಅಗತ್ಯ : ಅವ್ವಾರು ಮಂಜುನಾಥ

             ಬಳ್ಳಾರಿ, ನ. 21: ಪ್ರಸ್ತುತ ವ್ಯಾಪಾರ ಮತ್ತು ಉದ್ಯಮ ಕ್ಷೇತ್ರದಲ್ಲಿ ಡಿಜಿಟಲ್ ತಂತ್ರಜ್ಞಾನ ಹಾಗೂ ಕೃತಕ ಬುದ್ಧಿಮತ್ತೆಯ ಬಳಕೆ ಅನಿವಾರ್ಯವಾಗುತ್ತಿದ್ದು ಆಧುನಿಕ ತಂತ್ರಜ್ಞಾನವನ್ನು ದೈನಂದಿನ ಚಟುವಟಿಕೆಗಳಲ್ಲಿ ಅಳವಡಿಸಿಕೊಳ್ಳಬೇಕು ಎಂದು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಅವ್ವಾರು ಮಂಜುನಾಥ್ ಅವರು ತಿಳಿಸಿದ್ದಾರೆ. ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಹಯೋಗದಲ್ಲಿ ಟ್ಯಾಲಿ ಪ್ರೈಮ್ ಸಲ್ಯೂಷನ್ ಪ್ರೈವೇಟ್ ಲಿಮಿಟೆಡ್, ಚೇತನ ಇನ್ಸ್ಟಿಟ್ಯೂಟ್ ಆಫ್ ಬ್ಯುಸಿನೆಸ್ ಸಲ್ಯೂಷನ್ಸ್‌, 

            ಟ್ಯಾಲಿ ಪ್ರೈಮ್ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಚಾರ್ಟೆಡ್ ಟ್ಯಾಕ್ಸ್‌ ಪ್ರಾಕ್ಟೀಷರ್ನ್‌ ಆಫ್ ಇಂಡಿಯಾ ಹಾಗೂ ಬಳ್ಳಾರಿ ಟ್ಯಾಕ್ಸ್‌ ಬಾರ್ ಅಸೋಸಿಯೇಷನ್ ಇವರ ಜಂಟಿ ಆಶ್ರಯದಲ್ಲಿ ಶನಿವಾರ ನಡೆದ ಟ್ಯಾಲಿ ಪ್ರೈಮ್ ಆವೃತ್ತಿ 7.2ರ ವಿಶೇಷ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಚಾರ್ಟೆಡ್ ಟ್ಯಾಕ್ಸ್‌ ಪ್ರಾಕ್ಟೀಷನರ್ಸ್‌ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷರಾದ ಪಾರ್ಥಸಾರಥಿ ಅವರು, ಟ್ಯಾಲಿ ಪ್ರೈಂ 7.2ರಲ್ಲಿ ದಾಖಲೆಗಳ ಸಂಸ್ಕರಣೆ, ಸುಧಾರಿತ ಇನ್ವಾಯ್ಸ್‌, ಬ್ಯಾಂಕಿಂಗ್ ಪಾವತಿ ಇನ್ನಿತರೆ ಸಮಗ್ರ ಮಾಹಿತಿಗಳು ಸಿಗುತ್ತವೆ.  

               ಈ ಎಲ್ಲಾ ಮಾಹಿತಿಗಳು ದೈನಂದಿನ ವ್ಯಾಪಾರದ ನಿರ್ವಹಣೆಯನ್ನು ಸುಲಭ ಮಾಡುತ್ತವೆ ಎಂದರು. ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಕೆ.ಸಿ. ಸುರೇಶ್ ಬಾಬು ಅವರು ಮಾತನಾಡಿ, ಟ್ಯಾಲಿ ಪ್ರೈಮ್ ನೂತನ ಆವೃತ್ತಿಯು ಬಳಕೆದಾರ ಸ್ನೇಹಿಯಾಗಿದ್ದು, ಲೆಕ್ಕಪತ್ರ ನಿರ್ವಹಣೆಯಲ್ಲಿ ಹೆಚ್ಚು ಅನುಕೂಲಕರವಾಗಿದೆ ಎಂದರು.ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾದ ರಾಮ್ ಕಟಗಿ ಅವರು ಟ್ಯಾಲಿ ಪ್ರೈಮ್ ನೂತನ ಆವೃತ್ತಿ 7.2ರಲ್ಲಿರುವ ಹೊಸ ವೈಶಿಷ್ಟ್ಯಗಳು, ತಾಂತ್ರಿಕ ಸುಧಾರಣೆಗಳು ಹಾಗೂ ಡಿಜಿಟಲ್ ಲೆಕ್ಕಪತ್ರ ನಿರ್ವಹಣೆಯ ಕುರಿತು ವಿವರವಾದ ಮಾಹಿತಿ ನೀಡಿದರು. 

             ಈ ನೂತನ ಆವೃತ್ತಿಯು ವ್ಯಾಪಾರ ಮತ್ತು ಉದ್ಯಮ ಕ್ಷೇತ್ರದಲ್ಲಿ ಲೆಕ್ಕಪತ್ರ ನಿರ್ವಹಣೆಯನ್ನು ಇನ್ನಷ್ಟು ಸುಲಭ, ಪರಿಣಾಮಕಾರಿ ಹಾಗೂ ಆಧುನಿಕಗೊಳಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅಕೌಂಟೆಂಟ್‌ಗಳು ಹಾಗೂ ಉದ್ಯಮಿಗಳು ಟ್ಯಾಲಿ ಪ್ರೈಮ್ 7.2ರ ಬಳಕೆ, ಹೊಸ ಸೌಲಭ್ಯಗಳು ಮತ್ತು ಲೆಕ್ಕಪತ್ರ ನಿರ್ವಹಣೆಗೆ ಸಂಬಂಧಿಸಿದಂತೆ ವಿವಿಧ ಪ್ರಶ್ನೆಗಳನ್ನು ಕೇಳಿದರು. ರಾಮ್ ಕಟಗಿ ಅವರು ಎಲ್ಲಾ ಪ್ರಶ್ನೆಗಳಿಗೆ ಸಮರ​‍್ಕವಾಗಿ ಉತ್ತರಿಸಿ, ನೂತನ ಸೌಲಭ್ಯಗಳ ಪ್ರಾಯೋಗಿಕ ಬಳಕೆ ಹಾಗೂ ಉಪಯುಕ್ತತೆಯನ್ನು ವಿವರಿಸಿದರು.ಕಾರ್ಯಕ್ರಮದ ನಿರೂಪಣೆ ಮತ್ತು ಸ್ವಾಗತ ಸರ್ಟಿಫೈಡ್ ಪಾರ್ಟ್ನರ್ ಚವಾಣ್ ಮನೋಹರ್, ನೆರವೇರಿಸಿದರು.                            ಕಾರ್ಯಕ್ರಮದಲ್ಲಿ ಬಳ್ಳಾರಿ ಟ್ಯಾಕ್ಸ್‌ ಬಾರ್ ಅಸೋಸಿಯೇಷನ್ ಅಧ್ಯಕ್ಷರಾದ ಎಸ್‌. ಉಸ್ಮಾನ್ ಶರೀಫ್, ಟ್ಯಾಲಿ ಸಲ್ಯೂಷನ್ಸ್‌ ರವಿ ತಾಳಿಕೋಟಿ, ರಾಮ್ ಕಟಗಿ, ಸಂಸ್ಥೆಯ ಉಪಾಧ್ಯಕ್ಷರಾದ ಸೊಂತ ಗಿರಿಧರ್, ಜಂಟಿ ಕಾರ್ಯದರ್ಶಿಗಳಾದ, ಡಾ. ಮರ್ಚೇಡ್ ಮಲ್ಲಿಕಾರ್ಜುನಗೌಡ ಹಾಗೂ ವಿ. ರಾಮಚಂದ್ರ, ಕಾರ್ಯಕಾರಿ ಸಮಿತಿ ಸದಸ್ಯರು, ವಿಶೇಷ ಆಹ್ವಾನಿತರು, ವಿಶೇಷ ಸಮನ್ವಯ ಸಮಿತಿ ಸದಸ್ಯರು ಹಾಗೂ ವಿವಿಧ ಸಂಘಗಳ ಪದಾಧಿಕಾರಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ