ಲಕ್ಷ್ಮೇಶ್ವರ ಪಟ್ಟಣದಲ್ಲಿ ಕಿತ್ತೂರು ರಾಣಿ ಚೆನ್ನಮ್ಮನ ಜಯಂತೋತ್ಸವ ಹಾಗೂ ವಿಜಯೋತ್ಸವದ ಸಂಭ್ರಮ
ಲಕ್ಷ್ಮೇಶ್ವರ" 21: ಪಟ್ಟಣದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ತಾಲೂಕು ವತಿಯಿಂದ ವೀರರಾಣಿ ಕಿತ್ತೂರು ಚೆನ್ನಮ್ಮನ 248ನೇ ಜಯಂತೋತ್ಸವ ಹಾಗೂ 202 ವಿಜಯೋತ್ಸವದ ಭವ್ಯ ಮೆರವಣಿಗೆಯು ಪಟ್ಟಣದ ಪಂಪ ಸರ್ಕಲ್ ವೃತ್ತದಿಂದ ಪ್ರಾರಂಭಗೊಂಡಿತು.
ಮೆರವಣಿಗೆಗೆ ಪಂಚಮಸಾಲಿ ಸಮಾಜದ ಪರಮ ಪೂಜ್ಯರಾದ ಹರಿಹರ ಪೀಠದ ವಚನಾನಂದ ಸ್ವಾಮಿಗಳು ಮಾಜಿ ಶಾಸಕರಾದ ಜಿ ಎಂ ಮಹಾಂತಶೆಟ್ಟರ್ ಜಿ ಎಸ್ ಗಡ್ಡದೇವರಮಠ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಲಕ್ಷ್ಮೇಶ್ವರ ತಾಲೂಕು ಅಧ್ಯಕ್ಷರಾದ ಶಂಕರ್ ರಾಗಿ ಅವರು ಚಾಲನೆ ನೀಡಿದರು.
ಮೆರವಣಿಗೆಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮನ ಮೂರ್ತಿ ಸಂಗೊಳ್ಳಿ ರಾಯಣ್ಣನ ಮೂರ್ತಿ ವಿವಿಧ ಕಲಾ ತಂಡಗಳೊಂದಿಗೆ ನೂರಾರು ಮಹಿಳೆಯರು ಕುಂಭ ಹೊತ್ತು ಸಾಗಿದ್ದರು ಪಂಪ ಸರ್ಕಲ್ ನಿಂದ ಪ್ರಾರಂಭಗೊಂಡ ಮೆರವಣಿಗೆಯು ಪಟ್ಟಣದ ಹಳೆ ಬಸ್ ನಿಲ್ದಾಣದ ಹತ್ತಿರ ಇರುವ ಕಿತ್ತೂರು ರಾಣಿ ಚೆನ್ನಮ್ಮನ ಮೂರ್ತಿಗೆ ಪೂಜೆ ಸಲ್ಲಿಸಿ ಪಟ್ಟಣದ ಪ್ರಮುಖ ಬೀದಿಗಳ ಮುಖಾಂತರ ಮೆರವಣಿಗೆಯು ಸಾಗಿ ಸೋಮೇಶ್ವರ ದೇವಸ್ಥಾನದ ತೇರಿನ ಮನೆ ಆವರಣಕ್ಕೆ ತಲುಪಿದ ನಂತರ ವೇದಿಕೆ ಕಾರ್ಯಕ್ರಮ ಜರುಗುವುದು.
ಮೆರವಣಿಗೆಯಲ್ಲಿ ಮುಖಂಡರಾದ ಕೆಪಿಸಿಸಿ ಸದಸ್ಯರಾದ ಆನಂದಸ್ವಾಮಿ ಗಡ್ಡದೇವರಮಠ ಸುನಿಲ ಮಹಾಂತಶೆಟ್ಟರ ಚನ್ನಪ್ಪ ಜಗಲಿ ಸೋಮಣ್ಣ ಡಾಣಗಲ್ಲ ಎಸ್ ಪಿ ಬಳಿಗಾರ ಶಿವಾನಂದ ದೇಸಾಯಿ ವೀರೇಂದ್ರ ತೋಟದ ಡಿ ವೈ ಹುನಗುಂದ ಶಿವರಾಜಗೌಡ್ರು ಪಾಟೀಲ ಪ್ರವೀಣ ಬಾಳೆಕಾಯಿ ಗಂಗಾಧರ ಮೆಣಸಿನಕಾಯಿ ಮಂಜುನಾಥ್ ಹೊಗೆ ಸೊಪ್ಪಿನ ಶರಣು ಗೋಡಿ ಶಂಭಣ್ಣ ಕನವಳ್ಳಿ ರಾಜು ಕುಂಬಿ ಸೇರಿದಂತೆ ಲಕ್ಷ್ಮೇಶ್ವರ ಶಿರಹಟ್ಟಿ ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷರು ಪದಾಧಿಕಾರಿಗಳು ಸಮಾಜದ ಮುಖಂಡರು ಮಹಿಳೆಯರು ಸೇರಿದಂತೆ ಸರ್ವ ಸಮಾಜದ ಬಾಂಧವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.