ಹಾವೇರಿ

ರಾಷ್ಟ್ರೀಯ ವೀಲ್ಚೇರ್ ಪಿಕಲ್ಬಾಲ್ ಚಾಂಪಿಯನ್ಶಿಪ್ ಗೆ ಹಾವೇರಿಯ ಅಂಗವಿಕಲೆ ಗಿರಿಜಾ ಹೆಚ್ ಆಯ್ಕೆ : ಎಸ್‌ಎಫ್‌ಐ - ಡಿವೈಎಫ್‌ಐ ಅಭಿನಂದನೆ

ರಾಷ್ಟ್ರೀಯ ವೀಲ್ಚೇರ್ ಪಿಕಲ್ಬಾಲ್ ಚಾಂಪಿಯನ್ಶಿಪ್ ಗೆ ಹಾವೇರಿಯ ಅಂಗವಿಕಲೆ ಗಿರಿಜಾ ಹೆಚ್ ಆಯ್ಕೆ : ಎಸ್‌ಎಫ್‌ಐ - ಡಿವೈಎಫ್‌ಐ ಅಭಿನಂದನೆ
Girija H., a person with a disability from Haveri, selected for the National Wheelchair Pickleball


        ಹಾವೇರಿ: ರಾಷ್ಟ್ರೀಯ ಮಟ್ಟದ ಪ್ರಥಮ ವೀಲ್ಚೇರ್ ಪಿಕಲ್ಬಾಲ್  ಹಿ2026ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಲು ಹಾವೇರಿಯ ಕ್ರೀಡಾಪಟು ಗಿರಿಜಾ ಹೆಚ್ ಅವರು ಆಯ್ಕೆಯಾಗಿದ್ದಾರೆ. ನವೆಂಬರ್ 18 ರಿಂದ 21ರವರೆಗೆ ಮೈಸೂರಿನ ವಿಜಯನಗರದ ಕ್ರೀಡೆ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ರಾಷ್ಟ್ರೀಯ ಚಾಂಪಿಯನ್ಶಿಪ್ನಲ್ಲಿ ಗಿರಿಜಾ ಅವರು ಭಾಗವಹಿಸಲಿದ್ದಾರೆ.

          ಗಿರಿಜಾ ಅವರ ಈ ಸಾಧನೆಗೆ ಹರ್ಷ ವ್ಯಕ್ತಪಡಿಸಿದ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಹಾಗೂ ಭಾರತ ಪ್ರಜಾಸತ್ತಾತ್ಮಕ ಯುವಜನರ ಫೆಡರೇಶನ್ (ಡಿವೈಎಫ್‌ಐ) ಸಂಘಟನೆಗಳ ವತಿಯಿಂದ ನಗರದ ಪರೀವೀಕ್ಷಣಾ ಮಂದಿರದ ಆವರಣದಲ್ಲಿ ಅಭಿನಂದಿಸಿ, ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಜಿಲ್ಲೆ ಹಾಗೂ ರಾಜ್ಯಕ್ಕೆ ಕೀರ್ತಿ ತರಲಿ ಎಂದು ಶುಭಹಾರೈಸಿದರು.

           ಅಂಗವೈಕಲ್ಯವನ್ನು ಮೀರಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಯ ಹಾದಿಯಲ್ಲಿ ಮುನ್ನಡೆಯುತ್ತಿರುವ ಗಿರಿಜಾ ಅವರ ಆಯ್ಕೆಯು ಇತರ ಕ್ರೀಡಾಪಟುಗಳಿಗೂ ಪ್ರೇರಣೆಯಾಗಿದೆ. ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ಚೇತನರಿಗೆ ಹೆಚ್ಚಿನ ಅವಕಾಶ, ಪ್ರೋತ್ಸಾಹ ಹಾಗೂ ಅಗತ್ಯ ಸೌಲಭ್ಯಗಳು ದೊರೆಯಬೇಕು. ಇವರ ಜೀವನಕ್ಕೆ ಆಸರೆ ಆಗಿದ್ದ ವಿಕಲಚೇತನ ಉದ್ಯೋಗಸ್ಥ ಮಹಿಳೆಯರು ಹಾಗೂ ವಿದ್ಯಾರ್ಥಿಗಳ ವಸತಿ ನಿಲಯವನ್ನು ಪುನರ್ ಆರಂಭಿಸಬೇಕು ಎಂದು ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಜಿಲ್ಲಾಡಳಿತವನ್ನು ಒತ್ತಾಯಿಸಿದರು.

              ಈ ಸಂದರ್ಭದಲ್ಲಿ ಡಿವೈಎಫ್‌ಐ ಜಿಲ್ಲಾ ಖಜಾಂಚಿ ರೇಣುಕಾ ಕಹಾರ, ಭಗತ್ ಸಿಂಗ್ ಶಿಕ್ಷಣ ಸಂಸ್ಥೆ ಮುಖ್ಯಸ್ಥರಾದ ಸತೀಶ್ ಬಾಗಣ್ಣನವರ, ಪತ್ರಕರ್ತರಾದ ನಿಂಗಪ್ಪ ಆರೇರ್, ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಅರುಣಕುಮಾರ ನಗವತ, ಡಿವೈಎಫ್‌ಐ ಮುಖಂಡರಾದ ತಸ್ಲೀಮಾ, ನಿಂಗರಾಜ ಪೂಜಾರ, ಬಾಲಸಂಘಂನ ಧನುಷ್ ದೊಡ್ಡಮನಿ, ಮೈನುದೀನ್ ಇಲಿಬುಡ್ಡಿ, ಅನ್ವಿಕಾ ಆರ್ ಬಿ, ತೇಜಸ್ ಎನ್ ಡಿ ಉಪಸ್ಥಿತರಿದ್ದರು. 


ಸುದ್ದಿ ಓದಿ