ಬೆಳಗಾವಿ

ಅಣ್ಣ ಕಂಡ ಅಮೆರಿಕಾ ಪ್ರವಾಸಿಗರಿಗೆ ಉತ್ತಮ ದಿಕ್ಸೂಚಿ: ಪ್ರೊ. ಎಚ್‌.ಕೆ.ಗುರವ್

ಅಣ್ಣ ಕಂಡ ಅಮೆರಿಕಾ ಪ್ರವಾಸಿಗರಿಗೆ ಉತ್ತಮ ದಿಕ್ಸೂಚಿ: ಪ್ರೊ. ಎಚ್‌.ಕೆ.ಗುರವ್


            ಸವದತ್ತಿ 18: ಅಣ್ಣ ಕಂಡ ಅಮೇರಿಕಾ ಸಂಪಾದಿತ ಕೃತಿಯು ಮುಂಬರುವ ದಿನಗಳಲ್ಲಿ ಅಮೇರಿಕಾ ಪ್ರವಾಸ ಕೈಗೊಳ್ಳುವವರಿಗೆ ಉತ್ತಮ ದಿಕ್ಸೂಚಿಯಾಗಲಿದೆ ಎಂದು ಉಪನ್ಯಾಸಕ ಪ್ರೊ. ಎಚ್‌.ಕೆ. ಗುರವ್ ಅಭಿಪ್ರಾಯಪಟ್ಟರು. ಸವದತ್ತಿ ತಾಲ್ಲೂಕಿನ ಅಸುಂಡಿ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಬಸವೇಶ್ವರ ದೇವಸ್ಥಾನ ಟ್ರಸ್ಟ್‌ ಹಾಗೂ ಮಲಪ್ರಭಾ ಶಿಕ್ಷಣ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಅಣ್ಣ ಕಂಡ ಅಮೇರಿಕಾ ಪುಸ್ತಕ ಲೋಕಾರೆ​‍್ಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

           ಅಸುಂಡಿ ಗ್ರಾಮದ ನಿವೃತ್ತ ಇಂಜಿನಿಯರ್ ಎಸ್‌.ಬಿ. ಕರೀಕಟ್ಟಿ ಅವರು 2008ರಲ್ಲಿ ತಾವು ಕೈಗೊಂಡಿದ್ದ ಅಮೇರಿಕಾ ಪ್ರವಾಸದ ಕುರಿತು ಬರೆದಿಟ್ಟಿದ್ದ ಟಿಪ್ಪಣಿಗಳನ್ನು, ಅವರ ಸಹೋದರ ಹಾಗೂ ಹಿರಿಯ ವಕೀಲರಾದ ಶಿವರಾಯ ಕರೀಕಟ್ಟಿ ಅವರು ಅಚ್ಚುಕಟ್ಟಾಗಿ ಸಂಪಾದಿಸಿ ಕೃತಿ ರೂಪಕ್ಕೆ ಇಳಿಸಿದ್ದಾರೆ. ಸುಮಾರು 95 ಪುಟಗಳ ಈ ಪುಸ್ತಕದಲ್ಲಿ ಇಡೀ ಅಮೇರಿಕಾವನ್ನು ಸುತ್ತಿದ ಬಸವ ನಾಡಿನ ಜಂಗಮ ಎಸ್‌.ಬಿ. ಕರೀಕಟ್ಟಿ ಅವರ ನೈಜ ಪ್ರವಾಸಿ ಅನುಭವಗಳಿವೆ. ಅಮೇರಿಕಾದ ಪ್ರಾಕೃತಿಕ ಸೌಂದರ್ಯ ಹಾಗೂ ಅಲ್ಲಿನ ವ್ಯವಸ್ಥೆಯ ಕುರಿತು 19 ವರ್ಷಗಳ ಹಿಂದೆ ದಾಖಲಿಸಿದ್ದ ಟಿಪ್ಪಣಿಗಳು ಇಂದು ಪುಸ್ತಕವಾಗಿ ಹೊರಬಂದಿರುವುದು ವಿಶೇಷ ಎಂದರು.

             ಮಾತನಾಡಿದ ಅವರು, ನಮ್ಮ ಭಾಗದಲ್ಲಿ ಡಾ. ಪ್ರಭಾಕರ್ ಕೋರೆ ಅವರ ಪ್ರವಾಸ ಕಥನದ ನಂತರದಲ್ಲಿ ಹೊರಬಂದ ಎರಡನೇ ಪ್ರವಾಸ ಕಥನ ಇದಾಗಿದೆ. ಈ ಕೃತಿಯ ಮೂಲಕ ಅಸುಂಡಿ ಗ್ರಾಮವು ಸಾಹಿತ್ಯ ಮತ್ತು ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ಉಳಿಯಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಬೈಲಹೊಂಗಲದ ಮಾಜಿ ಶಾಸಕ ಡಾ. ವಿಶ್ವನಾಥ ಪಾಟೀಲ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

             ಡಾ. ಬಿ.ಎಂ. ಪಾಟೀಲ್ ಪುಸ್ತಕ ಲೋಕಾರೆ​‍್ಣಗೊಳಿಸಿದರು. ನಿವೃತ್ತ ಶಿಕ್ಷಕ ಬಿ.ಎಂ. ಬಾಣಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕೃತಿಯ ಮೂಲ ಲೇಖಕ ನಿವೃತ್ತ ಅಭಿಯಂತರ ಎಸ್‌.ಬಿ. ಕರೀಕಟ್ಟಿ, ಮಹಾಂತೇಶ ಶೆಟ್ಟರ್, ಈರ​‍್ಪ ತೋಟಿಗೇರ, ಪತ್ರಕರ್ತ ರಾಘವೇಂದ್ರ ಸರದೇಸಾಯಿ, ಮಲ್ಲಪ್ಪ ಮಲ್ಲೂರ, ಪ್ರಗತಿಪರ ರೈತ ಮಹಾಂತೇಶ ಕರೀಕಟ್ಟಿ, ಸೇರಿದಂತೆ ಗ್ರಾಮದ ಹಿರಿಯರು ಹಾಗೂ ಶಿಕ್ಷಣ ಪ್ರೇಮಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ