ಬೆಳಗಾವಿ

ವದಂತಿಗೆ ಕಿವಿಗೊಡಬೇಡಿ ; ಯಲ್ಲಮ್ಮ ದೇವಿಗೆ ಸರೋ​‍್ದಷ ಎಂಬ ವದಂತಿ ಸುಳ್ಳು

ವದಂತಿಗೆ ಕಿವಿಗೊಡಬೇಡಿ ; ಯಲ್ಲಮ್ಮ ದೇವಿಗೆ ಸರೋ​‍್ದಷ ಎಂಬ ವದಂತಿ ಸುಳ್ಳು

ಲೋಕದರ್ಶನ ವರದಿ 

            ಉಗರಗೋಳ 18 : ಸವದತ್ತಿಯ ಯಲ್ಲಮ್ಮ ದೇವಿಗೆ ಸರೋ​‍್ದಷ ತಗುಲಿದ್ದು, ಅದರ ನಿವಾರಣೆಗಾಗಿ ಪುಣ್ಯಸ್ನಾನ ಮಾಡಿ ಹೊಸ ಪಾದ(ತಾಮ್ರದ ಚಿಕ್ಕ ಪಾದುಕೆ) ಧರಿಸಬೇಕು ಎಂದು ಹರಡಿರುವ ವದಂತಿ ಸುಳ್ಳು. ಇದಕ್ಕೆ ಯಾರೂ ಕಿವಿಗೊಡಬಾರದು ಎಂದು ಯಲ್ಲಮ್ಮ ದೇವಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಾಜಶ್ರೀ ಜೈನಾಪುರ ತಿಳಿಸಿದ್ದಾರೆ. 

             ಈ ವದಂತಿ ನಂಬಿ ನೂರಾರು ಮಾತಂಗಿಯರು ಯಾದಗಿರಿಯಲ್ಲಿ ಭೀಮಾನದಿಯಲ್ಲಿ ಪುಣ್ಯಸ್ನಾನಕ್ಕ್ಕೆ ಸೇರಿರುವುದು ಮಾಧ್ಯಮಗಳಲ್ಲೆಲ್ಲ ವರದಿಯಾಗಿದೆ. ಇದು ಸತ್ಯಕ್ಕೆ ದೂರವಾದದ್ದು. ಅಂಥ ಯಾವ ವಿದ್ಯಮಾನವೂ ನಡೆದಿಲ್ಲ ಎಂದು ಹೇಳಿದ್ದಾರೆ. ಇಂಥ ವದಂತಿ ನಂಬಿ ಯಾರೂ ಪುಣ್ಯಸ್ನಾನ ಮಾಡಲು ನದಿಗಳಿಗೆ ಹೋಗಬಾರದು. ಮನೆಯಲ್ಲೇ ಭಕ್ತಿಯಿಂದ ದೇವಿ ಆರಾಧನೆ ಮಾಡುವಂತೆ ಅವರು ಕೋರಿದ್ದಾರೆ. 



ಸುದ್ದಿ ಓದಿ