ಬೆಳಗಾವಿ

73ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಆರ್ಸಿಎಂಎಸ್ ಬ್ಯಾಂಕ್ಗೆ ಒಂದೇ ದಿನ ಎರಡು ಪ್ರತಿಷ್ಠಿತ ಪ್ರಶಸ್ತಿಗಳ ಗರಿ

73ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಆರ್ಸಿಎಂಎಸ್ ಬ್ಯಾಂಕ್ಗೆ ಒಂದೇ ದಿನ ಎರಡು ಪ್ರತಿಷ್ಠಿತ ಪ್ರಶಸ್ತಿಗಳ ಗರಿ

ಲೋಕದರ್ಶನ ವರದಿ 

            ಬೆಳಗಾವಿ 18 : ಬೆಳಗಾವಿಯ ರಾಣಿ ಚನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕ್ ನಿಯಮಿತ 73ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಒಂದೇ ದಿನ ರಾಜ್ಯ ಹಾಗೂ ವಿಭಾಗೀಯ ಮಟ್ಟದ ಎರಡು ಪ್ರತಿಷ್ಠಿತ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಬ್ಯಾಂಕ್ ರಾಜ್ಯ ಮಟ್ಟದಲ್ಲಿ ’ಕರ್ನಾಟಕದ ಅತ್ಯುತ್ತಮ ಮಹಿಳಾ ಸಹಕಾರಿ ಬ್ಯಾಂಕ್‌’ ಮತ್ತು ಬೆಳಗಾವಿ ವಿಭಾಗ ಮಟ್ಟದಲ್ಲಿ ’ಅತ್ಯುತ್ತಮ ಸಹಕಾರಿ ಬ್ಯಾಂಕ್‌’ ಪ್ರಶಸ್ತಿಗೆ ಭಾಜನವಾಗಿದೆ.

           ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಗೌರವ ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ವತಿಯಿಂದ ಆಯೋಜಿಸಲಾಗಿದ್ದ 73ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರಂಭದಲ್ಲಿ ಆರ್ಸಿಎಂಎಸ್ ಬ್ಯಾಂಕ್ಗೆ ’ರಾಜ್ಯದ ಅತ್ಯುತ್ತಮ ಮಹಿಳಾ ಸಹಕಾರಿ ಬ್ಯಾಂಕ್‌’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

              ಮಾನ್ಯ ಸಚಿವರು ಹಾಗೂ ಮಹಾಮಂಡಳದ ಅಧ್ಯಕ್ಷರಾದ ಎಚ್‌.ಕೆ. ಪಾಟೀಲ್ ಅವರು ಬ್ಯಾಂಕ್ನ ನಿರ್ದೇಶಕಿ ಸೀಮಾ ಪಿ. ಬಾಗೇವಾಡಿ ಹಾಗೂ ವೃತ್ತಿಪರ ನಿರ್ದೇಶಕಿ ಕುಮಾರಿ ಬೀನಾ ಜಿ. ಆಚಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಅಥಣಿಯಲ್ಲಿ ವಿಭಾಗೀಯ ಮಟ್ಟದ ಪ್ರಶಸ್ತಿ ಪ್ರದಾನ ಇದೇ ದಿನ ಅಥಣಿಯ ಕೃಷ್ಣಾ ಸಕ್ಕರೆ ಕಾರ್ಖಾನೆಯಲ್ಲಿ ನಡೆದ 73ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ (ಬೆಂಗಳೂರು),

             ಬೆಳಗಾವಿ ಜಿಲ್ಲಾ ಸಹಕಾರ ಯೂನಿಯನ್ ಮತ್ತು ಬಿಡಿಸಿಸಿ  ಬ್ಯಾಂಕ್ ಬೆಳಗಾವಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಆರ್ಸಿಎಂಎಸ್ ಬ್ಯಾಂಕ್ಗೆ ’ಅತ್ಯುತ್ತಮ ಸಹಕಾರಿ ಬ್ಯಾಂಕ್‌’ ಪ್ರಶಸ್ತಿ ನೀಡಲಾಯಿತು. ಕರ್ನಾಟಕ ರಾಜ್ಯದ ಮಾನ್ಯ ಸಹಕಾರ ಸಚಿವರಾದ ಲಕ್ಷ್ಮಣ ಸವದಿ ಅವರು ಬ್ಯಾಂಕ್ನ ನಿರ್ದೇಶಕಿ ಡಾ. ಪುಷ್ಪಾ ವಿ. ಮಮದಾಪುರ ಹಾಗೂ ಶಾಖಾ ವ್ಯವಸ್ಥಾಪಕಿ ವಿದ್ಯಾಶ್ರೀ ಮೈಗುರೆ ಅವರಿಗೆ ಪ್ರಶಸ್ತಿ ಹಸ್ತಾಂತರಿಸಿದರು.

            ಹೆಮ್ಮೆಯ ಮೈಲಿಗಲ್ಲು ಒಂದೇ ದಿನ ಎರಡು ಪ್ರತಿಷ್ಠಿತ ಸಹಕಾರಿ ಪ್ರಶಸ್ತಿಗಳನ್ನು ಪಡೆದಿರುವುದು ಆರ್ಸಿಎಂಎಸ್ ಬ್ಯಾಂಕ್ನ ಉತ್ತಮ ಆಡಳಿತ, ಗ್ರಾಹಕ ಸ್ನೇಹಿ ಸೇವೆ ಹಾಗೂ ಮಹಿಳಾ ಸಬಲೀಕರಣಕ್ಕೆ ನೀಡುತ್ತಿರುವ ಕೊಡುಗೆಗೆ ಸಾಕ್ಷಿಯಾಗಿದೆ. ಈ ಅವಳಿ ಸಾಧನೆಗಾಗಿ ಬ್ಯಾಂಕ್ನ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗಕ್ಕೆ ಸಹಕಾರಿ ಕ್ಷೇತ್ರದ ಗಣ್ಯರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. 


ಸುದ್ದಿ ಓದಿ