ಗದಗ

ವಿಶ್ವ ಮಧುಮೇಹ ದಿನಾಚರಣೆ : ಸಕ್ರಿಯ ಜೀವನದಿಂದ ನಿಯಂತ್ರಣ ಸಾಧ್ಯ -ಡಾ. ಗಡಾದ

ವಿಶ್ವ ಮಧುಮೇಹ ದಿನಾಚರಣೆ : ಸಕ್ರಿಯ ಜೀವನದಿಂದ ನಿಯಂತ್ರಣ  ಸಾಧ್ಯ -ಡಾ. ಗಡಾದ


           ಗದಗ 18:  ಆಹಾರ ಪದ್ಧತಿ ಮತ್ತು ಜೀವನ ಕ್ರಮದಲ್ಲಿನ ಬದಲಾವಣೆಗಳಿಂದಾಗಿ ಜೀವನಪರ್ಯಂತ ಕಾಡುವ ಮಧುಮೇಹದಂತಹ ಆರೋಗ್ಯ ಸಮಸ್ಯೆಗೆ ಇಂದು ಅನೇಕರು ಸಿಲುಕುತಿದ್ದಾರೆ. ಮಧುಮೇಹ ನಿಯಂತ್ರಣ ಮಾಡಿಕೊಳ್ಳದಿದ್ದರೆ ಕಿಡ್ನಿ ವೈಫಲ್ಯ ಹೃದಯ ದೃಷ್ಟಿ ಹಾಗೂ ನರಗಳ ಸಮಸ್ಯೆ ಸೇರಿದಂತೆ ಹಲವು ತೊಂದರೆ ಎದುರಾಗಲಿವೆ ಎಂದು ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಡಾ. ರಾಜೇಂದ್ರ ಎಸ್ ಗಡಾದ ಅವರು ಹೇಳಿದರು.  

            ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಮೀಕ್ಷಣ ಘಟಕ, ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಲಯನ್ಸ ಕ್ಲಬ್ ಗದಗ ಬೆಟಗೇರಿ ಹಾಗೂ ಐಎಂಎ ಗದಗ ಘಟಕ ಇವುಗಳ ಸಂಯುಕ್ತ ಆಶ್ರಯದಲ್ಲಿ ಗದಗಿನಲ್ಲಿ ಏರಿ​‍್ಡಸಲಾಗಿದ್ದ ವಿಶ್ವ ಮಧುಮೇಹ ದಿನಾಚರಣೆಯನ್ನು ಉದ್ದೇಶಿಸಿ ಮೇಲಿನಂತೆ ಮಾತನಾಡಿದ ಡಾ. ಗಡಾದವರು ನಿಯಮಿತ ಆರೋಗ್ಯ ತಪಾಸನೆಯ ಮೂಲಕ ಆರಂಭದಲ್ಲಿ ಮಧುಮೇಹ ಪತ್ತೆ ಮಾಡಿ ನಿಯಂತ್ರಣ ಮಾಡಿಕೊಳ್ಳಲು ಸಾಧ್ಯ ಎಂದರು.   

           ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಐಎಂಎ ಅಧ್ಯಕ್ಷರು ಹಾಗೂ ಖ್ಯಾತ ಮಕ್ಕಳ ತಜ್ಞರಾದ ಡಾ. ಈರಣ್ಣ ಹಳೆಮನೆಯವರು ಮಾತನಾಡಿ ಮಧುಮೇಹ ಒಂದು ಇತ್ತೀಚಿಗೆ ಸರ್ವೇಸಾಮಾನ್ಯವಾಗುತ್ತಿರುವ ರೋಗವಾಗಿದ್ದು ಅತಿಯಾದ ಮೂತ್ರ ವಿಸರ್ಜನೆ ಬಯಕೆ ಹಸಿವು ದೃಷ್ಟಿ ಮಂಜಾಗುವುದು ತೂಕ ಇಳಿಕೆಯಾಗುವುದು ಬೆವರು ಸುಸ್ತು ಗಾಯ ಆಗಲಿ ಬೇಗ ವಾಸಿಯಾಗದಿರುವುದು, ಕೈ ಕಾಲು ಜೋಮು ಹಿಡಿಯುವುದು ಇತ್ಯಾದಿಗಳು ಮಧುಮೇಹದ ಲಕ್ಷಣಗಳಾಗಿದ್ದರೆ ಇನ್ನು ಶೇಕಡ 50ರಷ್ಟು ಜನರಲ್ಲಿ ಇಂಥ ಲಕ್ಷಣಗಳು ಕಾಣಿಸುವುದೇ ಇಲ್ಲ. ಹೀಗಾಗಿ ಈ ರೋಗದ ಬಗ್ಗೆ ಜಾಗೃತಿ ಅತ್ಯವಶ್ಯ ಎಂದರು.   


ಸುದ್ದಿ ಓದಿ