ಪ್ರೊಬೇಷನರಿ ತಹಶೀಲ್ದಾರ್ ಆಗಿ ರೋಹಿತ್ ಸಿಂಗ್ ಅಧಿಕಾರ ಸ್ವೀಕಾರ
ರಾಯಬಾಗ 18: ತಾಲೂಕಾ ಪ್ರೋಬೆಷನರಿ ತಹಶೀಲ್ದಾರರಾಗಿ ಐಎಎಸ್ ಅಧಿಕಾರಿ ರೋಹಿತ್ ಸಿಂಗ್ ಅಧಿಕಾರ ಸ್ವೀಕರಿಸಿದ್ದಾರೆ. ಮುಂದಿನ 10 ದಿನಗಳ ಕಾಲ ತಾಲೂಕಿನಲ್ಲಿ ಪ್ರೋಬೆಷನರ್ ತಹಶೀಲ್ದಾರರಾಗಿ ಕರ್ತವ್ಯ ನಿರ್ವಹಿಸಲಿರುವ ಅವರು ತಾಲೂಕು ಆಡಳಿತ ಕಾರ್ಯ ವೈಖರಿ, ಕಂದಾಯ ಇಲಾಖೆಯ ಚಟುವಟಿಕೆಗಳು ಹಾಗೂ ಸಾರ್ವಜನಿಕರ ಸಮಸ್ಯೆಗಳ ಕುರಿತು ಪ್ರಾಯೋಗಿಕವಾಗಿ ಅನುಭವ ಪಡೆಯಲಿದ್ದಾರೆ.