ರಾಯಬಾಗ

ರೈಲ್ವೆ ಕಾಮಗಾರಿಗಳ ತ್ವರಿತ ಪೂರ್ಣತೆಗೆ ಯುವ ಮುಖಂಡ ಹಾಜಿ ಸೋಯಲ್ ಮುಲ್ಲಾ ನೇಮಕ

ರೈಲ್ವೆ ಕಾಮಗಾರಿಗಳ ತ್ವರಿತ ಪೂರ್ಣತೆಗೆ ಯುವ ಮುಖಂಡ ಹಾಜಿ ಸೋಯಲ್ ಮುಲ್ಲಾ ನೇಮಕ


          ರಾಯಬಾಗ  13: ಚಿಕ್ಕೋಡಿ ಲೋಕಸಭಾ ಸಂಸದರಾದ ಕು. ಪ್ರಿಯಾಂಕಾ ಜಾರಕಿಹೊಳಿಯವರ ಶಿಫಾರಸ್ಸಿನ ಮೇರೆಗೆ ಪಟ್ಟಣದ ಯುವ ಮುಖಂಡ ಹಾಜಿ ಸೋಯಲ ಮುಲ್ಲಾ ಅವರನ್ನು ನೈರುತ್ಯ ರೈಲ್ವೆ ಹುಬ್ಬಳ್ಳಿ ವಲಯಕ್ಕೆ ಸಲಹಾ ಸಮಿತಿ ಸದಸ್ಯರನ್ನಾಗಿ ಕೇಂದ್ರ ರೈಲ್ವೆ ಸಚಿವ ಅಸ್ವಿನ್ ವೈಷ್ಣವ್ ಹಾಗೂ ರಾಜ್ಯ ಸಚಿವ ವಿ.ಸೋಮಣ್ಣ ನೇಮಕ ಮಾಡಿದ್ದಾರೆ.  ಈ ಭಾಗದಲ್ಲಿ ರೇಲ್ವೆ ಕಾಮಗಾರಿಗಳು ತ್ವರಿತ ಗತಿಯಲ್ಲಿ ಮುಗಿಯಬೇಕು,

           ಮಂದಗತಿಯಲ್ಲಿ ಸಾಗುತ್ತಿರುವ ಕುಡಚಿ-ಬಾಗಲಕೋಟ ಕಾಮಗಾರಿಯನ್ನು ಬೇಗನೇ ಮುಗಿಸುವುದು, ಅಪೂರ್ಣವಾಗಿರುವ ಮಿರಜ-ಬೆಳಗಾವಿ ರೇಲ್ವೆ ವಿದ್ಯುತ್ ಕಾಮಗಾರಿಯನ್ನು ಪೂರ್ಣಗೊಳಿಸುವುದು. ಹಾಗೂ ಕೆಲವು ರೈಲುಗಳು ರಾಯಬಾಗ ನಿಲ್ದಾಣದಲ್ಲಿ ನಿಲುಗಡೆಯಾಗಬೇಕಾಗಿರುವುದರಿಂದ ಮುಲ್ಲಾ ಅವರು ನೇಮಕವಾಗಿರುವುದರಿಂದ ಈ ಕಾಮಗಾರಿಗಳು ಮುಗಿದು ಜನರಿಗೆ ಸೇವೆ ತಲುಪುತ್ತವೆ ಎಂಬುದು ಈ ಭಾಗದ ಸಾರ್ವಜನಿಕರ ಆಶಯವಾಗಿದೆ. 


ಸುದ್ದಿ ಓದಿ