ರಾಯಬಾಗ

ರೈತರ ಸಂಘದಿಂದ ಪ್ರತಿಭಟನೆ: ರಾಯಬಾಗದಲ್ಲಿ ರಸ್ತೆ ತಡೆ

ರೈತರ ಸಂಘದಿಂದ ಪ್ರತಿಭಟನೆ: ರಾಯಬಾಗದಲ್ಲಿ ರಸ್ತೆ ತಡೆ



          ರಾಯಬಾಗ 05: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಹಾಗೂ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ಬಂಧನ ಖಂಡಿಸಿ ಗುರುವಾರ ಮಧ್ಯಾಹ್ನ ರಾಯಬಾಗ ಪಟ್ಟಣ ಹಾಗೂ ತಾಲೂಕಿನ ವಿವಿಧ ಗ್ರಾಮಗಳಲ್ಲಿ ರೈತರು ರಸ್ತೆ ಬಂದ ಮಾಡಿ, ಪ್ರತಿಭಟನೆ ನಡೆಸಿದರು. ರಾಯಬಾಗ ಪಟ್ಟಣದ ಅಭಾಜಿ ವೃತ್ತದಲ್ಲಿ (ಝೇಂಡಾ ಕಟ್ಟೆ ಹತ್ತಿರ) ರಸ್ತೆ ಬಂದ ಮಾಡಿ, ಟೈಯರಿಗೆ ಬೆಂಕಿ ಹಚ್ಚಿ ರೈತರು ಆಕ್ರೋಶ ವ್ಯಕ್ತಪಡಿಸಿ, ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ವಿರುದ್ಧ ಘೋಷಣೆ ಕೂಗಿದರು.

       ಪಟ್ಟಣದ ಅಂಗಡಿಗಳನ್ನು ಬಂದ ಮಾಡಿದರು. ಬಂಧಿತರನ್ನು ಬಿಡುಗಡೆ ಮಾಡುವವರೆಗೆ ತಾಲೂಕನ್ನು ಸಂಪೂರ್ಣ ಬಂದ ಮಾಡಿ ಪ್ರತಿಭಟನೆ ನಡೆಸುವುದಾಗಿ ರೈತ ಸಂಘದ ಮುಖಂಡರು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ರೈತರನ್ನು ಪೊಲೀಸರು ಕೆಲ ಹೊತ್ತು ಬಂಧಿಸಿ, ನಂತರ ಬಿಡುಗಡೆ ಮಾಡಿದರು. ಪಟ್ಟಣ ಬಂದ್ ಹಿನ್ನೆಲೆಯಲ್ಲಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು.               ಪರ ಊರುಗಳಿಗೆ ಹೋಗುವ ಪ್ರಯಾಣಿಕರು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಊರುಗಳಿಗೆ ತೆರಳಲು ಪರದಾಡುವ ಪರಿಸ್ಥಿತಿ ಉಂಟಾಯಿತು. ಪ್ರತಿಭಟನೆಯಲ್ಲಿ ಬೀರ​‍್ಪ ವಂಟಮೂರೆ, ರಮೇಶ ಕುಂಬಾರ, ಚೇತನ ನಾಯಿಕ, ಸಂಜು ಬಾವಚೆ, ಅಶೋಕ ಅಂಗಡಿ, ಲಕ್ಷ್ಮಣ ಬಂತೆ, ಅಜೀತ ಪೂಜಾರಿ ಸೇರಿ ಅನೇಕ ರೈತರು ಪಾಲ್ಗೊಂಡಿದ್ದರು.  


ಸುದ್ದಿ ಓದಿ