ರಾಯಬಾಗ

ರಾಯಬಾಗ: ಕೆಎಲ್‌ಇ ಸಂಸ್ಥೆಯ 111ನೇ ಸಂಸ್ಥಾಪನಾ ದಿನಾಚರಣೆ

ರಾಯಬಾಗ: ಕೆಎಲ್‌ಇ ಸಂಸ್ಥೆಯ 111ನೇ ಸಂಸ್ಥಾಪನಾ ದಿನಾಚರಣೆ



ರಾಯಬಾಗ 16 : ಸತ್ಯ, ಪ್ರೇಮ  ಸೇವೆ, ಸ್ವಾರ್ಥ, ತ್ಯಾಗ ಗುಣಗಳಿಂದ ಅಜರಾಮರವಾಗಿರುವ  ಸಂಸ್ಥೆಯ ಸಂಸ್ಥಾಪಕರಾದ ಸಪ್ತರ್ಷಿಗಳನ್ನು ಸ್ಮರಿಸುವಂತಹ ಸುದಿನದಂದು ವಿದ್ಯಾರ್ಥಿ ಅವರ ಆದರ್ಶ ಜೀವನ  ಅಳವಡಿಸಿಕೊಳ್ಳಬೇಕೆಂದು ಮಹಾಲಿಂಗಪುರ ಕೆಎಲ್‌ಇ ಸಿ.ಪಿ ಕಲಾ ಮತ್ತು ಡಿಡಿಎಸ್ ವಾಣಿಜ್ಯ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಡಾ. ಬಿ.ಎಂ ಪಾಟೀಲ ಹೇಳಿದರು. ಶುಕ್ರವಾರ ಪಟ್ಟಣದ ಕೆಎಲ್‌ಇ ಸಂಸ್ಥೆಯ ಮಲಗೌಡ ಪಾಟೀಲ ಪದವಿ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಕೆಎಲ್‌ಇ ಸಂಸ್ಥೆಯ 111ನೇ ಸಂಸ್ಥಾಪನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಿಟ್ಟು ಹೋಗುವುದಕ್ಕಿಂತ ಕೊಟ್ಟು ಹೋಗುವುದು ಎಂಬ ಸಾತ್ವಿಕ ಗುಣವನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕೆಂದರು. ಪ್ರಾಚಾರ್ಯ ಡಾ. ಆರ್‌. ಕೆ. ಪಾಟೀಲ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಸ್ಥಳೀಯ ಆಡಳಿತ ಮಂಡಳಿಯ ಸದಸ್ಯರಾದ ಎಂ.ಎಂ. ನಿಶಾನದಾರ, ಡಿ. ಎಲ್‌. ಮಿರ್ಜೆ, ವಿ.ಪಿ. ಪಾಟೀಲ, ಎಲ್‌. ಬಿ. ಪಾಟೀಲ ಹಾಗೂ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಇದ್ದರು.ವಿ.ಎ.ಮಂಡಕಿ ಸ್ವಾಗತಿಸಿದರು, ಎಸ್‌.ಬಿ.ಗಸ್ತಿ ನಿರೂಪಿಸಿದರು, ಎ.ಜೆ.ಅಂಜಿ ವಂದಿಸಿದರು. 


ಸುದ್ದಿ ಓದಿ