ದುರ್ಗೇಶ ಗೋಣೇಮ್ಮನವರ ನೇಮಕಕ್ಕೆ ಸಮಾಜದ ಹರ್ಷ; ಅಭಿನಂದನೆ
ಲೋಕದರ್ಶನ ವರದಿ
ಹಾವೇರಿ:ಕಾಂಗ್ರೆಸ್ ಪಕ್ಷದ ಮುಖಂಡರು,ಸಮಾಜದ ಹಿರಿಯರು ಹಾಗೂ ಬ್ಯಾಡಗಿ ಪುರಸಭೆ ಮಾಜಿಸದಸ್ಯರಾದ ದುರಗೇಶ ಗೋಣೆಮ್ಮನವರ ಅವರನ್ನು ಕರ್ನಾಟಕ ಆದಿ ಜಾಂಬವ ಅಭಿವೃದ್ದಿ ನಿಗಮದ ರಾಜ್ಯ ನಾಮ ನಿರ್ದೇಶನ ಸದಸ್ಯರನ್ನಾಗಿ ನೇಮಕ ಮಾಡಿದ ಸರ್ಕಾರಕ್ಕೆ ಹಾಗೂ ನೇಮಕ ಸಹಕಾರ ನೀಡಿದ ಬ್ಯಾಡಗಿ ಶಾಸಕರಾದ ಬಸವರಾಜ ಶಿವಣ್ಣನವರ ಅವರಿಗೆ ಸಮಾಜದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕರು ಹಾಗೂ ಅಹಿಂದ ಸಂಘಟನೆಯ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷರಾದ ಉಡಚಪ್ಪ ಮಾಳಗಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ,ಅಹಿಂದ ಸಂಘಟನೆ ಹಾಗೂ ಸಮಾಜದ ವತಿಯಿಂದ ಕರ್ನಾಟಕ ಆದಿ ಜಾಂಬವ ಅಭಿವೃದ್ದಿ ನಿಗಮದ ರಾಜ್ಯ ನಾಮ ನಿರ್ದೇಶನ ಸದಸ್ಯರಾಗಿ ನೇಮಕವಾದ ದುರಗೇಶ ಗೋಣೆಮ್ಮನವರ ಅವರ ಗೌರವ ಸನ್ಮಾನ ಕಾರ್ಯಕ್ರಮದ ನೇತೃತ್ವವಹಿಸಿ ಅವರು ಶುಭ ಕೋರಿ ಮಾತನಾಡಿದರು.
ಸಮಾಜದ ನಾಯಕರಾದ ದುರಗೇಶ ಗೋಣೆಮ್ಮನವರ ಅವರು ಬ್ಯಾಡಗಿ ಪುರಸಭೆಗೆ ಎರಡು ಬಾರಿ ಸದಸ್ಯರಾಗಿ,ಆಶ್ರಯ ಸಮಿತಿ ಸದಸ್ಯರಾಗಿ ಉತ್ತಮ ಕೆಲಸ ಮಾಡಿದ್ದು,ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಕರ್ನಾಟಕ ಆದಿ ಜಾಂಬವ ಅಭಿವೃದ್ದಿ ನಿಗಮದ ರಾಜ್ಯ ನಾಮ ನಿರ್ದೇಶನ ಸದಸ್ಯರಾಗಿ ನೇಮಕವಾಗಿದ್ದು ಸಂತೋಷಕರ.
ನೇಮಕವಾಗಲು ಹಿರಿಯ ಶಾಸಕರಾದ ಬಸವರಾಜ ಶಿವಣ್ಣನವರ ಅವರ ಶ್ರಮವಿದ್ದು,ಸಮಾಜದ ವತಿಯಿಂದ ಅವರಿಗೆ ಧನ್ಯವಾದಗಳನ್ನು ಸಲ್ಲಿಸಲಾಗುವುದು. ದುರಗೇಶ ಗೋಣೆಮ್ಮನವರ ಅವರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಕೆಲಸ ಮಾಡಲಿ ಎಂದು ಉಡಚಪ್ಪ ಮಾಳಗಿ ಶುಭ ಕೋರಿದರು.
ನೂತನ ನಾಮನಿರ್ದೇಶಕರಾದ ದುರಗೇಶ ಗೋಣೆಮ್ಮನವರ ಮಾತನಾಡಿ ನೇಮಕ ಮಾಡಿದ ಸರ್ಕಾರಕ್ಕೆ ಹಾಗೂ ಸಹಕಾರ ನೀಡಿ ಎಲ್ಲಾ ಶಾಸಕರಿಗೆ ಅಭಿನಂದನೆಗಳು.ತಮ್ಮೆಲ್ಲರ ಸೇವೆ ಮಾಡಲು ಅವಕಾಶ ನೀಡಿದಂತಾಗಿದೆ.ತಮ್ಮೆಲ್ಲರ ಸಹಕಾರ ಸದಾ ಇರಲಿ ಎಂದರು.
ಈ ಸಂದರ್ಭದಲ್ಲಿ ಡಿಎಸ್ಎಸ್ ಜಿಲ್ಲಾ ಸಂಚಾಲಕರಾದ ಮಾಲತೇಶ ಯಲ್ಲಾಪುರ,ಕಲ್ಯಾಣ ಸಮಿತಿ ಜಿಲ್ಲಾಧ್ಯಕ್ಷರಾದ ಮಂಜಪ್ಪ ಮರೋಳ ಮುಖಂಡರಾದ ಹೊನ್ನಪ್ಪ ತಗಡಿನಮನಿ,ಅಶೋಕ ಮರೆಣ್ಣನವರ,ಮಹೇಶ ಮಾಳಗಿ,ಪರಮೇಶಪ್ಪ ದೇಸಳ್ಳಿ,ಸುನೀಲ ಬೇಟಗೇರಿ,ಬಸಣ್ಣ ಮುಗಳಿ,ಮಲ್ಲೇಶ ಕಡಕೋಳ,ಬಸವರಾಜ ತಡಸದ,ಜಗದೀಶ ಹರಿಜನ,ಯಲ್ಲಮ್ಮ ಮರೇಮ್ಮನವರ,ನೀಲಮ್ಮ ಪೂಜಾರ,ಪುಟ್ಟಪ್ಪ ಕುರಿ,
ಭೀಮಣ್ಣ ಯಲ್ಲಾಪುರ,ಪರಶುರಾಮ ಮುಳಗುಂದ,ಸಂತೋಷ ಮಾಳಗಿ,ಗುಡ್ಡಪ್ಪ ಚಿಕ್ಕಪ್ಪನವರ,ನಾಗರಾಜ ಬಾಲಣ್ಣನವರ,ಪರಶುರಾಮ ಗಂಗಮ್ಮನವರ,ಆನಂದ ಮುರೇಡೆಪ್ಪನವರ,ನಿಂಗಪ್ಪ ಹೊಸಳ್ಳಿ,ಕವಿತಾ ಮರೆಮ್ಮನವರ,ಮಹೇಶಪ್ಪ ಹರಿಜನ,ಸತೀಶ ದೊಡ್ಡಮನಿ,ಬಸವಣ್ಣೆಪ್ಪ ಅರಳಿಹಳ್ಳಿ,ಮಹೇಶಪ್ಪ ಹರಿಜನ ಸೇರಿದಂತೆ ಅನೇಕರಿದ್ದರು.