ಹಾವೇರಿ

ಹಾವೇರಿ.ಮನೆಗೊಂದು ಗ್ರಂಥಾಲಯ ಅನುಷ್ಠಾನ ಅಭಿಯಾನ : ಎಸ್‌ಎಫ್‌ಐ ್ಘ ಡಿವೈಎಫ್‌ಐ ಕಚೇರಿಯಲ್ಲಿ ಬಾಲ ಸಂಘಂ ಮಕ್ಕಳ ಗ್ರಂಥಾಲಯ ಉದ್ಘಾಟನೆ

ಹಾವೇರಿ.ಮನೆಗೊಂದು ಗ್ರಂಥಾಲಯ ಅನುಷ್ಠಾನ ಅಭಿಯಾನ : ಎಸ್‌ಎಫ್‌ಐ ್ಘ ಡಿವೈಎಫ್‌ಐ ಕಚೇರಿಯಲ್ಲಿ ಬಾಲ ಸಂಘಂ ಮಕ್ಕಳ ಗ್ರಂಥಾಲಯ ಉದ್ಘಾಟನೆ
Haveri – 'A Library in Every Home' Campaign: 'Bala Sangham' Children's Library Inaugurated at SFI-DY

            ಹಾವೇರಿ  14: ವೃತ್ತಿ ಜೀವನದ ಜೊತೆಗೆ ಓದುವ ಹವ್ಯಾಸ ಹೆಚ್ಚಿಸಿಕೊಳ್ಳಲು ಮನೆಗೊಂದು ಗ್ರಂಥಾಲಯ ಅತ್ಯಂತ ಸಹಕಾರಿಯಾಗಿದೆ ಎಂದು ಕಲಾವಿದೆ ನೇತ್ರಾ ಅಂಗಡಿ ಹೇಳಿದರು.ನಗರದ ಶಿವಾಜಿನಗರ 2ನೇ ಕ್ರಾಸ್ ನಲ್ಲಿರುವ ಎಸ್‌ಎಫ್‌ಐ ಡಿವೈಎಫ್‌ಐ ಕಚೇರಿಯಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಜಿಲ್ಲಾ ಜಾಗೃತಿ ಸಮಿತಿ ಸಹಾಯಹಸ್ತದಿಂದ ಪುಸ್ತಕಗಳನ್ನು ಹಸ್ತಾಂತರ ಮಾಡುವ ಮೂಲಕ ಬಾಲ ಸಂಘಂ ಮಕ್ಕಳ ಗ್ರಂಥಾಲಯವನ್ನು ಉದ್ಘಾಟನೆ ಮಾಡಿ ಮಾತನಾಡಿದರು.

            ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಹಿರಿಯ ಸಾಹಿತಿ ಸತೀಶ್ ಕುಲಕರ್ಣಿ ಮಾತನಾಡಿ, ಪ್ರಯೋಗಶೀಲ ಮನೋಭಾವ ಹೊಂದಿದ್ದ ವಿದ್ಯಾರ್ಥಿ ಯುವಜನ ಹೋರಾಟದ ಸಂಗಾತಿಗಳು ಅಭ್ಯಾಸ ಹೋರಾಟವನ್ನು ಮೈಗೂಡಿಸಿಕೊಂಡು ಜೀವನ ರೂಪಿಸಿಕೊಂಡು ಸಮಾಜದಲ್ಲಿ ಮಾದರಿಯಾಗಿದ್ದಾರೆ. ಬಾಲ ಸಂಘಂ ಹೆಸರಿನ ಸಂಘ ರಚಿಸಿ ಮಕ್ಕಳಿಗೆ ಹಾಡು, ಕವಿತೆ, ಕವನ, ಚಿತ್ರಕಲೆ ನಾಟಕ, ಓದುವ ಹವ್ಯಾಸ ಬೆಳೆಸುತ್ತಿದ್ದಾರೆ. ಇದಕ್ಕೆ ಇನ್ನಷ್ಟು ಪುಷ್ಟಿಗಾಗಿ ಪುಸ್ತಕ ಪ್ರಾಧಿಕಾರ ಜಿಲ್ಲಾ ಜಾಗೃತಿ ಸಮಿತಿ ವತಿಯಿಂದ ಮಕ್ಕಳ ದಿನಾಚರಣೆ ವಿಶೇಷ ಗ್ರಂಥಾಲಯಕ್ಕೆ ಪುಸ್ತಕಗಳನ್ನು ವಿತರಣೆ ಮಾಡುತ್ತಿದ್ದೇವೆ ಎಂದರು. 

              ಅಧ್ಯಕ್ಷತೆ ವಹಿಸಿದ ಡಿವೈಎಫ್‌ಐ ರಾಷ್ಟ್ರೀಯ ಮುಖಂಡರಾದ ಬಸವರಾಜ ಪೂಜಾರ ಮಾತನಾಡಿ, ಇಡೀ ಜಿಲ್ಲೆಯಲ್ಲಿಯೇ ಕನ್ನಡ ಪುಸ್ತಕ ಪ್ರಾಧಿಕಾರ ಜಿಲ್ಲಾ ಜಾಗೃತ ಸಮಿತಿಯು ಬಹಳಷ್ಟು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ. ಪುಸ್ತಕಗಳನ್ನು ಎಲ್ಲಿ ತಲುಪಿಸಬೇಕು ಅಲ್ಲಿಗೆ ಈ ಪುಸ್ತಕ ಅಭಿಯಾನ ತಲುಪುತ್ತಿದೆ. ಸಮಿತಿ ಒಂದು ತಂಡವಾಗಿ ಕಾರ್ಯನಿರ್ವಹಿಸುತ್ತಿರುವ ಹೆಮ್ಮೆಯ ಸಂಗತಿ ಹೀಗೆ ನಿರಂತರವಾಗಿ ನಡೆಯಲಿ ನಾವು ನಿಮ್ಮೊಂದಿಗೆ ಕೈ ಜೋಡಿಸುತ್ತೇವೆ ಎಂದರು. 

              ಕನ್ನಡ ಪುಸ್ತಕ ಪ್ರಾಧಿಕಾರ ಜಿಲ್ಲಾ ಜಾಗೃತ ಸಮಿತಿ ವತಿಯಿಂದ ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಅವರಿಗೆ "ಮನೆಗೊಂದು ಗ್ರಂಥಾಲಯ" ಅಭಿನಂದನಾ ಪತ್ರ ವಿತರಣೆ ಮಾಡಿ ಸನ್ಮಾನಿಸಿದರು. ಪ್ರಾಸ್ತಾವಿಕವಾಗಿ ಕನ್ನಡ ಪುಸ್ತಕ ಪ್ರಾಧಿಕಾರ ಜಿಲ್ಲಾ ಜಾಗೃತ ಸಮಿತಿ ಸಂಚಾಲಕರಾದ ಎಸ್‌.ಆರ್ ಹಿರೇಮಠ, ಕಾರ್ಯಕ್ರಮ ಉದ್ದೇಶಿಸಿ ಡಿವೈಎಫ್‌ಐ ಜಿಲ್ಲಾ ಖಜಾಂಚಿ ರೇಣುಕಾ ಕಹಾರ ಮಾತನಾಡಿದರು.

               ಈ ಸಂದರ್ಭದಲ್ಲಿ ಪುಸ್ತಕ ಜಾಗೃತಿ ಸಮಿತಿಯ ವಿರೂಪಾಕ್ಷಪ್ಪ ವಿರೂಪಾಕ್ಷಪ್ಪ ಹಾವನೂರು, ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಖಲಂದರ್ ಅಲ್ಲಿಗೌಡ್ರು, ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಅರುಣ್ ಕುಮಾರ್ ನಗವತ, ಜಿಲ್ಲಾ ಉಪಾಧ್ಯಕ್ಷ ಶಂಭುಲಿಂಗ ಸವದತ್ತಿ, ಎಸ್‌ಎಫ್‌ಐ ಡಿವೈಎಫ್‌ಐ ಮುಖಂಡರಾದ ಪರಶುರಾಮ ಎಸ್, ಕಾಂತೇಶ್ ಹಳ್ಳೇರ, ಕುಮಾರ ಹಡಪದ, ಹನುಮಂತಗೌಡ,  ಸ್ವಪ್ನ ಕಬ್ಬೇರ್, ಲೋಕೇಶ್ ಎ, ಬಾಲ ಸಂಘಂನ ಧನುಷ್ ದೊಡ್ಡಮನಿ, ಮೈನುದೀನ್ ಇಲಿಬುಡ್ಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ