ಹಾವೇರಿ

ನೆಹರು ಜನ್ಮದಿನದ ಅಂಗವಾಗಿ ಅರ್ಥಪೂರ್ಣ ಮಕ್ಕಳ ದಿನಾಚರಣೆ

ನೆಹರು ಜನ್ಮದಿನದ ಅಂಗವಾಗಿ ಅರ್ಥಪೂರ್ಣ ಮಕ್ಕಳ ದಿನಾಚರಣೆ


               ಸವಣೂರು 15 : ತಾಲೂಕಿನ ಕಾರಡಗಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ರವರ ಜನ್ಮ ದಿನದಂದು ಮಕ್ಕಳ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು . ಹಿಂದಿನ ದಿನದಂದು ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರಿ​‍್ಡಸಲಾಗಿತ್ತು . ಬಹುಮಾನ ವಿತರಿಸಿ ಮಾತನಾಡಿದ ಗುರುಮಾತೆ ಮೇಘಾ.ಡಿ.ಹರ್ತಿ ಮಕ್ಕಳು ಈ ದೇಶದ ನಿಜವಾದ ಸಂಪತ್ತು ಮತ್ತು ಭವಿಷ್ಯದ ರೂವಾರಿಗಳು.

              ಮಗುವಿನ ಮನಸ್ಸು ಕೇವಲ ಒಂದು ಖಾಲಿ ಕಾಗದದಂತೆ ಅಥವಾ ಮೃದುವಾದ ಮಣ್ಣಿನಂತೆ; ನಾವು ಅದಕ್ಕೆ ಯಾವ ರೂಪ ಕೊಡುತ್ತೇವೆಯೋ ಅದೇ ರೀತಿ ಅದು ರೂಪುಗೊಳ್ಳುತ್ತದೆ. ಕೇವಲ ಪಠ್ಯಪುಸ್ತಕದ ಜ್ಞಾನವನ್ನು ನೀಡುವುದು ಮಾತ್ರವಲ್ಲದೆ, ಅವರಲ್ಲಿ ಮಾನವೀಯ ಮೌಲ್ಯಗಳು, ಕರುಣೆ, ಸೃಜನಶೀಲತೆ ಮತ್ತು ಸಹಾನುಭೂತಿಯನ್ನು ಬೆಳೆಸುವುದು ನಮ್ಮ ಮುಖ್ಯ ಜವಾಬ್ದಾರಿಯಾಗಿದೆ.

              ನಿಮ್ಮಲ್ಲಿ ಪ್ರತಿಯೊಬ್ಬರಲ್ಲೂ ಅನನ್ಯವಾದ ಪ್ರತಿಭೆ ಇದೆ. ಸೋಲಿಗೆ ಹೆದರಬೇಡಿ, ತಪ್ಪುಗಳಿಂದ ಕಲಿಯಿರಿ. ದೊಡ್ಡ ಕನಸುಗಳನ್ನು ಕಾಣಿರಿ ಮತ್ತು ಆ ಕನಸುಗಳನ್ನು ಈಡೇರಿಸಿಕೊಳ್ಳಲು ಕಠಿಣ ಪರಿಶ್ರಮಪಡಬೇಕು. ನಿಮ್ಮ ಗುರಿ ತಲುಪಲು ನಾವೆಂದಿಗೂ ನಿಮ್ಮೊಂದಿಗೆ ಇರುತ್ತೇವೆ.ಇಂದಿನ ಈ ಸುಂದರ ದಿನದಂದು ನಿಮ್ಮೆಲ್ಲರ ಮುಖದಲ್ಲಿ ಮಂದಹಾಸ ಸದಾ ಹೀಗೆಯೇ ಇರಲಿ ಎಂದರು.                      ಕಾರ್ಯಕ್ರಮದಲ್ಲಿ ಶಾಲಾ ಉಪಪ್ರಧಾನ ಮಂತ್ರಿ ವಿವೇಕಾನಂದ.ಮಂಡಿಗನಾಳ ಅಧ್ಯಕ್ಷ ತೆ ವಹಿಸಿದ್ದರು.ಶಾಲಾ ಸಂಸತ್ತಿನ ಕಾರ್ತಿಕ,ಡಿಯೋಜ,ಪ್ರಶಾಂತ,ಹರೀಶ,ಸಹನಾ,ಲಕ್ಷ್ಮೀ ,ರಾಜೇಶ್ವರಿ.ಬಡಿಗೇರ,bಈರಮ್ಮ,ಸುಶ್ಮಿತಾ, ರಾಜೇಶ್ವರಿ ತಳವಾರ  ಮುಖ್ಯ ಶಿಕ್ಷಕ ಎಫ್ ಆರ್ ಹಿರೇಮಠ ,ಶಿಕ್ಷಕರಾದ ಜಿ.ಎನ್‌.ಪಾಟೀಲ, ಎ.ವ್ಹಿ.ಬನ್ನಿಕಲ್,   ಎಮ್‌.ಎಚ್‌.ಮಾದರ, ಎಸ್‌.ಬಿ.ದೊಡ್ಡಮನಿ,         ಯಶೋಧ.ಆರ್‌.ಎಚ್ , ಮೇಘಾ.ಡಿ.ಹರ್ತಿ, ಮಹಾದೇವಿ.ಸವಣೂರ, ಅನ್ನಪೂರ್ಣ ತೊಂಡೂರ ಹಾಗೂ ಅಡುಗೆ ಸಿಬ್ಬಂದಿ ಮತ್ತು ಶಾಲಾ ಮಕ್ಕಳು ಹಾಜರಿದ್ದರು. 


ಸುದ್ದಿ ಓದಿ