ಅಥಣಿ

ಶ್ರೀ ಮುರುಘೇಂದ್ರ ಕೋ ಆಪ್ ಸೊಸೈಟಿಯ ನೂತನ ಕಟ್ಟಡ ಉದ್ಘಾಟಿಸಿದ ಸಹಕಾರ ಸಚಿವ ಲಕ್ಷ್ಮಣ ಸವದಿ

ಶ್ರೀ ಮುರುಘೇಂದ್ರ ಕೋ ಆಪ್ ಸೊಸೈಟಿಯ ನೂತನ ಕಟ್ಟಡ ಉದ್ಘಾಟಿಸಿದ ಸಹಕಾರ ಸಚಿವ ಲಕ್ಷ್ಮಣ ಸವದಿ
Cooperation Minister Laxman Savadi inaugurated the new building of the Sri Murughendra Co-operative

          ಅಥಣಿ 16: ಅಥಣಿ ಶಿವಯೋಗಿಗಳ ಹೆಸರಿನಿಂದ ಪ್ರಾರಂಭಗೊಂಡ ಶ್ರೀ ಮುರುಘೇಂದ್ರ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸೈಟಿಯು ಹೆಮ್ಮರವಾಗಿ ಬೆಳೆಯಲಿ ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ಶುಭ ಹಾರೈಸಿದರು. ಅವರು ಶ್ರೀ ಮುರುಘೇಂದ್ರ ಅರ್ಬನ್ ಕೋ.ಆಪ್ ಕ್ರೆಡಿಟ್ ಸೊಸೈಟಿಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡುತ್ತಿದ್ದರು.

        ಅಥಣಿಯಲ್ಲಿ ಸಹಕಾರಿ ಕ್ಷೇತ್ರ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಇದರ ಪರಿಣಾಮ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಆರ್ಥಿಕ ಸಹಾಯ, ಸಹಕಾರ ದೊರಕುತ್ತಿದೆ ಎಂದ ಅವರು 25 ನೇ ವರ್ಷಗಳ ಯಶಸ್ವಿಯಾಗಿ ಮುನ್ನಡೆದುಕೊಂಡು ಬಂದ ಶ್ರೀ ಮುರುಘೇಂದ್ರ ಸಹಕಾರಿ ಸಂಘ ತನ್ನ ಸೇವೆಗಳನ್ನು ಇನ್ನಷ್ಟು ವಿಸ್ತರಿಸಲಿ ಎಂದರು.

              ಸಹಕಾರಿ ಧುರೀಣ ಸಂತೋಷ ಸಾವಡಕರ ಮಾತನಾಡಿ, ನಮ್ಮ ಹಿರಿಯರು ಸ್ಥಾಪಿಸಿ ಇಲ್ಲಿಯವರೆಗೂ ಮುನ್ನಡೆಸಿಕೊಂಡು ಬಂದ ಶ್ರೀ ಮುರುಘೇಂದ್ರ ಕೋ ಆಪ್ ಕ್ರೆಡಿಟ್ ಸೊಸೈಟಿಯು ಇಂದು ಸುಸಜ್ಜಿತ ಸ್ವಂತ ಕಟ್ಟಡ ಹೊಂದಿದ್ದು, ಸಹಕಾರ ಸಚಿವ ಲಕ್ಷ್ಮಣ ಸವದಿ ನೂತನ ಕಟ್ಟಡವನ್ನು ಲೋಕಾರೆ​‍್ಣಗೊಳಿಸಿರುವುದು ನಮಗೆಲ್ಲ ಹೆಮ್ಮೆಯ ವಿಷಯ ಎಂದ ಅವರು ಸಹಕಾರಿ ಸಂಘದ ಅಧ್ಯಕ್ಷರಾದ ಕೆ.ಎಮ್‌.ಸಾವಡಕರ ನೇತೃತ್ವದಲ್ಲಿ ಯಶಸ್ವಿಯಾಗಿ ಮುನ್ನಡೆಯಲಿ ಎಂದರು.

               ಸೊಸೈಟಿ ನಿರ್ದೇಶಕ ಚಂದ್ರಶೇಖರ ವಾಂಗಿ ಮಾತನಾಡಿ, ಸೊಸೈಟಿಯು ಪ್ರಾರಂಭಗೊಂಡು 25 ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ವಿವಿಧ ಠೇವಣಿ ಯೋಜನೆಗಳನ್ನು ಘೋಷಿಸಿದ್ದು, ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು. ಸಾನಿಧ್ಯವನ್ನು ಗಚ್ಚಿನ ಮಠದ  ಶಿವಬಸವ ಸ್ವಾಮೀಜಿ, ಶೆಟ್ಟರ್ ಮಠದ  ಮರುಳಸಿದ್ಧ ಸ್ವಾಮೀಜಿ, ಶೇಗುಣಸಿ ವೀರಕ್ತ ಮಠದ ಡಾ.ಮಹಾಂತ ಸ್ವಾಮೀಜಿ ವಹಿಸಿದ್ದರು.

               ಮುಖ್ಯ ಅತಿಥಿಗಳಾಗಿ ಕೃಷ್ಣಾ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಪರ​‍್ಪ ಸವದಿ, ಧುರೀಣರಾದ ಸತ್ಯಪ್ಪಾ ಲಠ್ಠೆ, ಪ್ರಕಾಶ ಮಹಾಜನ, ಸಹಕಾರ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ನೂಲಿ ಆಗಮಿಸಿದ್ದರು. ಅಧ್ಯಕ್ಷತೆಯನ್ನು ಕಲ್ಲಪ್ಪಾ ಸಾವಡಕರ ವಹಿಸಿದ್ದರು.ಈ ಸಂದರ್ಭದಲ್ಲಿ ನಿರ್ದೇಶಕ ಮಂಡಳಿ ಸದಸ್ಯರಾದ ಮಹಾಂತೇಶ ಕೋಹಳ್ಳಿ, ಚಂದ್ರಶೇಖರ ವಾಂಗಿ, ವಿನೋದ ಸಾವಡಕರ, ಮಹೇಶ ಹಿರೇಮಠ,

                 ವಿದ್ಯಾಧರ ಕೊಳಲಗಿ, ಸಂಗ್ರಾಮಸಿಂಗ ರಜಪೂತ, ಅನ್ನಪೂರ್ಣಾ ಸಿದ್ಧಪ್ಪಾ ಮಹಾಜನ, ಶ್ರೀಮತಿ ಲತಾ ದರೂರ, ವಿಜಯ ಶಿಂಧೆ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಾಹುಬಲಿ ದಾದಪ್ಪಗೋಳ ಸೇರಿದಂತೆ ಸೊಸೈಟಿಯ ಸಿಬ್ಬಂದಿ, ಸದಸ್ಯರು, ಗ್ರಾಹಕರು ಉಪಸ್ಥಿತರಿದ್ದರು. 


ಸುದ್ದಿ ಓದಿ