ಅಥಣಿ

ಬುಟಾಳಿ ಶುಗರ್ಸ 2027 ಕ್ಕೆ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ

ಬುಟಾಳಿ ಶುಗರ್ಸ 2027 ಕ್ಕೆ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ


                 ಅಥಣಿ 11 : ಅಥಣಿ ತಾಲೂಕಿನ ಪೂರ್ವ ಭಾಗದ ಕಬ್ಬು ಬೆಳೆಗಾರರ ಒತ್ತಾಸೆಯ ಮೇರೆಗೆ ರಾಮತೀರ್ಥ ಗ್ರಾಮದಲ್ಲಿ ಬುಟಾಳಿ ಶುಗರ್ಸ ಸಕ್ಕರೆ ಕಾರಖಾನೆಯನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ಬುಟಾಳಿ ಶುಗರ್ಸ ಸಂಸ್ಥಾಪಕ ಎಸ್‌.ಕೆ.ಬುಟಾಳಿ ಹೇಳಿದರು. ಅವರು ನಿಯೋಜಿತ ಬುಟಾಳಿ ಶುಗರ್ಸನ ಬಾಯ್ಲರ್ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು.                                    ಪೂರ್ವಭಾಗದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಬ್ಬು ಬೆಳೆಯುತ್ತಿದ್ದರೂ ಕೂಡ ಆ ಭಾಗದಲ್ಲಿ ಸಕ್ಕರೆ ಕಾರಖಾನೆಗಳೇ ಇಲ್ಲ ಹೀಗಾಗಿ ಅನಿವಾರ್ಯವಾಗಿ ದೂರದ ಕಾರಖಾನೆಗಳನ್ನೇ ಅವಲಂಬಿಸಬೇಕಾಗಿದೆ ಎಂದ ಅವರು 2027 ರ ಹಂಗಾಮಿನಲ್ಲಿ ಕಾರಖಾನೆಯನ್ನು ಪೂರ್ಣಪ್ರಮಾಣದಲ್ಲಿ ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದರು. 

                    ಬುಟಾಳಿ ಶುಗರ್ಸಗೆ 2023 ರಲ್ಲಿಯೇ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅನುಮತಿ ಕೊಟ್ಟಿದ್ದು, ಅಂದಿನಿಂದಲೇ ಶೇರು ಸಂಗ್ರಹ ಸೇರಿದಂತೆ ಆಡಳಿತಾತ್ಮಕ ಕಾರ್ಯಗಳನ್ನು ಪೂರೈಸಿಕೊಂಡು ಸದ್ಯ ಕಾರಖಾನೆಯ ಕಟ್ಟಡ, ಯಂತ್ರೋಪಕರಣಗಳ ಜೋಡಣೆ, ಆಡಳಿತ ಕಛೇರಿಯ ನಿರ್ಮಾಣ ಕಾರ್ಯ ಪ್ರಾರಂಭಗೊಂಡಿದೆ ಮತ್ತು ಈ ಎಲ್ಲ ಕಾರ್ಯಗಳು ಅತೀ ಶೀಘ್ರದಲ್ಲಿಯೇ ಪೂರ್ಣಗೊಂಡು ನಿಗದಿತ ಸಮಯದಲ್ಲಿಯೇ ಕಬ್ಬು ನುರಿಸುವ ಕಾರ್ಯಕ್ಕೂ ಚಾಲನೆ ದೊರಕಲಿದೆ ಎಂದರು.

                ಪೂಜಾ ಕಾರ್ಯವನ್ನು ಶೆಟ್ಟರ ಮಠದ ಮರುಳ ಸಿದ್ಧ ಸ್ವಾಮೀಜಿ ನೆರವೇರಿಸಿದರು. ಈ ಸಂದರ್ಭದಲ್ಲಿ ಪುರಸಭಾಧ್ಯಕ್ಷೆ ಶಿವಲೀಲಾ ಬುಟಾಳಿ, ಡಾ.ಮಹೇಶ್ ಕಾಪ್ಸೆ, ಮಲ್ಲಿಕಾರ್ಜುನ ಬುಟಾಳಿ, ಸೈಬಣ್ಣಾ ಕಮತಗಿ, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ವಾಸ್ಟರ್, ಸದಸ್ಯರಾದ ಮಲ್ಲೇಶ ಹುದ್ದಾರ, ದೀಲೀಪ ಲೋಣಾರೆ, ರಾವಸಾಹೇಬ ಐಹೊಳೆ, ಸೈಯ್ಯದಮೀನ್ ಗದ್ಯಾಳ, ಬಸವರಾಜ ಹಳ್ಳದಮಳ, ರವಿ ಬಡಕಂಬಿ,

               ರಾಜಶೇಖರ ಗುಡೋಡಗಿ, ರಿಯಾಜ ಸನದಿ, ಉದಯ ಸೋಳಸಿ, ಸಂತೋಷ ಸಾವಡಕರ, ಶಶಿಕಾಂತ ಹುಲಕುಂದ, ರಮೇಶ ಪವಾರ, ನರಸು ಬಡಕಂಬಿ, ಅನೀಲ ಸುಣಧೋಳಿ, ಸುರೇಶ ಮಾಯಣ್ಣವರ, ನಾನಾಸಾಬ ಅವತಾಡೆ, ಶಿವಾನಂದ ದಿವಾನಮಳ, ಶಿವರುದ್ರ ಘೂಳಪ್ಪನವರ, ರಾಜು ಆಲಬಾಳ, ಗೀರೀಶ ಸಜ್ಜನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ