ಅಥಣಿ ಪುರಸಭೆ 17 ನೇ ವಾರ್ಡಿನಲ್ಲಿ ಅಭಿವೃದ್ಧಿ ಕಾಮಗಾರಿಗೆ ಶಿವಲೀಲಾ ಬುಟಾಳಿ ಚಾಲನೆ.
ಅಥಣಿ 23 : ಅತೀ ವೇಗದಿಂದ ಬೆಳೆಯುತ್ತಿರುವ ಅಥಣಿ ನಗರದ ವಿವಿಧ ಬಡಾವಣೆಗಳಲ್ಲಿ ಸುಸಜ್ಜಿತ ರಸ್ತೆ, ಬೀದಿ ದೀಪ, ಗಟಾರ್ ನಿರ್ಮಾಣ ಸೇರಿದಂತೆ ಎಲ್ಲ ಜನಪರ ಕಾರ್ಯಗಳನ್ನು ಅನುಷ್ಠಾನಗೊಳಿಸುತ್ತಿರುವೆ ಎಂದು ಪುರಸಭಾಧ್ಯಕ್ಷ ಶಿವಲೀಲಾ ಬುಟಾಳಿ ಹೇಳಿದರು. ಅವರು ವಾರ್ಡ ನಂ 17 ರ ಗವಸಿದ್ಧನ ಮಡ್ಡಿಯಲ್ಲಿ ಸಿ.ಸಿ ರಸ್ತೆಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು. ಅಥಣಿ ಅಭಿವೃದ್ಧಿಗಾಗಿ ವಿಶೇಷ ಅನುದಾನ ಮಂಜೂರು ಮಾಡಿಸುವ ಪ್ರಕ್ರಿಯೆಯನ್ನು ಈಗಾಗಲೇ ಸಹಕಾರ ಸಚಿವ ಲಕ್ಷ್ಮಣ ಸವದಿ ಸರಕಾರದ ಮಟ್ಟದಲ್ಲಿ ಮಾಡುತ್ತಿದ್ದು, ಕೆಲವೇ ತಿಂಗಳುಗಳಲ್ಲಿ ವಿಶೇಷ ಅನುದಾನ ಮಂಜೂರಾಗಲಿದೆ ಎಂದ ಅವರು ವಿಶೇಷ ಅನುದಾನದಲ್ಲಿ ರಸ್ತೆ ಸೇರಿದಂತೆ ಮೂಲ ಭೂತ ಸೌಲಭ್ಯಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಭುವನೇಶ್ವರಿ ಯಕ್ಕಂಚಿ, ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ವಾಸ್ಟರ್, ವಿದ್ಯಾ ಬಸವರಾಜ ಹಳ್ಳದಮಳ, ಮೃಣಾಲಿನಿ ದೇಶಪಾಂಡೆ, ಕಲ್ಲೇಶ ಮಡ್ಡಿ, ದೀಲೀಪ ಲೋಣಾರೆ, ಮಲ್ಲು ಬುಟಾಳಿ, ಬಸವರಾಜ ಹಳ್ಳದಮಳ, ರಮೇಶ ಪವಾರ, ತಿಪ್ಪಣ್ಣಾ ಭಜಂತ್ರಿ, ರವಿ ಬಡಕಂಬಿ, ರಿಯಾಜ ಸನದಿ, ಪ್ರಮೋದ ಬಿಳ್ಳೂರ, ಉದಯ ಸೋಳಸಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.