ಆಜೂರ ಸಹಕಾರ ಸಂಘದ 57 ನೇ ವಾರ್ಷಿಕ ಸರ್ವಸಾಧಾರಣ ಸಭೆ
ಅಥಣಿ 01: ಗಡಿ ಭಾಗದ ರೈತರಿಗೆ ಆರ್ಥಿಕ ಬಲ ತಂದು ಕೊಡುವ ಮೂಲಕ ಆಶಾ ಕಿರಣದಂತಿರುವ ಆಜೂರ ವಿವಿದೋದ್ಧೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ಸಹಕಾರ ಸಚಿವ ಲಕ್ಷ್ಮಣ ಸವದಿ ಹಾಗೂ ಡಿಸಿಸಿ ಬ್ಯಾಂಕ ಉಪಾಧ್ಯಕ್ಷ, ಶಾಸಕ ರಾಜು ಕಾಗೆಯವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದೆ ಎಂದು ಸಂಘದ ಅಧ್ಯಕ್ಷ ತಿಮ್ಮಾಜಿಗೌಡ ಪಾಟೀಲ ಹೇಳಿದರುಅವರು ಸಹಕಾರಿ ಸಂಘದ 57 ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ವರದಿ ವರ್ಷದ ಕೊನೆಯಲ್ಲಿ 960 ಸದಸ್ಯರನ್ನು ಹೊಂದಿರುವ ನಮ್ಮ ಸಹಕಾರಿ ಸಂಘ 5 ಕೋಟಿ 30 ಲಕ್ಷ ದುಡಿಯುವ ಬಂಡವಾಳ, 62 ಲಕ್ಷ 73 ಸಾವಿರ ದುಡಿಯುವ ಬಂಡವಾಳ ಮತ್ತು 13 ಲಕ್ಷ 50 ಸಾವಿರದಷ್ಟು ಠೇವಣಿ ಹೊಂದಿದೆ ಎಂದರು.ಪ್ರಸಕ್ತ ಸಾಲಿನಲ್ಲಿ ಶೂನ್ಯ ಬಡ್ಡಿ ದರದಲ್ಲಿ 4 ಕೋಟಿ 45 ಲಕ್ಷ ರಫಾಯಿಗಳನ್ನು ಸಹಕಾರ ಸಂಘದ ರೈತ ಸದಸ್ಯರಿಗೆ ಬೆಳೆ ಸಾಲ ಹಂಚಿಕೆ ಮಾಡಲಾಗಿದ್ದು, ರೈತರು ನಿಗದಿತ ಸಮಯದಲ್ಲಿಯೇ ಬಡ್ಡಿ ಸಹಿತ ಸಾಲ ಮರುಪಾವತಿಸುವ ಮೂಲಕ ಸಹಕಾರ ಸಂಘದ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ವರದಿ ವರ್ಷದ ಅಢಾವೆ ಪತ್ರಿಕೆ ವರದಿಯನ್ನು ಚಿದಾನಂದ ದಡ್ಡಣ್ಣವರ ಓದಿದರು. ಸಭೆಯಲ್ಲಿ ಉಪಾಧ್ಯಕ್ಷ ಕೇಶವ ನರೋಟೆ, ನಿರ್ದೇಶಕರಾದ ರಾವಸಾಬ ದಡ್ಡನ್ನವರ , ಬಾಳಗೌಡ ಕಾಗವಾಡೆ, ಗುಂಡುರಾವ ದಡ್ಡನವರ, ಅಶೋಕ ಮಾಕಾಳೆ, ಮಹಾದೇವ ಹಿಡಕಲ್, ಶಿವಾಜಿ ಉಗಾರೆ, ರಾಮು ಸಾವಂತ , ರವಿ ಹೊನಖಾಂಡೆ,ಶ್ರೀಮತಿ ಶಾಲಾಬಾಯಿ ಮಾಕಾಳೆ, ಶ್ರೀಮತಿ ಮೀನಾಕ್ಷಿ ಪಾಟೀಲ,ಬ್ಯಾಂಕ್ ನೀರೀಕ್ಷಕ ರಮೇಶ ಗಲಗಲಿ ಸೇರಿದಂತೆ ಸರ್ವಸದಸ್ಯರು ಉಪಸ್ಥಿತರಿದ್ದರು.