2028 ರ ಚುನಾವಣೆಯಲ್ಲಿ ಅಥಣಿ, ಕಾಗವಾಡದಲ್ಲಿ ಬಿಜೆಪಿ ವಿಜಯ ಪತಾಕೆ, ರಮೇಶ ಜಾರಕಿಹೊಳಿ
ಅಥಣಿ 20: 2028 ರ ವಿಧಾನ ಸಭಾ ಚುನಾವಣೆಯಲ್ಲಿ ಅಥಣಿ ಮತ್ತು ಕಾಗವಾಡ ಎರಡೂ ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ವಿಜಯ ಪತಾಕೆ ಹಾರಿಸುತ್ತಾರೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ವಿಶ್ವಾಸ ವ್ಯಕ್ತ ಪಡಿಸಿದರು. ಅವರು ಆರ್.ಎಸ್.ಪಿ ಭವನದಲ್ಲಿ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಿದ್ದರು.
ಕಾಂಗ್ರೆಸ್ ಪಕ್ಷದ ದುರಾಡಳಿತಕ್ಕೆ ಜನ ಬೇಸತ್ತು ಜನ ಸಹಜವಾಗಿಯೇ ಬಿಜೆಪಿಯತ್ತ ವಾಲುತ್ತಿದ್ದಾರೆ ಹೀಗಾಗಿ ಅಥಣಿ ಮತ್ತು ಕಾಗವಾಡ ಕ್ಷೇತ್ರಗಳ ಸಹಿತ ಇಡೀ ರಾಜ್ಯದಲ್ಲಿಯೇ ಬಿಜೆಪಿ ಅಭ್ಯರ್ಥಿಗಳು ವಿಜಯ ಪತಾಕೆ ಹಾರಿಸುತ್ತಾರೆ ಇದರಲ್ಲಿ ಯಾವುದೇ ಸಂಶಯ ಬೇಡ ಎಂದ ಅವರು ಕಾಂಗ್ರೆಸ್ ಪಕ್ಷದಲ್ಲಿ ಈ ಸರಕಾರ ಅಸ್ತಿತ್ವಕ್ಕೆ ಬಂದ ದಿನದಿಂದ ರಾಜ್ಯದಲ್ಲಿ ಅಭಿವೃದ್ಧಿ ನಿಂತು ಕಾರ್ಯಗಳು ಸಂಪೂರ್ಣವಾಗಿ ನಿಂತು ಹೋಗಿವೆ ಇದರಿಂದ ಜನ ಸಂಕಷ್ಟಕ್ಕೊಳಗಾಗುತ್ತಿದ್ದಾರೆ ಎಂದ ಅವರು ಬಿಜೆಪಿಯಿಂದ ಉಚ್ಚಾಟನೆಗೊಂಡ ಬಸನಗೌಡ ಪಾಟೀಲರು ಕೂಡ ಬಿಜೆಪಿ ಪರವಾಗಿಯೇ ಕೆಲಸ ಮಾಡುತ್ತಿದ್ದು,
ಮುಂದೆ ಸಮಯ ಬಂದಾಗ ನೋಡೋಣ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ಮುಂಬರುವ ತಾಲೂಕಾ ಪಂಚಾಯತ ಮತ್ತು ಜಿಲ್ಲಾ ಪಂಚಾಯತ ಚುನಾವಣೆಯಲ್ಲಿ ಅಥಣಿ ಮತ್ತು ಕಾಗವಾಡ ತಾಲೂಕುಗಳ ಎಲ್ಲ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಈಗಾಗಲೇ ಪ್ರಾರಂಭಗೊಂಡಿದ್ದು, ಚುನಾವಣೆ ಘೋಷಣೆ ಮಾಡಿದ ತಕ್ಷಣ ಅಭ್ಯರ್ಥಿಗಳ ಹೆಸರುಗಳನ್ನು ಘೋಷಿಸುತ್ತೇವೆ ಎಂದ ಅವರು ಅಥಣಿ ಜಿಲ್ಲಾ ಕೇಂದ್ತಕ್ಕೆ ಸಂಬಂಧಿಸಿದಂತೆ ನಿಮ್ಮ ಅಭಿಪ್ರಾಯ ಏನು ಎಂದು ಪತ್ರಕರ್ತರ ಪ್ರಶ್ನೆಗೆ ಸರಕಾರದ ತಿರ್ಮಾನವೇ ನಮ್ಮ ತಿರ್ಮಾನ ಎಂದರು.ಸಭೆಯಲ್ಲಿ ಉಪಸ್ಥಿತರಿದ್ದ ಮಾಜಿ ಸಚಿವ ಶ್ರೀಮಂತ ಪಾಟೀಲ ಮಾತನಾಡಿ,
ರಾಜ್ಯ ಸರಕಾರ ಟೊಟಲಿ ಫೆಲ್ಯುವರ್ ಆಗಿದ್ದು, ರಾಜ್ಯದ ಜನ ರೋಸಿ ಹೋಗಿದ್ದಾರೆ ಇದೇ ರೀತಿ ಮುಂದುವರೆದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವೇ ನಿರ್ನಾಮವಾಗುತ್ತದೆ ಎಂದ ಅವರು ನಾನು ಶಾಸಕನಾಗಿದ್ದಾಗ ನೂರಾರು ಸಂಖ್ಯೆಯಲ್ಲಿ ಅಭಿವೃದ್ಧಿ ಮತ್ತು ಜನಪರ ಕಾರ್ಯಗಳಿಗೆ ಚಾಲನೆ ನೀಡಿದ್ದೆ ಆದರೆ ಇಂದಿನ ಸರಕಾರದ ಅವಧಿಯಲ್ಲಿ ಜನಪರ ಕಾರ್ಯಗಳೇ ನಿಂತು ಹೋಗಿವೆ ಎಂದು ರಾಜ್ಯ ಸರಕಾರದ ಕ್ರಮವನ್ನು ಟಿಕಿಸಿದರು.
ಸಭೆಯಲ್ಲಿ ಜಿ.ಪಂ ಮಾಜಿ ಸದಸ್ಯ ಎಸ್.ಎ.ಮುದಕಣ್ಣವರ, ಬಿಜೆಪಿ ಮುಖಂಡ ರವಿ ಪೂಜಾರಿ ಮಾತನಾಡಿದರು. ಸಭೆಯಲ್ಲಿ ಧುರೀಣರಾದ ಗೀರೀಶ ಬುಟಾಳಿ, ಅಪ್ಪಾಸಾಹೇಬ ಅವತಾಡೆ, ಸತ್ಯಪ್ಪಾ ಬಾಗೆನ್ನವರ, ನಾನಾಸಾಹೇಬ ಅವತಾಡೆ, ಮಲ್ಲಿಕಾರ್ಜುನ ಅಂದಾನಿ, ಡಾ.ರವಿ ಸಂಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.