ಅಥಣಿ

ಅಥಣಿಯಲ್ಲಿ ಸಹಾಯಕ ನಿಭಂಧಕರ ಕಛೇರಿ ಉದ್ಘಾಟಿಸಿದ ಸಹಕಾರ ಸಚಿವ ಲಕ್ಷ್ಮಣ ಸವದಿ

ಅಥಣಿಯಲ್ಲಿ ಸಹಾಯಕ ನಿಭಂಧಕರ ಕಛೇರಿ ಉದ್ಘಾಟಿಸಿದ ಸಹಕಾರ ಸಚಿವ ಲಕ್ಷ್ಮಣ ಸವದಿ

               ಅಥಣಿ 16 : ರೈತರ ಆರ್ಥಿಕ ಅನುಕೂಲಕ್ಕಾಗಿ 2008 ರಲ್ಲಿಯೇ ಮೊದಲ ಬಾರಿಗೆ ಸಹಕಾರ ಸಚಿವ ನಾಗಿದ್ದಾಗಲೇ ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಣೆ ಯೋಜನೆ ಇಡೀ ದೇಶದಲ್ಲಿಯೇ ಅನುಷ್ಠಾನಗೊಳಸಿದ್ದೆ ಎಂದು ಸಹಕಾರ ಸಚಿವ ಲಕ್ಷಣ ಸವದಿ ಹೇಳಿದರು. ಅವರು ಕೃಷ್ಣಾ ರೈತ ಭವನದಲ್ಲಿ ರಾಜ್ಯ ಸಹಕಾರ ಮಹಾ ಮಂಡಳ, ಜಿಲ್ಲಾ ಸಹಕಾರ ಯುನಿಯನ್, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ, ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ಮತ್ತು ಸಹಕಾರ ಸಂಘಗಳ, ಬ್ಯಾಂಕುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ 73 ನೇ ಸಹಕಾರ ಸಪ್ತಾಹ ಮತ್ತು ಹೊಸದಾಗಿ ಸೃಜನೆಯಾದ ಸಹಕಾರ ಸಂಘಗಳ ಸಹಾಯ ನಿಬಂಧಕರ ಕಛೇರಿ ಉದ್ಘಾಟಿಸಿ ಮಾತನಾಡುತ್ತಿದ್ದರು.                  ಮೊದಲ ಬಾರಿ ನಾನು ಮಾಜಿ ಸಿ.ಎಮ್ ಯಡಿಯುರ​‍್ಪನವರ ಮಂತ್ರಿ ಮಂಡಲದಲ್ಲಿ ಸಹಕಾರ ಸಚಿವನಾಗಿದ್ದೆ ಆಗ ರೈತ ಕುಲಕ್ಕೆ ಆರ್ಥಿಕವಾಗಿ ಅನುಕೂಲ ಮಾಡಿಕೊಡಬೇಕು ಎನ್ನುವ ಉದ್ದೇಶದಿಂದಲೇ ಶೂನ್ಯ ಬಡ್ಡಿ ದರದಲ್ಲಿ ಸಾಲ ಹೇಗೆ ಕೊಡಬಹುದು ಎನ್ನುವ ಕುರಿತು ಯಡಿಯುರ​‍್ಪನವರಿಗೆ ಮನವರಿಕೆ ಮಾಡಿಕೊಟ್ಟೆ ಆಗ ಅವರು ಒಪ್ಪಿಗೆ ಕೊಟ್ಟರು ಮತ್ರು ಈ ಯೋಜನೆಯನ್ನು ಅನುಷ್ಠಾನಗೊಳಿಸಿದರು ಎಂದ ಅವರು ಇಂದಿಗೂ ರೈತರು ನನ್ನನ್ನು ಈತನೇ ಶೂನ್ಯ ಬಡ್ಡಿ ದರದಲ್ಲಿ ನಮಗೆ ಸಾಲ ಮಂಜೂರು ಮಾಡಿದವ ಎಂದೇ ಗುರುತಿಸುತ್ತಾರೆ ಎಂದು ಹೇಳಿದರು.

               ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಮಾಜಿ ಸಂಸದ ರಮೇಶ ಕತ್ತಿ, ಇತ್ತೀಚಿಗೆ ಕೇಂದ್ರ ಸರಕಾರ ಸಹಕಾರ ಸಂಘಗಳಲ್ಲಿ 10 ವರ್ಷಗಳಿಗಿಂತ ಹೆಚ್ಚು ಕಾಲ ಕಾರ್ಯನಿರ್ವಹಿಸುತ್ತಿರುವ ನಿರ್ದೇಶಕರನ್ನು ಅನರ್ಹಗೊಳಿಸುವ ತಿದ್ದುಪಡಿಯೊಂದನ್ನು ಜಾರಿಗೊಳಿಸಿದೆ ಇದರಿಂದ ಹಿರಿಯ ತಲೆ ಮಾರ ಮರೆಯಾಗಬಹುದಾಗಿದ್ದರಿಂದ ತಕ್ಷಣ ಈ ತಿದ್ದುಪಡಿಯನ್ನು ಹಿಂದೆ ಪಡೆಯಬೇಕು ಎಂದು ನಾನು ಕೇಂದ್ರ ಸಹಕಾರ ಸಚಿವರನ್ನು ಭೇಟಿ ಮಾಡಿ ಆಗ್ರಹಿಸುವುದಾಗಿ ಹೇಳಿದರು.

                  ರಾಜ್ಯದ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಿಸುವ ಯೋಜನೆ ಜಾರಿಗೊಳಿಸಿದ್ದು, ಇಂದಿನ ಸಹಕಾರ ಸಚಿವ ಲಕ್ಷ್ಮಣ ಸವದಿಯವರೇ ಎಂದ ಅವರು ಮೂರು ದಶಕಗಳ ಹಿಂದೆ ನಾನು ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದಾಗ ನಷ್ಠದಲ್ಲಿದ್ದ ಡಿಸಿಸಿ ಬ್ಯಾಂಕ ಲಾಭದತ್ತ ಮುನ್ನಡೆಸಿಕೊಂಡು ಬಂದೆ ಕೊನೆಗೆ ನಾನು ಅಧಿಕಾರದಿಂದ ಹಿಂದೆ ಸರಿದಾಗಲೂ ಲಾಭದಲ್ಲಿಯೇ ಇತ್ತು ಎಂದರು. ಕಾರ್ಯಕ್ರಮದಲ್ಲಿ ಅಥಣಿ ಸಹಕಾರ ಸಂಘಗಳ ಒಕ್ಕೂಟದಿಂದ ಸಹಕಾರ ಸಚಿವ ಲಕ್ಷ್ಮಣ ಸವದಿ ಇವರನ್ನು ಸತ್ಕರಿಸಲಾಯಿತು.

                   ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳದ ನಿರ್ದೇಶಕರಾದ ಜಗದೀಶ ಕವಟಗಿಮಠ , ನ್ಯಾಯವಾದಿ ಎ.ಎಮ್‌.ಖೊಬ್ರಿ ಮಾತನಾಡಿದರು, ಜಿಲ್ಲಾ ಸಹಕಾರ ಯುನಿಯನ್ ಅಧ್ಯಕ್ಷ ಬಸಗೌಡ ಪಾಟೀಲ, ಅಪೇಕ್ಸ ಬ್ಯಾಂಕ ಪ್ರತಿನಿಧಿ ಮುತ್ತಣ್ಣಾ ಕಾತ್ರಾಳ ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆ ಅಧ್ಯಕ್ಷ ಪರ​‍್ಪ ಸವದಿ, ವ್ಯವಸ್ಥಾಪಕ ನಿರ್ದೇಶಕ ಜಿ.ಎಮ್‌.ಪಾಟೀಲ, ಸಹಕಾರ ಸಂಘಗಳ ಸಂಯುಕ್ತ ನಿಭಂಧಕ ಕಲ್ಲಪ್ಪ ಓಬಣ್ಣಗೋಳ, ಸಹಕಾರ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ನೂಲಿ ಸೇರಿದಂತೆ ಅಥಣಿ, ಕಾಗವಾಡ ಮತ್ತು ಕುಡಚಿ ಕ್ಷೇತ್ರಗಳ ಸಹಕಾರ ಸಂಘಗಳ ಆಡಳಿತ ಮಂಡಳಿ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸುದ್ದಿ ಓದಿ