ಅಥಣಿ

ಅವತಾಡೆ ಬ್ರದರ್ಸ ಆರ್‌.ಎಮ್‌.ಸಿ ಪ್ಲಾಂಟಗೆ ಚಾಲನೆ

ಅವತಾಡೆ ಬ್ರದರ್ಸ ಆರ್‌.ಎಮ್‌.ಸಿ ಪ್ಲಾಂಟಗೆ ಚಾಲನೆ


              ಅಥಣಿ 11 : ಅಪ್ಪಾಸಾಹೇಬ ಅವತಾಡೆ ಮತ್ತು ನಾನಾಸಾಹೇಬ ಅವತಾಡೆಯವರು ನೂತನವಾಗಿ ಪ್ರಾರಂಭಿಸಿದ ಆರ್‌.ಎಮ್‌.ಸಿ ಪ್ಲಾಂಟ್ ಯಶಸ್ವಿಯಾಗಲಿ ಎಂದು ಮಾಜಿ ಸಚಿವ ಶ್ರೀಮಂತ ಪಾಟೀಲ ಶುಭ ಹಾರೈಸಿದರು. ಅಪ್ಪಾಸಾಹೇಬ ಅವತಾಡೆ ರಾಜಕಾರಣಿಯಾಗಿ, ಗುತ್ತಿಗೆದಾರನಾಗಿ, ಉದ್ಯಮಿಯಾಗಿ, ಸಾಮಾಜಿಕ ಕಾರ್ಯಕರ್ತನಾಗಿ ಎಲ್ಲರೊಂದಿಗೆ ಹೊಂದಿಕೊಂಡು ಹೋಗುತ್ತಿರುವ ಪರಿಣಾಮವೇ ಅವರ ಉದ್ಯೋಗಗಳು ಯಶಸ್ವಿಯಾಗಿವೆ ಎಂದ ಅವರು ನಾನಾಸಾಹೇಬ ಅವತಾಡೆ ಅರಳಿಹಟ್ಟಿ ರಾಜ್ಯ ಹೆದ್ದಾರಿ ಕಾಮಗಾರಿಯನ್ನು ಅತ್ಯುತ್ತಮವಾಗಿ ನಿರ್ವಹಿಸಿದ್ದಾರೆ.

           ಇಂತಹ ಅನೇಕ ಕಾಮಗಾರಿಗಳನ್ನು ನಿರ್ವಹಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದರು. ಮಾಜಿ ಶಾಸಕ ಶಹಜಹಾನ ಡೊಂಗರಗಾಂವ ಮಾತನಾಡಿ, ನಾನು ತಾಲೂಕಾ ಪಂಚಾಯತ ಸದಸ್ಯನಾಗಿದ್ದಾಗ ಅಪ್ಪಾಸಾಹೇಬ ಅವತಾಡೆಯವರೂ ಕೂಡ ಸದಸ್ಯರಾಗಿದ್ದರು ಮುಂದೆ ನಾನು ಶಾಸಕನಾಗಿ ಆಯ್ಕೆಯಾದೆ. ನನ್ನ ಅಧಿಕಾರವಧಿಯಲ್ಲಿಯೂ ಸಹ ವಿರೋಧ ಪಕ್ಷದಲ್ಲಿದ್ದರೂ ಕೂಡ ಅನೇಕ ಕಾಮಗಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದ ಇವರು ಅಥಣಿಯಿಂದ ಬೆಂಗಳೂರಿನ ವರೆಗೂ ಎಲ್ಲರೊಂದಿಗೆ ಸೌಹಾರ್ದ ಸಂಬಂಧ ಹೊಂದಿದ್ದಾರೆ.

            ಹೀಗಾಗಿ ಅವರ ಉದ್ಯಮಗಳು ಯಶಸ್ವಿಯಾಗಿ ಮುಂದುವರೆಯುತ್ತಿವೆ ಎಂದರು. ಯುವ ನಾಯಕ ಶಿವಕುಮಾರ ಸವದಿ ಮಾತನಾಡಿ, ಅತೀ ಚಿಕ್ಕ ವಯಸ್ಸಿನಲ್ಲಿಯೇ ಗುತ್ತಿಗೆ ಕ್ಷೇತ್ರಕ್ಕೆ ಕಾಲಿಟ್ಟ ಅವತಾಡೆ ಸಹೋದರರು ಇಂದು ಅಥಣಿಗೆ ಅವಶ್ಯವಾಗಿ ಬೇಕಾಗಿರುವ ಆರ್‌.ಎಮ್‌.ಸಿ ಪ್ಲಾಂಟ್ ಪ್ರಾರಂಭಿಸಿದ್ದಾರೆ ಎಂದ ಅವರು ಅವರ ಈ ಉದ್ಯಮ ಯಶಸ್ವಿಯಾಗಲಿ ಎಂದರು. ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದ ಕಾಂಗ್ರೆಸ್ ಮುಖಂಡ ಎಸ್‌.ಕೆ.ಬುಟಾಳಿ, 

             ಜಿ.ಪಂ ಮಾಜಿ ಸದಸ್ಯ ಎಸ್‌.ಎ.ಮುದಕಣ್ಣವರ, ಗುತ್ತಿಗೆದಾರ ಧರೆಪ್ಪ ಠಕ್ಕಣ್ಣವರ ಮಾತನಾಡಿದರು. ಧುರೀಣರಾದ ನಿಂಗಪ್ಪ ಖೋಕಲೆ, ಜಿನಗೌಡ ಪಾಟೀಲ, ಸೈಬಣ್ಣಾ ಕಮತಗಿ, ಗಜಾನನ ಯರಂಡೋಲಿ, ವಿನಾಯಕ ಬಾಗಡಿ, ಅಸ್ಲಂ ನಾಲಬಂದ, ಸತ್ಯಪ್ಪಾ ಬಾಗೆನ್ನವರ, ಅಪ್ಪು ನೇಮಗೌಡ, ಪ್ರಭಾಕರ ಚವ್ಹಾಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ