ಅಥಣಿ

ದೇಹಲಿ ಕಬ್ಬು ಬೆಳೆಗಾರರ ಸಭೆಗೆ ಸಹಕಾರ ಸಚಿವ ಲಕ್ಷ್ಮಣ ಸವದಿ ರಾಜ್ಯದ ಪ್ರತಿನಿಧಿಯಾಗಿ ಭಾಗಿ

ದೇಹಲಿ ಕಬ್ಬು ಬೆಳೆಗಾರರ ಸಭೆಗೆ ಸಹಕಾರ ಸಚಿವ ಲಕ್ಷ್ಮಣ ಸವದಿ ರಾಜ್ಯದ ಪ್ರತಿನಿಧಿಯಾಗಿ ಭಾಗಿ
Cooperation Minister Laxman Savadi participates as the state's representative in the meeting of Del


ಅಥಣಿ 07: ಕೇಂದ್ರ ಸರಕಾರ ದೇಹಲಿಯಲ್ಲಿ ಕಬ್ಬಿನ ದರದ ಸಂಬಂಧ ಕರೆದಿರುವ ಸಭೆಗೆ ರಾಜ್ಯದ ಪ್ರತಿನಿಧಿಯಾಗಿ ಅದರಲ್ಲೂ ರಾಜ್ಯದ ಕಬ್ಬು ಬೆಳೆಗಾರರ ಪ್ರತಿನಿಧಿಯಾಗಿ ಪಾಲ್ಗೊಳ್ಳುತ್ತಿರುವುದು ನನಗೆ ಸಂತೋಷ ತಂದಿದೆ ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ಹೇಳಿದರು.

ಅವರು 50 ಲಕ್ಷ ರೂ.ಗಳ ರಡ್ಡೇರಹಟ್ಟಿ, ಸತ್ತಿ ಗ್ರಾಮಗಳಲ್ಲಿ ಮಡ್ಡಿ ಬಸವೇಶ್ವರ ದೇವಸ್ಥಾನದಲ್ಲಿ ಪ್ರವಾಸಿ ಮಂದಿರ ಮತ್ತು 30 ಲಕ್ಷ ರೂ.ಗಳ  ಸತ್ತಿ ಗ್ರಾಮದ ಪ್ರಗತಿ ಕಾಲನಿ ಸತ್ತಿ ನಂದಗಾಂವ ಮುಖ್ಯ ರಸ್ತೆಯಿಂದ ಹೊನಕಡಬಿ ಮನೆ ವರೆಗೆ ಸಿಸಿ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ ಹಾಗೂ ಸತ್ತಿ ಗ್ರಾಮದ ವಾಸಪ್ಪ, ಗಾಯಕವಾಡ, ಮಠಪತಿ ಮತ್ತು ಮದರಸಾ ವಸತಿ ತೋಟದಲ್ಲಿ  ನಿರಂತರ ವಿದ್ಯುತ್ ಸರಬರಾಜು ಕಾಮಗಾರಿ ಉದ್ಘಾಟಿಸಿ ಮಾತನಾಡುತ್ತಿದ್ದರು.

ದೇಹಲಿಯಲ್ಲಿ ನಡೆಯಲಿರುವ ಈ ಸಭೆಗೆ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ ತೆರಳಬೇಕಿತ್ತು ಆದರೆ ಕಬ್ಬಿನ ಬಗ್ಗೆ ನನಗಿಂತ ನಿಮಗೆ ಹೆಚ್ಚು ಗೊತ್ತಿದೆ ಮತ್ತು ಅದೇ ಪ್ರದೇಶದವರಾಗಿದ್ದರಿಂದ ನೀವೇ ಕಬ್ಬು ಬೆಳೆಗಾರರ ಪರವಾಗಿ ಸಭೆಗೆ ಹಾಜರಾಗಿ ಎಂದು ಸೂಚಿಸಿದ ಹಿನ್ನೆಲೆ ಸಭೆಗೆ ಹಾಜರಾಗುತ್ತಿರುವೆ ಎಂದ ಅವರು ಸಭೆಯಲ್ಲಿ ಕಬ್ಬಿನ ದರ, ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತು ಚರ್ಚಿಸುವೆ ಎಂದರು.ಮುಖ್ಯಮಂತ್ರಿ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯಡಿ ರಡ್ಡೇರಹಟ್ಟಿಯ ಮಟ್ಟಿ ಬಸವೇಶ್ವರ ದೇವಸ್ಥಾನದಲ್ಲಿ ಭಕ್ತ ಅನಕೂಲಕ್ಕಾಗಿ 50 ಲಕ್ಷ ವೆಚ್ಚದ ಪ್ರವಾಸಿ ಮಂದಿರ ನಿರ್ಮಾಣಕ್ಕೆ ಚಾಲನೆ ನೀಡಿರುವೆ ಎಂದ ಅವರು ಗ್ರಾಮಸ್ಥರು ಆಗಾಗ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ಗುಣಮಟ್ಟ ಪರೀಕ್ಷಿಸಬೇಕು ಎಂದರು.

ರಡ್ಡೇರಹಟ್ಟಿ ಗ್ರಾಮಸ್ಥರು ದೈವ ಭಕ್ತರಾಗಿದ್ದು, ಗ್ರಾಮಸ್ಥರೆಲ್ಲರು ಸೇರಿ ಈಗಾಗಲೇ ಇಂಚಗೇರಿ ಸಂಪ್ರದಾಯಕ್ಕೆ ಸೇರಿದ ಭವ್ಯವಾದ ಮಠ ನಿರ್ಮಾಣ ಮಾಡಿರುವಿರಿ ಅದೇ ರೀತಿ ಮಡ್ಡಿ ಬಸವೇಶ್ವರ ದೇವಸ್ಥಾನದ ನಿರ್ಮಾಣಕ್ಕೆ ಈಗಾಗಲೇ ಚಾಲನೆ ನೀಡಿರುವಿರಿ ದೇವಸ್ಥಾನ ನಿರ್ಮಾಣದ ಕಾಮಗಾರಿಗೂ ನಾನು ಶಾಸಕರ ನಿಧಿ ಸೇರಿದಂತೆ ಇನ್ನಿತರ ಯೋಜನೆಗಳಿಂದ ಅನುದಾನ ಕೊಡುವುದಾಗಿ ಭರವಸೆ ನೀಡಿದ ಅವರು  ಇಷ್ಟರಲ್ಲಿಯೇ ರಡ್ಡೇರಹಟ್ಟಿ ಗ್ರಾಮವನ್ನು ಕಂದಾಯ ಗ್ರಾಮವಾಗಿ ಘೋಷಣೆಯಾಗಲಿದೆ ಎಂದರು.ಈ ಸಂದರ್ಭದಲ್ಲಿ ಜಿ.ಪಂ ಅಧಿಕಾರಿ ವೀರಣ್ಣಾ ವಾಲಿ, ಮಡಿವಾಳ ಪಾಟೀಲ, ಹೆಸ್ಕಾಂ ಅಧಿಕಾರಿಗಳಾದ ಗುರುರಾಜ ಸಂಪಣ್ಣವರ, ಶಬ್ಬೀರ ಪಾರ್ಥನಹಳ್ಳಿ, ಗುತ್ತಿಗೆದಾರರಾದ ಸಂಗಮೇಶ ನಾರಗೊಂಡ, ದ್ವಾರಕೀಶ್ ಜಾಲಿಹಾಳ, ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮದ ಸಂತೋಷ ಶೇಗುಣಸಿ, ಧುರೀಣರಾದ ಶಿವರುದ್ರ ಘೂಳಪ್ಪನವರ, ಶಿವಾನಂದ ಗೊಲಭಾವಿ,  ಗುತ್ತಿಗೆದಾರರಾದ ರಾಹುಲ ಬಳ್ಳೊಳ್ಳಿ, ರಾಹುಲ ಖಂಡುಪೂಜಾರಿ, ಅಭಿನಂದನ ಪಾಟೀಲ, ಅಮಿತ ಜಕಾತಿ, ಅನೀಲ ಭೊಸ್ಲೆ ಸೇರಿದಂತೆ ರಡ್ಡೇರಹಟ್ಟಿ, ಸತ್ತಿ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು. 


ಸುದ್ದಿ ಓದಿ