ವಿಜಯಪುರ

ವೀರನಾರಿ ಒನಕೆ ಓಬವ್ವರ ಧೈರ್ಯ, ಸಾಹಸ ಇಂದಿನ ಯುವಜನತೆಗೆ ಮಾದರಿ: ದಾನೇಶ ಅವಟಿ

ವೀರನಾರಿ ಒನಕೆ ಓಬವ್ವರ ಧೈರ್ಯ, ಸಾಹಸ ಇಂದಿನ ಯುವಜನತೆಗೆ ಮಾದರಿ: ದಾನೇಶ ಅವಟಿ
The courage and valor of the heroic woman Onake Obavva serve as an example for today's youth: Danesh



           ವಿಜಯಪುರ 11 :  ಕನ್ನಡ ನಾಡಿನ ವೀರನಾರಿಯರ ಸಾಲಿನಲ್ಲಿ ಒನಕೆ ಓಬವ್ವ ಅಗ್ರಗಣ್ಯ ಸಾಲಿನಲ್ಲಿ ನಿಲ್ಲುತ್ತಾರೆ ಅವರ ಧೈರ್ಯ, ಸಾಹಸ ಇಂದಿನ ಯುವ ಜನತೆಗೆ ಮಾದರಿಯಾಗಿವೆ ಎಂದು ನ್ಯಾಯವಾದಿ ದಾನೇಶ ಅವಟಿ ಹೇಳಿದರು.ಅವರು ವಿಜಯಪುರ ನಗರದ ಮನಗೂಳಿ ರಸ್ತೆಯಲ್ಲಿರುವ ಒನಕೆ ಓಬವ್ವ ವೃತ್ತದಲ್ಲಿ  ಒನಕೆ ಓಬವ್ವ ಜಯಂತಿ ಉತ್ಸವ ಸಮಿತಿಯಿಂದ ಹಮ್ಮಿಕೊಂಡಿದ್ದ ಒನಕೆ ಓಬವ್ವ ಜಯಂತಿಯಲ್ಲಿ ಮಾತನಾಡಿದರು. ಚಿತ್ರದುರ್ಗದ ಕೋಟೆಗೆ ವೈರಿಪಡೆ ಮುತ್ತಿಗೆ ಹಾಕಿದಾಗ ಯಶಸ್ವಿಯಾಗಿ ಹಿಮ್ಮೆಟ್ಟಿಸಿದ ಕೀರ್ತಿ ಒನಕೆ ಓಬವ್ವ ಅವರಿಗೆ ಸಲ್ಲುತ್ತದೆ ಎಂದರು. 

              ಕಾರ್ಯಕ್ರಮ ಸಂಘಟಕ ಪ್ರದೀಪ ಚಲವಾದಿ ಅವರು ಮಾತನಾಡಿ, ರಾಜ್ಯಪರಂಪರೆಯ ಕಾಲದಲ್ಲಿ ಓಬವ್ವ ಮೆರೆದ ಸಾಹಸ  ಪ್ರಜಾಪ್ರಭುತ್ವ ಕಾಲದ ಜನರಿಗೂ ಮಾದರಿಯಾಗಿವೆ ಆ ಕಾರಣಕ್ಕೆ ಸರಕಾರ ಅವರ ಜಯಂತಿ ಆಚರಿಸುತ್ತಿದೆ ಪ್ರತಿಯೊಬ್ಬರು ಅಪ್ರತಿಮ ಶೌರ್ಯ ಅಚಲ ಗುರಿ ಆದರ್ಶ ವ್ಯಕ್ತಿತ್ವ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

                ಕರವೇ ಸ್ವಾಭಿಮಾನಿ ಸೇನಾ ಸಮಿತಿ ರಾಜ್ಯಾಧ್ಯಕ್ಷ ಜಗದೇವ ಸೂರ್ಯವಂಶಿ ಹಾಗೂ ಸಂಘ ಸಂಸ್ಥೆಗಳ ಮುಖಂಡ ವಿನೋದ ಖೇಡ ಅವರು ಮಾತನಾಡಿ ಒನಕೆ ಓಬವ್ವ ಮತ್ತು ಅವರ ಪತಿ ಮುದ್ದುನುಮ ಚಿತ್ರದುರ್ಗದ ಕಾಮಖೇತಿ ಮನೆತನದ ಮದಕರಿ ನಾಯಕರಿಗೆ ನಿಷ್ಟರಾಗಿದ್ದರು ಅದೇ ಕಾರಣಕ್ಕೆ ಏಕಾಂಗಿಯಾಗಿ ಒನಕೆ ಓಬವ್ವ ವೈರಿಗಳನ್ನು ಹಿಮ್ಮೆಟ್ಟಿಸಿ ರಾಜ್ಯನಿಷ್ಠೆ ಮೆರೆದು ಇತಿಹಾಸದಲ್ಲಿ ಮಾದರಿ ವೀರನಾರಿಯೆನಿಸಿದ್ದಾರೆ ಎಂದು ಹೇಳಿದರು. 

                 ಸಂಘ ಸಂಸ್ಥೆಗಳ ಮುಖಂಡ ಲಾಯಪ್ಪ ಇಂಗಳೆ ಮಾತನಾಡಿ ಒನಕೆ ಓಬವ್ವ ಕರ್ನಾಟಕ ಮಾತ್ರವಲ್ಲ ದೇಶದ ಅಗ್ರಗಣ್ಯ ಐತಿಹಾಸಿಕ ವ್ಯಕ್ತಿಗಳ ಸಾಲಿನಲ್ಲಿ ನಿಲ್ಲುವ ವೀರನಾರಿಯಾಗಿದ್ದಾರೆ. ಶತೃ ಸೈನ್ಯದಿಂದ ನಮ್ಮ ದೇಶವನ್ನು  ಹೇಗೆ ಕಾಪಾಡಬೇಕು ಎಂಬುದಕ್ಕೆ ಓಬವ್ವಳ ಕಾರ್ಯಾಚರಣೆ ಮಾದರಿಯಾಗಿದೆ. ಪ್ರತಿಯೊಬ್ಬರು ಅವರ ಜೀವನ ಆದರ್ಶ, ಧೈರ್ಯ ಸಾಹಸವನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

             ಕಾರ್ಯಕ್ರಮದಲ್ಲಿ ಸಾಮಾಜಿಕ ಹೋರಾಟಗಾರರಾದ ಅಂಬಾದಾಸ ಜೋಶಿ ಅಶೋಕ ವಾಲಿಕಾರ, ಮಹೇಶ ಮುಧೋಳ, ಶರಣಪ್ಪ ಕಟ್ಟಿ ಶಂಕರ ಸಾತಪುತೆ, ಅನಿಲ ಇಕ್ಕಡೆ,  ಗುರುಲಿಂಗಪ್ಪ ಪಾಟೀಲ, ಚಂದ್ರಶೇಖರ ಹೊಸಮನಿ, ಸಂತೋಷ ಗಡೇದ, ಬಾಬಾ ಇಮಾರತವಾಲೆ ರಾವುತ ಸೇರಿದಂತೆ ಹಲವರು ಉಪಸ್ಥಿತರಿದ್ದರು. 


ಸುದ್ದಿ ಓದಿ