ವಿಜಯಪುರ ಜಿಲ್ಲೆಗೂ 371(ಜೆ) ಮೀಸಲಾತಿ ನೀಡಲು ಹೋರಾಟ ತೀವ್ರ
ಲೋಕದರ್ಶನ ವರದಿ
ಸಿಂದಗಿ 11 : ನಗರದ ಬಸವೇಶ್ವರ ಸರ್ಕಲ್ ಹತ್ತಿರ ಗೋಕಾಕ ಚಳವಳಿಯ ರೂವಾರಿ ಶ್ರೀ ರೇ.ಚ. ರೇವಡಿಗಾರ ಪ್ರತಿಷ್ಠಾನ ಹಾಗೂ 371(ಜೆ) ಹೋರಾಟ ಸಮಿತಿ ನೇತೃತ್ವದಲ್ಲಿ 39 ದಿನಗಳಿಂದ ನಡೆಯುತ್ತಿರುವ ಧರಣಿ ಸತ್ಯಾಗ್ರಹಕ್ಕೆ ಕರ್ನಾಟಕ ದಲಿತ ಸೇನೆ ಹಾಗೂ ಕೆಆರ್ಎಸ್ ಪಕ್ಷದ ಮುಖಂಡರು ಬೆಂಬಲ ವ್ಯಕ್ತಪಡಿಸಿದರು.
ದಲಿತ ಸೇನೆಯ ರಾಜ್ಯ ಸಂಘಟನೆಯ ಕಾರ್ಯದರ್ಶಿ ಮಹೇಶ ಜಾಬನವರ ಮಾತನಾಡಿ, 2002ರಲ್ಲಿ ರಚಿತವಾದ ಡಾ. ಡಿ.ಎಂ.ನಂಜುಂಡಪ್ಪ ವರದಿ ಪ್ರಕಾರ ರಾಜ್ಯದ 114 ತಾಲೂಕುಕುಗಳು ಹಿಂದೂಳಿದ ಪ್ರದೇಶಗಳಿವೆ ಅದರಲ್ಲಿ 26 ತಾಲೂಕುಗಳು ಉತ್ತರ ಕರ್ನಾಟಕ ತಾಲೂಕುಗಳಿವೆ 2012ರಲ್ಲಿರಾಜ್ಯ ಸರಕಾರದಿಂದ 371ಜೆ ಜಾರಿಗಾರಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವ ಸಂದರ್ಭದಲ್ಲಿ ವಿಜಯಪುರ ಜಿಲ್ಲೆಯು ಕೂಡಾ ವರದಿಯಲ್ಲಿತ್ತು ಆ ಸಂದರ್ಭದಲ್ಲಿ ಡಾ. ಎಂ.ಬಿ.ಪಾಟೀಲರು ಸಚಿವರಿದ್ದರು.
ಕಲಬುರ್ಗಿ ಜಿಲ್ಲೆಯ ಪ್ರಭಾವಿ ನಾಯಕರ ಒತ್ತಡಕ್ಕೆ ಮಣೀದು ಈ ಜಿಲ್ಲೆಗೆ ಅನ್ಯಾಯ ಮಾಡಿದ್ದಾರೆ ಸದ್ಯ ಈ ಜಿಲ್ಲೆಗೂ ಬಿಟ್ಟು ಹೋದ ಈ ಜಿಲ್ಲೆಯ ಹೆಸರನ್ನು ಮರು ಪರೀಶೀಲನೆಗೆ ಒಳಪಡಿಸಲು ಹೋರಾಟ ಸಮಿತಿ 39 ದಿನಗಳಿಂದ ಧರಣೀ ನಡೆಸುತ್ತಿದೆ ಅಲ್ಲದೆ ಬೆಂಗಳೂರಿಗೆ ನಿಯೋಗ ಹೋಗಿ ಅವರ ಗಮನಕ್ಕೆ ತಂದಾಗ್ಯೂ ಧರಣಿ ಸತ್ಯಾಗ್ರಹ ವೇದಿಕೆಗೆ ಬರದಿರುವುದನ್ನು ದಲಿತ ಸೇನೆ ಉಗ್ರವಾಗಿ ಖಂಡಿಸುತ್ತದೆ.
ಮುಂಬರುವ ದಿನಗಳಲ್ಲಿ ಇದರ ಸಾದಕ ಬಾದಕಗಳನ್ನು ಪರೀಶೀಲಿಸಿ ತಾರ್ಕಿಕ ಅಂತ್ಯ ಹಾಡಬೇಕು ಇಲ್ಲದಿದ್ದರೆ ಜಿಲ್ಲಾ ಉಸ್ತುವಾರಿ ಸಚಿವರ ಹಾಗೂ ಸಂಸದರ ಮನೆಗೆ ಮುತ್ತಿಗೆ ಹಾಕಿ ಧರಣಿ ನಡೆಸಲು ಹಿಂಜೆರೆಯುವುದಿಲ್ಲ ಎಂದು ಏಚ್ಚರಿಕೆ ನೀಡಿದರು.
ವಿಜಯಪುರ ಜಿಲ್ಲೆಯನ್ನು ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಮಾದರಿಯಲ್ಲಿ ವಿಜಯಪುರ ಜಿಲ್ಲೆಯನ್ನು ಸಹ ಸಂವಿಧಾನದ 371(ಜೆ) ವಿಶೇಷ ಸ್ಥಾನಮಾನ ನೀಡಬೇಕು. ಎನ್ನುವ ನಿಟ್ಟಿನಲ್ಲಿ ಹೋರಾಟ ನಡೆಸಿದ್ದು ನ್ಯಾಯಯುತವಾದದ್ದು ಈ ಹೋರಟಕ್ಕೆ ಸಂಪೂರ್ಣ ಬೆಂಬಲವಿದೆ. ಎಂದು ಹೇಳಿದರು.
ಕೆಆರ್ಎಸ್ ಪಕ್ಷದ ನಬಿ ಹುಣಶಾಳ ಮಾತನಾಡಿ, ಸ್ವತಂತ್ರ ದೊರೆತು 80 ವರ್ಷಗಳಾದರು ಇನ್ನೂ ನಮಗೆ ಸ್ವತಂತ್ರ ಸಿಗದ ರೀತಿಯಲ್ಲಿ ಹೋರಾಟ ಮಾಡಿಯೆ ಸೌಲಭ್ಯ ಪಡೆಯುವಂತಾಗಿದೆ. ರಾಜಕಾರಣ ಇದೊಂದು ವ್ಯಾಪಾರಿಕರಣವಾಗಿದೆ ಇವರಿಗೆ ಜನರ ಭಯನೆ ಇಲ್ಲ. ಅದಕ್ಕೆ ಸರ್ವಜನಿಕರು ಜಾಗೃತಿ ವಹಿಸಿ ಈ ಮಿಸಲಾತಿ ದೊರೆಯುವವರೆಗೂ ಮತ ಚಲಾಯಿಸುದಿಲ್ಲ ಎನ್ನುವ ಶಪತ್ ಮಾಡುವ ಸಂದರ್ಭ ಬಂದೋದಗಿದೆ ಇದನ್ನು ಹಳ್ಳಿ ಹಳ್ಳಿಗಳಲ್ಲಿ ಜನಜಾಗೃತಿ ಕೆಆರ್ಎಸ್ ಪಕ್ಷ ಮಾಡಿ ನಿಮ್ಮ ಹೋರಾಟಕ್ಕೆ ತಳ ಮಟ್ಟದಿಂದ ಬೆಂಬಲ ನೀಡುತ್ತೆವೆ ಎಂದರು.
ಈ ಸಂದರ್ಭದಲ್ಲಿ ಪ್ರವೀಣ ಆಲಹಳ್ಳಿ, ಅಬ್ಬಾಸಲಿ ಬಾಗವಾನ, ಅಪ್ಪಣ್ಣ ಮಾಡ್ಯಾಳ, ಆಕಾಶ ಹಾದಿಮನಿ, ಈರಣ್ಣ ಕುಚಬಾಳ, ಎಸ್.ಎಂ.ರಾಣಾಗೋಳ, ಶಂಕರ ಸುಂಗಠಾಣ, ರೇಖಶ ಬಿರಾದಾರ, ಪುಂಡಲೀಕ ಬಿರಾದಾರ, ಪರಸುರಾಮ ಮಾದರ, ಸಮಿತಿಯ ರಂಗನಾಥ ತೊರ್ೆ, ಅಶೋಕ ಅಲ್ಲಾಪುರ, ಗುರುರಾಜ ಪಡಶೆಟ್ಟಿ, ಶಂಕರ ಮಲ್ಲೇದ, ಪಂಡಿತ ಯಂಪೂರೆ, ಸಂಗಪ್ಪ ಬ್ಯಾಕೋಡ, ಪ್ರಶಾಂತ ಕುಲಕರ್ಣಿ, ವಕೀಲರಾದ ದಾನಪ್ಪಗೌಡ ಚನಗೊಂಡ, ಸಾಯಬಣ್ಣಾ ದೇವರಮನಿ ಸೇರಿದಂತೆ ಹಲವರಿದ್ದರು.