ವಕೀಲರ ಮೇಲಿನ ಹಲ್ಲೆ ಖಂಡಿಸಿ ನ್ಯಾಯಾಲಯದ ಕಲಾಪ ಬಹಿಷ್ಕಾರಕ್ಕೆ ಬೆಂಬಲ
ಲೋಕದರ್ಶನ ವರದಿ
ಸಿಂದಗಿ 06 : ರಾಜ್ಯದಲ್ಲಿ ವಕೀಲರ ಮೇಲೆ ಹಲ್ಲೆ, ಕೊಲೆ ಯಂತಹ ಘಟನೆಗಳನ್ನು ಖಂಡಿಸಿ ನ್ಯಾಯಾಲಯದ ಕಾರ್ಯ ಕಲಾಪ ಬಹಿಸ್ಕರಿಸಿ ವಕೀಲರ ಸಂಘ ಪ್ರತಿಭಟನೆ ನಡೆಸಿ ಬಲಿಷ್ಠ ಕಾನೂನು ಜಾರಿಗೊಳಿಸಬೇಕು ಯಂದು ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಪ್ರತಿಭಟಿಸುವ ಸಂದರ್ಭದಲ್ಲಿ ಬಿಜಾಪುರ್ ಯುವ ನ್ಯಾಯವಾದಿ ಪ್ರವೀಣ ಹುಡೇದಾಳ ಮತ್ತು ಅವರ ಕುಟುಂಬದ ಮೇಲೆ ಮರಣಾಂತಿಕ ಹಲ್ಲೆ ಮಾಡಿದ್ದೂ ಹಲ್ಲೆ ಮಾಡಿದ ಆರೋಪಿಗಳನ್ನು ತಕ್ಷಣ ಬಂದಿಸುವಂತೆ ಆಗ್ರಹಿಸಿ ನ್ಯಾಯಾಲಯದ ಕಾರ್ಯ ಕಲಾಪವನ್ನು ದಿನಾಂಕ 04 ಮತ್ತು 05 ರಂದು ಬಹಿಸ್ಕರಿಸಿ ವಿಜಾಪುರದ ನ್ಯಾಯವಾದಿಗಳ ಸಂಘದ ಹೋರಾಟಕ್ಕೆ ಬೆಂಬಲಿಸಿ ಶೀಘ್ರದಲ್ಲಿ ಆರೋಪಿಗಳನ್ನು ಬಂದಿಸುವಂತೆ ಬಿಜಾಪುರ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಲಕ್ಷಣ ನಿಂಬರಗಿ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಎಸ್.ಬಿ ಪಾಟೀಲ, ವಕೀಲರ ಸಂಘದ ಹಿರಿಯರ ಸಮಿತಿಯ ಅಧ್ಯಕ್ಷ ಎಸ್.ಬಿ ದೊಡ್ಡಮನಿ, ಹಿರಿಯ ವಕೀಲರಾದ ಆರ್ ಎಂ. ಚೌರ,ಎಸ್ ಎಸ್ ಸಿಂಗಾಡಿ, ಆಯ್ ಎಸ್ ಹಿರೇಮಠ, ಪಿ ಬಿ ಬಿರಾದಾರ,ಮಲ್ಲು ಪಡಗಾನೂರ್, ಕಾಶೀನಾಥ್ ಚವ್ಹಾಣ್, ನಾಗೇಶ ಯಳವಂತಗಿ, ಹಾಜಿ ಚಪ್ಪರಬಂಧ, ರಾಹುಲ್ ಅನೇಕರು ಉಪಸ್ಥಿತರಿದ್ದರು