ಸಿಂಧಗಿ

ವಿಜಯಪುರ ಜಿಲ್ಲೆಗೆ 371(ಜೆ) ಸ್ಥಾನಮಾನ ನೀಡಲು ಆಗ್ರಹಿಸಿ ಧರಣಿ

ವಿಜಯಪುರ ಜಿಲ್ಲೆಗೆ 371(ಜೆ) ಸ್ಥಾನಮಾನ ನೀಡಲು ಆಗ್ರಹಿಸಿ ಧರಣಿ

ಲೋಕದರ್ಶನ ವರದಿ 

       ಸಿಂದಗಿ 06 :  ನಗರದ ಬಸವೇಶ್ವರ ಸರ್ಕಲ್ ಹತ್ತಿರ ಗೋಕಾಕ ಚಳವಳಿಯ ರೂವಾರಿ ರೇ.ಚ. ರೇವಡಿಗಾರ ಪ್ರತಿಷ್ಠಾನ ಹಾಗೂ 371(ಜೆ) ಹೋರಾಟ ಸಮಿತಿ ನೇತೃತ್ವದಲ್ಲಿ 32 ದಿನಗಳಿಂದ ನಡೆಯುತ್ತಿರುವ ಧರಣಿ ಸತ್ಯಾಗ್ರಹಕ್ಕೆ ಕುಮಾರ ಇನ್ಪೋಟಿಕ್ ಕಂಪ್ಯೂಟರ ತರಬೇತಿ ಕೇಂದ್ರದವತಿಯಿಂದ ಬೆಂಬಲ ಸೂಚಿಸಿದರು. 

       ಈ ಸಂದರ್ಭದಲ್ಲಿ ಕುಮಾರ ಇನ್ಪೋಟಿಕ್ ಕಂಪ್ಯೂಟರ ತರಬೇತಿ ಕೇಂದ್ರದ ಮುಖ್ಯಸ್ಥ ಕುಮರ ಹಿರೇಮಠ ಮಾತನಾಡಿ, ಕಕ್ಕಳಮೇಲಿ, ಮಾಡಬಾಳ, ಚಟ್ಟರಕಿ, ಮಲಗಾಣ ಶೆಂಬೇವಾಡ, ಸಿಂದಗಿಯಲ್ಲಿದ್ದ ನಿಜಾಮಕಟ್ಟಿ ಸೇರಿದಂತೆ ಅನೇಕ ಬಾಗಗಳಲ್ಲಿ ರಜಾಕರ ಹಾವಳಿಯೀಂದ ಮನೆ ಮಠ ಕಳೆದುಕೊಂಡು ಅವರ ಹೆದರಿಕೆಯಲ್ಲಿ ಅವರಿಗೆ ಆಶ್ರಯ ನೀಡಿದ ಜನರ ಹೆಸರುಗಳು ಕೂಡ ದಾಖಲೆಯಲ್ಲಿವೆ.

          ಅಲ್ಲದೆ 2002ರಿಂದ 2012ರ ವರೆಗೆ ಡಾ. ಡಿ.ಎಂ.ನಂಜುಂಡಪ್ಪ ಸಮಿತಿ ವರದಿಯಲ್ಲಿಯೂ ವಿಜಯಪುರ ಜಿಲ್ಲೆಯನ್ನು ರಾಜ್ಯ ಸರಕಾರದ ಪಟ್ಟಿಯಲ್ಲಿತ್ತು ಮುಂದೆ ಕೇಂದ್ರ ಸರಕಾರಕ್ಕೆ ಕಳಿಸಿದ ಪ್ರಸ್ತಾವನೆಯಲ್ಲಿ ಕೈಬಿಟ್ಟು ಕಳಿಸಿರುವ ಪುರಾವೆಗಳಿವೆ ಈ ಎಲ್ಲ ಅಂಶಗಳನ್ನು ಮರುಪರೀಶೀಲನೆ ಮಾಡಿ ವಿಜಯಪುರ ಜಿಲ್ಲೆಗೆ 371ಜೆ ಅಡಿಯಲ್ಲಿರುವದಕ್ಕಾಗಿ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿ ಅಗತ್ಯ ಸಂವಿಧಾನಾತ್ಮಕ ಕ್ರಮ ಕೈಕೊಂಡು ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು. 

        ಈ ಸಂದರ್ಭದಲ್ಲಿ ರಂಗನಾಥ ತೊರ​‍್ೆ, ಅಶೋಕ ಅಲ್ಲಾಪುರ ಮಾತನಾಡಿದರು. ಪಂಡಿತ ಯಂಪೂರೆ, ಗುರುರಾಜ್ ಪಡಶೆಟ್ಟಿ, ಶಂಕರ ಮಲ್ಲೇದ, ಸಂಗಪ್ಪ ಬ್ಯಾಕೋಡ, ಮಹಾಂತಯ್ಯ ಹಿರೇಮಠ ಯರಗಲ್, ಸಿದ್ದು ಅಂಬಳನೂರ, ಸಾಯಬಣ್ಣಾ ದೇವರಮನಿ ಸೇರಿದಂತೆ ಇನ್ಪೋಟೇಕ್ ಕಂಪ್ಯೂಟರ ತರಬೇತಿ ಕೇಂದ್ರದ ನೂರಾರು ವಿದ್ಯಾರ್ಥಿಗಳು ಇದ್ದರು. 


ಸುದ್ದಿ ಓದಿ