ಅಥಣಿ

ಸಮುದಾಯ ಭವನಗಳಿಗಿಂತ ವಿದ್ಯಾರ್ಥಿ ನಿಲಯಗಳಿಗೆ ಆದ್ಯತೆ ನೀಡಿ, ಸಹಕಾರ ಸಚಿವ ಲಕ್ಷ್ಮಣ ಸವದಿ

ಸಮುದಾಯ ಭವನಗಳಿಗಿಂತ ವಿದ್ಯಾರ್ಥಿ ನಿಲಯಗಳಿಗೆ ಆದ್ಯತೆ ನೀಡಿ, ಸಹಕಾರ ಸಚಿವ ಲಕ್ಷ್ಮಣ ಸವದಿ

             ಅಥಣಿ 24 ; .ಸರಕಾರದ ಅನುದಾನ ಕೇವಲ ಸಮುದಾಯ ಭವನಗಳಿಗೆ ಮೀಸಲಿಡುವುದಕ್ಕಿಂತ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನಕೂಲಕ್ಕಾಗಿ ವಸತಿ ನಿಲಯಗಳನ್ನು ನಿರ್ಮಿಸಿಕೊಳ್ಳಿ ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ಪಂಚಮಸಾಲಿ, ಜೈನ್ ಮತ್ತು ಮಾಳಿ ಸಮಾಜ ಬಂಧುಗಳಿಗೆ ಸಲಹೆ ನೀಡಿದರು.

             ಅವರು ಪಂಚಮಸಾಲಿ ಸಮಾಜದ ವಿದ್ಯಾರ್ಥಿ ನಿಲಯ, ಜೈನ್ ಮತ್ತು ಮಾಳಿ ಸಮಾಜಗಳ ಸಮುದಾಯ ಭವನಗಳಿಗೆ ಭೂಮಿ ಪೂಜೆ ಮತ್ತು ಬಡಕಂಬಿ ತೋಟದ ವಿಘ್ನೇಶ್ವರ ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡ ಸಮುದಾಯ ಭವನ ಉದ್ಘಾಟಿಸಿ ಮಾತನಾಡುತ್ತಿದ್ದರು.  

ಎಲ್ಲ ಸಮಾಜದವರು ತಮ್ಮ ತಮ್ಮ ಸಮಾಜಗಳಿಗೆ ಸಮುದಾಯ ಭವನಗಳು ಬೇಕು ಎಂದು ನನ್ನೆದುರು ಬೇಡಿಕೆ ಈಡುತ್ತಾರೆ.

              ಹೀಗಾಗಿ ಅನಿವಾರ್ಯವಾಗಿ ಅನುದಾನ ಕೊಡಬೇಕಾಗುತ್ತದೆ ಎಂದ ಅವರು ಸಮುದಾಯ ಭವನಗಳನ್ನು ನಿರ್ಮಿಸುವುದಕ್ಕಿಂತ ಸಮಾಜದ ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ವಸತಿ ನಿಲಯಗಳನ್ನು ನಿರ್ಮಿಸಿಕೊಳ್ಳಲು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ವಾಸ್ಟರ್, ಗುತ್ತಿಗೆದಾರ ರಾಜು ಆಲಬಾಳ, ಅಧಿಕಾರಿಗಳಾದ ವೀರಣ್ಣಾ ವಾಲಿ, ರವೀಂದ್ರ ಮೂರ್ಗಾಲಿ, ಮಲ್ಲಿಕಾರ್ಜುನ ಮಗದುಮ್, ಗುರುರಾಜ ಸಂಪಣ್ಣವರ, ಶಿವಾನಂದ ಕಲ್ಲಾಪುರ, ಬಸಗೌಡ ಕಾಗೆ, ರಾಕೇಶ್ ಅರ್ಜುನವಾಡ,

               ಪಂಚಮಸಾಲಿ ಸಮಾಜ ಸಂಘಟನೆ ಅಧ್ಯಕ್ಷ ಶಿವು ಗುಡ್ಡಾಪುರ ಮತ್ತು ವಿಘ್ನೇಶ್ವರ ಸಮುದಾಯ ಭವನದ ಪರವಾಗಿ ರಮೇಶ ಕಾಗಲಿ ಹಾಗೂ ಶ್ರೀಕಾಂತ ಅಸ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಶಿವರುದ್ರ ಘೂಳಪ್ಪನವರ, ಅರುಣ ಭಾಸಿಂಗಿ, ಹಣುಮಂತ ಬಾಸಿಂಗಿ, ಮಲ್ಲೇಶ ಹುದ್ದಾರ, ರಾಮನಗೌಡ ಪಾಟೀಲ, ಕೆ.ಎ.ವಣಜೋಳ, ಡಾ.ಪದ್ಮಜಿತ್ ನಾಡಗೌಡ, ಅರುಣ ಯಲಗುದ್ರಿ, ಎ.ಸಿ.ಪಾಟೀಲ, ಸಂಜೀವ ಮದಭಾವಿ, ಎ.ಎಮ್‌.ಖೊಬ್ರಿ, ಬಸು ಗುಮಟಿ, ರಾಜಶೇಖರ ಗುಡೋಡಗಿ, ಡಿ.ಬಿ.ಠಕ್ಕಣ್ಣವರ, ಸುರೇಶ ವಾಡೇದ, ನರಸು ಬಡಕಂಬಿ, ಪ್ರಭಾಕರ ಚಮಕೇರಿ ಸೇರಿದಂತೆ ಅನೇಕರು ಸೇರಿದಂತೆ ಪಂಚಮಸಾಲಿ, ಮಾಳಿ ಮತ್ತು ಜೈನ್ ಸಮಾಜ ಬಂಧುಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ