ಗದಗ

ತಾಯಿ ಪಾರ್ವತಿ ಮಕ್ಕಳ ಬಳಗದಲ್ಲಿ ಗೌರಿ ಹುಣ್ಣಿಮೆ ಆಚರಣೆ

ತಾಯಿ ಪಾರ್ವತಿ ಮಕ್ಕಳ ಬಳಗದಲ್ಲಿ ಗೌರಿ ಹುಣ್ಣಿಮೆ ಆಚರಣೆ

          ಲಕ್ಷ್ಮೇಶ್ವರ 24:  ಪಟ್ಟಣದ ಹೆಸರಾಂತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಶ್ರೀ ತಾಯಿ ಪಾರ್ವತಿ ಮಕ್ಕಳ ಬಳಗದಲ್ಲಿಆಡಳಿತ ಮಂಡಳಿಯ ಎಲ್ಲ ಮಹಿಳೆಯರು ಶಿಕ್ಷಕಿಯರು ಸಹೋದರಿಯರು ಹೊಸ ಹೊಸ ಬಟ್ಟೆಗಳನ್ನು ಧರಿಸಿ ಸಂಭ್ರಮದೊಂದಿಗೆ ಗೌರಿ ಪೂಜೆ ಮಾಡುವ ಮೂಲಕ ಗೌರಿ ಹುಣ್ಣಿಮೆಯನ್ನು ಸಂಭ್ರಮದೊಂದಿಗೆ ಆಚರಿಸಿದರು ಅದರಂತೆ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಾರ್ವಜನಿಕರು ಅತ್ಯಂತ ಭಕ್ತಿ, ಸಂಭ್ರಮ ಹಾಗೂ ಸಡಗರದಿಂದ ಗೌರಿ ಹುಣ್ಣಿಮೆಯನ್ನು ಆಚರಿಸಿದರು.ಹಬ್ಬದ ಅಂಗವಾಗಿ ಮನೆಮನೆಗಳಲ್ಲಿ ವಿಶೇಷ ಪೂಜೆ ಹಾಗೂ ಸಿಹಿ ಅಡುಗೆಗಳ ಘಮಲು ಕಂಡುಬಂದಿತು.

              ಬೆಳಗ್ಗೆಯಿಂದಲೇ ಮಹಿಳೆಯರು ಮತ್ತು ಯುವತಿಯರು ಹೊಸ ಬಟ್ಟೆಗಳನ್ನು ತೊಟ್ಟು, ಸಕ್ಕರೆ ಆರತಿ ತಟ್ಟೆಗಳನ್ನು ಸಿದ್ಧಪಡಿಸಿಕೊಂಡು ಗೌರಮ್ಮನ ಪ್ರತಿಮೆಗೆ ವಿಶೇಷ ಪೂಜೆ ಸಲ್ಲಿಸಿದರು. ಸಂಜೆ ವೇಳೆ ಮುತ್ತೈದೆಯರು ಪರಸ್ಪರ ಅರಿಶಿನ-ಕುಂಕುಮ ವಿನಿಮಯ ಮಾಡಿಕೊಂಡು, ಸಾಂಪ್ರದಾಯಿಕ ಜಾನಪದ ಹಾಡುಗಳನ್ನು ಹಾಡುತ್ತಾ ಸಕ್ಕರೆ ಆರತಿ ಬೆಳಗಿದ್ದು ವಿಶೇಷವಾಗಿತ್ತು.ಹಬ್ಬದ ನಿಮಿತ್ತ ಮಾರುಕಟ್ಟೆಯಲ್ಲಿ ಸಕ್ಕರೆ ಗೊಂಬೆಗಳು (ಸಕ್ಕರೆ ಆರತಿ), ಹೂವು, ಹಣ್ಣು ಹಾಗೂ ಪೂಜಾ ಸಾಮಗ್ರಿಗಳ ಖರೀದಿ ಜೋರಾಗಿತ್ತು ಗ್ರಾಮೀಣ ಸೊಗಡಿನ ಗೌರಿ ಹುಣ್ಣಿಮೆಯು ಮಹಿಳೆಯರಲ್ಲಿ ಹೊಸ ಹಬ್ಬದ ವಾತಾವರಣವನ್ನು ನಿರ್ಮಿಸಿತ್ತು. 


ಸುದ್ದಿ ಓದಿ