ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆಕನ್ನಡ ಶಾಲೆ ಪ್ರೋತ್ಸಾಹಿಸಲು ಸಮ್ಮೇಳನ ಪ್ರೇರಣೆ
ಲೋಕದರ್ಶನ ವರದಿ
ಹೂವಿನಹಡಗಲಿ 24 : ಮಕ್ಕಳ ಉಜ್ವಲ ಭವಿಷ್ಯಕ್ಕೆ ಹಾಗೂ ಸರಕಾರಿ ಶಾಲೆಗಳನ್ನು ಉಳಿಸಲು ಕೌಶಲ್ಯಯುಕ್ತ ಶಿಕ್ಷಣ ಕನ್ನಡದಲ್ಲಿ ಸಿಗಬೇಕು. ಕನ್ನಡ ಶಾಲೆಗಳನ್ನು ಪ್ರೋತ್ಸಾಹಿಸುವ ನೀತಿ ಜಾರಿಗೊಳಿಸಲು ಸಮ್ಮೇಳನಗಳು ಪ್ರೇರಣೆಯಾಗಿವೆ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ, ಸಬಲೀಕರಣಗೊಳಿಸಲು ಸರ್ಕಾರ ಆದ್ಯತೆ ನೀಡಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಶಶಿಲ್ ನಮೋಶಿ ಹೇಳಿದರು.
ಪಟ್ಟಣದ ರಂಗಭಾರತಿ ರಂಗ ಮಂದಿರದಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ತಾಲ್ಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಲ್ಲಿನ ನಿರ್ಣಯದಂತೆ ಗದಗ ಮುಂಡರಗಿ ಹಡಗಲಿ ಹರಪನಹಳ್ಳಿ ರೈಲು ಮಾರ್ಗ ಕುರಿತು ಕೇಂದ್ರ ರೈಲ್ವೆ ಸಚಿವರ ಗಮನ ಸೆಳೆದು, ಯೋಜನೆ ಜಾರಿಗೆ ಪ್ರಯತ್ನಿಸುವೆ ಎಂದು ತಿಳಿಸಿದರು. ಮುಂಡರಗಿಯ ಆರ್.ಎಲ್.ಪೊಲೀಸ್ ಪಾಟೀಲ ಸಮಾರೋಪ ಭಾಷಣ ಮಾಡಿದರು. ನಿವೃತ್ತ ಪ್ರಾಚಾರ್ಯ ಶಾಂತಮೂರ್ತಿ ಕುಲಕರ್ಣಿ ಅವರು ಹಾಲಪ್ಪ ಚಿಗಟೇರಿಯವರ ’ಕೈದೀವಿಗೆಗಳು’, ಚಂದನ ಸುಜಾತ.ಎಚ್ ರವರ ’ಸಿದ್ಧತೆಗಳಿಗೆ ಸಿದೌಷದ’ ಕೃತಿಗಳನ್ನು ಬಿಡುಗಡೆಗೊಳಿಸಿದರು. ಸಮ್ಮೇಳನ ಅಧ್ಯಕ್ಷ ಡಾ. ಕೆ. ರುದ್ರ್ಪ, ಕಸಾಪ ಅಧ್ಯಕ್ಷ ಟಿ.ವೀರೇಂದ್ರ ಪಾಟೀಲ್, ಮಾಜಿ ಅಧ್ಯಕ್ಷರಾದ ತೋ.ಮ.ಶಂಕ್ರಯ್ಯ ಎಚ್.ಜಿ.ಪಾಟೀಲ, ಕೌಶಲ್ಯಬಾಯಿ, ಎಂ.ಪಿ.ಎಂ.ಮಂಜುನಾಥ ಹಾಲಸ್ವಾಮಿ, ಇಟ್ಟಿಗಿ ಹೋಬಳಿ ಘಟಕದ ಅಧ್ಯಕ್ಷ ಜಿ.ಬಿ.ವಿನಯರಾಜ