ಹೂವಿನ ಹಡಗಲಿ

ಜೈನ ಬಸದಿಯಲ್ಲಿ ಕಾರ್ತಿಕೋತ್ಸವ ಸಂಭ್ರಮ

ಜೈನ ಬಸದಿಯಲ್ಲಿ  ಕಾರ್ತಿಕೋತ್ಸವ ಸಂಭ್ರಮ


ಲೋಕದರ್ಶನ ವರದಿ 

              ಹೂವಿನ ಹಡಗಲಿ ನ.23:  ಪಟ್ಟಣದ ಶ್ರೀ 1008 ಪಾರ್ಶ್ವನಾಥ ದಿಗಂಬರ ಜೈನ ಬಸದಿಯಲ್ಲಿ ಸೋಮವಾರ ಸಡಗರ ಸಂಭ್ರಮದಿಂದ ಕಾರ್ತಿಕೋತ್ಸವ ಆಚರಿಸಲಾಯಿತು. ಕಾರ್ತಿಕೋತ್ಸವದಲ್ಲಿ ದಿಗಂಬರ ಜೈನ ಸಮಾಜದ ಎಲ್ಲಾ ಶ್ರಾವಕ, ಶ್ರಾವಕಿ ಯವರು ದೀಪ ಬೆಳಗಿ ಸಂಭ್ರಮಿಸಿದರು. ಈ ದೀಪಗಳು  ಎಲ್ಲರ ಬಾಳಿನಲ್ಲಿ ಬೆಳಕು ಸುಖ, ಶಾಂತಿ ನೆಮ್ಮದಿ ತರಲಿ ಎಂದು ಭಗವಂತರಲ್ಲಿ ಪ್ರಾರ್ಥಿಸಲಾಯಿತು.

            ಎಂದು ತಾಲೂಕು ಜೈನ ಸಮಾಜದ ಅಧ್ಯಕ್ಷರಾದ ಎಚ್ ಎಸ್ ಪ್ರಶಾಂತ ತಿಳಿಸಿದರು.ಜ್ವಾಲಾಮಾಲಿನಿ ಮಹಿಳಾ ಸಂಘದ ಸದಸ್ಯರು ರಂಗೋಲಿ ಹೂವಿನ ಅಲಂಕಾರ ಎಲ್ಲವನ್ನೂ ರಾಜಣ್ಣ ವನಕುದ್ರಿ ಅವರ ಮಾರ್ಗದರ್ಶನದಲ್ಲಿ ಅತ್ಯಂತ ಸುಂದರವಾಗಿ, ಅಚ್ಚುಕಟ್ಟಾಗಿ  ನಿರ್ವಹಿಸಿದರು.ಇದಕ್ಕಾಗಿ ಶ್ರಮಿಸಿದ ಸಹಕಾರ ನೀಡಿದ ಎಲ್ಲರಿಗೂ ಸಮಾಜದ ಅಧ್ಯಕ್ಷರು ಹಾಗೂ ಮಹಿಳಾ ಸಂಘದ ಅಧ್ಯಕ್ಷೆ ಎಂ ಡಿ ಪದ್ಮಾವತಿ ಧನ್ಯವಾದಗಳನ್ನು ಅರ​‍್ಿಸಿದರು.ಸಮಾಜದ ಹಿರಿಯರು ಇತರರು ಇದ್ದರು. 


ಸುದ್ದಿ ಓದಿ