ಸಮ್ಮೇಳನ ಸರ್ವಾಧ್ಯಕ್ಷ ಡಾ.ಕೆ.ರುದ್ರ್ಪ ನುಡಿಸಾಹಿತ್ಯ ಮನುಷ್ಯನಿಗೆ ಚೈತನ್ಯ ನೀಡುವ ಸಂಜೀವಿನಿ ಶಕ್ತಿ
ಲೋಕದರ್ಶನ ವರದಿ
ಹೂವಿನಹಡಗಲಿ ನ.23: ಸಾಹಿತ್ಯ,”ಕೃತಿ ಕೇವಲ ಮನಸ್ಸಿಗೆ ಮುದ ನೀಡುವ ಸಾಧನವಲ್ಲ, ಮನುಷ್ಯನ ಬದುಕಿಗೆ, ಚೈತನ್ಯ ನೀಡುವ ಸಂಜೀವಿನಿ ಶಕ್ತಿ, ನಾನಾ ಸಂಕಷ್ಟಗಳ ನಡುವೆ ಮನುಷ್ಯನಿಗೆ ಸಮಷ್ಟಿ ದೃಷ್ಟಿಕೋನ ನೀಡುವ ಸಾಮರ್ಥ್ಯ ಇದೆ ಎಂದು ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಡಾ.ಕೆ.ರುದ್ರ್ಪ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಹಿತ್ಯ ವರಿಷತ್ತು ಸಂಸತ್ತು ತಾಲೂಕು ಘಟಕ ಹಮ್ಮಿಕೊಂಡಿದ್ದ 2ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರ ಮಾತನಾಡಿದರು.”ಹೂವಿನಹಡಗಲಿಗೆ ತನ್ನದೇ ಆದ ಭೌಗೋಳಿಕ, ಧಾರ್ಮಿಕ, ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಹಿನ್ನೆಲೆಯಿದೆ. ನಾಡಿನಲ್ಲಿ ಅತಿವೃಷ್ಟಿ ಅನಾವೃಷ್ಟಿ ಪ್ರಾಕೃತಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮತ್ತು ಜನಸಮುದಾಯಕ್ಕೆ ಮಾನಸಿಕ ಧೈರ್ಯ ತುಂಬಲು ಸಾಹಿತ್ಯ ನೆರವಾಗುತ್ತದೆ.
ಶಾಸನಗಳಿಂದ ಆರಂಭವಾದ ನಮ್ಮ ಕನ್ನಡ, ಜಾಗತಿಕ ಮಟ್ಟದಲ್ಲಿ ತನ್ನ ಶ್ರೀಮಂತಿಕೆಯನ್ನು ಗದ್ದೆ, ಕಾವ್ಯ, ಮತನ, ಕೀರ್ತನೆ, ಕಾದಂಬರಿಗಳ ಮೂಲಕ ಸಮೃದ್ಧವಾಗಿ ಹೂವಿನಹಡಗಲಿ ಕಾಲಘಟ್ಟಗಳಲ್ಲಿಯೂ ಅಪ್ರತಿಮ ಸಾರಸನ ಲೋಕದ ರಸ ಋಷಿಗಳನ್ನು ನಾಡಿಗೆ ನೀಡಿದೆ," ಎಂದು ಬಣ್ಣಿಸಿದರು.
ಹೂವಿನಹಡಗಲಿ ಆಗಿದ್ದು,"14-15ನೇ ಶತಮಾನದಿಂದಲೇ ಈ ಭಾಗದಲ್ಲಿ ಬೆಳೆಯುತ್ತಿದ್ದ ಹೂವನ್ನು ತುಂಗಭದ್ರಾ ನದಿಯಲ್ಲಿ ತೆಪ್ಪದ ಮೂಲಕ ವಿಜಯನಗರದ ಅರಸರು ಹಾಗೂ ಹಂಪಿಯ ವಿರೂಪಾಕ್ಷೇಶ್ವರ ಸ್ವಾಮಿಗೆ ಕಳಿಸುತ್ತಿದ್ದರೆಂಬುದನ್ನು ಕಡೆಗಳಿಂದ ತಿಳಿದು ಕೊಳ್ಳುತ್ತೇವೆ. ಹೀಗಾಗಿ ಇಂದು ಹೂವಿನಹಡಗಲಿಯಾಗಿ ಚಿರಪರಿಚಿತವಾಗಿ ಉಳಿದಿದೆ. ಪ್ರಸ್ತುತ ದಿನಗಳಲ್ಲಿ ಎಲ್ಲ ಜನಪ್ರತಿನಿಧಿಗಳು ಹೂವಿನಹಡಗಲಿ ಪ್ರಗತಿಗೆ ಶ್ರಮಿಸಿದ್ದಾರೆ ಎಂದರು.