ಕಸಾಪ ಸಮ್ಮೇಳನ ಕನ್ನಡ ಸೇವೆಗೆ ಸಂದ ಗೌರವ
ಲೋಕದರ್ಶನ ವರದಿ
ಹೂವಿನ ಹಡಗಲಿ 21 : ಸಾಹಿತ್ಯ ಜಾನಪದ ಬಯಲಾಟ ಕನ್ನಡ ಅಧ್ಯಾಪಕ ವೃತ್ತಿ ರಂಗಭೂಮಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದುಡಿದ ಡಾ. ಕೆ ರುದ್ರ್ಪ ರವರನ್ನು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನೇಮಕ ಆಗಿರುವುದು ಸೇವೆಗೆ ಸಂದ ಗೌರವ ಎಂದು ಪ್ರಾಚಾರ್ಯ ಎಚ್. ಮಲ್ಲಿಕಾರ್ಜುನ ಹೇಳಿದರು.ಪಟ್ಟಣದ ವಿಜಯನಗರ ಬಡಾವಣೆಯಲ್ಲಿ ಅವರ ಮನೆಗೆ ಭೇಟಿ ನೀಡಿ ಶಾಲು ಪೇಟ ತೊಡಿಸಿ ಗೌರವ ಸನ್ಮಾನ ನೆರೆವೇರಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ತೇರು ಎಳೆಯಲು ಮಹತ್ತರ ಪಾತ್ರ ವಹಿಸಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ರಾಜ್ಯ ಮಟ್ಟದ ಜಾನಪದ ಸಮಾವೇಶ ಸಂಘಟನೆ ಸೇರಿದಂತೆ ಈಗಲೂ ಗ್ರಾಮೀಣ ಪ್ರದೇಶಗಳಲ್ಲಿ ಜನರ ಜೀವನಾಡಿ ಬಯಲಾಟ ಪರಂಪರೆ ಬೆಳೆಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ಕನ್ನಡ ಜಾಗೃತಿ ಜಿಲ್ಲಾ ಸದಸ್ಯ ಸುರೇಶ ಅಂಗಡಿ ಮಾತನಾಡಿ ಗ್ರಾಮೀಣ ಪ್ರದೇಶದಿಂದ ಉನ್ನತ ಸ್ಥಾನಕ್ಕೆ ಏರಿದ ಡಾ. ಕೆ ರುದ್ರ್ಪ ರವರ ಸಾಹಿತ್ಯ ಬಯಲಾಟ ಕ್ಷೇತ್ರದಕಾಯಕ ಯುವಪೀಳಿಗೆ ಅನುಕರಣೀಯ ಎಂದು ಪ್ರಶಂಸಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಕಾರ್ಯದರ್ಶಿ ಪದ್ಮರಾಜ್ ಜೈನ್ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಗರಾಜ್ ಮಲ್ಕಿಒಡೆಯರ್ ರಂಗಭಾರತಿ ಕಲಾವಿದ ಮಂಜುನಾಥ ಪಾಟೀಲ್ ಪತ್ರಕರ್ತ ಉಪನ್ಯಾಸಕ ಎಂ ದಯಾನಂದ ಕರ್ನಾಟಕ ಲೇಖಕಿಯರ ಸಂಘದ ಸದಸ್ಯೆ ಸವಿತಾ ಅಂಗಡಿ ಇತರರು ಇದ್ದರು.