ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇಯಲ್ಲಿ ಆಂಬುಲೆನ್ಸ್–ಪಿಕಪ್ ವ್ಯಾನ್ ಡಿಕ್ಕಿ, ಐವರು ಸಾವು
ಬಾರಾಬಂಕಿ, ನ. 21 — ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇಯಲ್ಲಿ ಮೃತದೇಹ ಸಾಗಿಸುತ್ತಿದ್ದ ಆಂಬುಲೆನ್ಸ್ ಮತ್ತು ಪಿಕಪ್ ವ್ಯಾನ್ ನಡುವೆ ಶನಿವಾರ ಬೆಳಿಗ್ಗೆ ಡಿಕ್ಕಿ ಸಂಭವಿಸಿದ್ದು, ಆಂಬುಲೆನ್ಸ್‌ನಲ್ಲಿದ್ದ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸುಬಹಾ ಪೊಲೀಸ್ ಠಾಣೆ ವ್ಯಾಪ್ತಿಯ ಎಕ್ಸ್‌ಪ್ರೆಸ್‌ವೇಯ 53.3ನೇ ಕಿಲೋಮೀಟರ್ ಗುರುತಿನ ಬಳಿ ಬೆಳಿಗ್ಗೆ 6.30ರ ಸುಮಾರಿಗೆ ಅಪಘಾತ ಸಂಭವಿಸಿದೆ. ಆಂಬುಲೆನ್ಸ್ ರಾಜಸ್ಥಾನದ ಜೈಪುರದಿಂದ ಪಶ್ಚಿಮ ಬಂಗಾಳಕ್ಕೆ ಮೃತದೇಹ ಸಾಗಿಸುತ್ತಿತ್ತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿವೇಕ್ ತಿವಾರಿ ತಿಳಿಸಿದ್ದಾರೆ.
ಮೃತರನ್ನು ಜೈಪುರದ ಜವಾಹರ್ ನಗರದ ಕಚ್ಚಿ ಬಸ್ತಿ ನಿವಾಸಿ ಮಕ್ಬೂಲ್ ಖಾನ್ (62), ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಪಿಪಲ್‌ಖೇರ್ ನಿವಾಸಿ ಹರಿಓಂ ಯೋಗಿ (33) ಹಾಗೂ ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯ ಮೋತಿವಾಲಾ ನಿವಾಸಿಗಳಾದ ಅಮಿನುಲ್ ಹಕ್ (32), ರಫೀಕ್ (50) ಮತ್ತು ಆಲಂ ಎಂದು ಗುರುತಿಸಲಾಗಿದೆ.