ರಾಷ್ಟ್ರೀಯ

ಪ್ರಕಾಶಂ ಜಿಲ್ಲೆಯಲ್ಲಿ ಕಾರು ಅಪಘಾತ: ನಾಲ್ವರು ಸಾವು, ನವದಂಪತಿಗೆ ಗಾಯ

ಪ್ರಕಾಶಂ ಜಿಲ್ಲೆಯಲ್ಲಿ ಕಾರು ಅಪಘಾತ: ನಾಲ್ವರು ಸಾವು, ನವದಂಪತಿಗೆ ಗಾಯ

ಒಂಗೋಲು, ನ. 21 : ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಪೆಲ್ಲೂರು ಗ್ರಾಮದ ಬಳಿ ಶನಿವಾರ ರಾಷ್ಟ್ರೀಯ ಹೆದ್ದಾರಿಯಿಂದ ಬದಿಗೆ ಸರಿದ ಕಾರು ರಸ್ತೆಬದಿಯ ಕಿರುಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ನವದಂಪತಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಿರುಪತಿಯಲ್ಲಿ ವಿವಾಹವಾಗಿದ್ದ ಶ್ರೀತೇಜ್ ಮತ್ತು ಕೈವಲ್ಯ ಅವರು ಸಂಬಂಧಿಕರೊಂದಿಗೆ ಬಾಪಟ್ಲಾಕ್ಕೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಮೃತರನ್ನು ವೆಂಕಟ ರಾವ್, ಸುಜಾತಾ, ಸೀತಾಮಹಾಲಕ್ಷ್ಮಿ ಮತ್ತು ಕಾರಿನ ಚಾಲಕ ಪ್ರವೀಣ್ ಎಂದು ಗುರುತಿಸಲಾಗಿದೆ. ಗಾಯಗೊಂಡ ನವದಂಪತಿಯನ್ನು ಚಿಕಿತ್ಸೆಗಾಗಿ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಚಾಲಕನಿಗೆ ನಿದ್ರೆ ಮಂಪರು ಆವರಿಸಿದ್ದರಿಂದ ಕಾರು ಹೆದ್ದಾರಿಯಿಂದ ಬದಿಗೆ ಸರಿದಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ಸರ್ಕಾರಿ ಜನರಲ್ ಆಸ್ಪತ್ರೆಗೆ ರವಾನಿಸಲಾಗಿದೆ.

ಆಂಧ್ರಪ್ರದೇಶದ ಸಚಿವರಾದ ನಾರಾ ಲೋಕೇಶ್, ವಿ. ಅನಿತಾ ಮತ್ತು ಗೊಟ್ಟಿಪಾಟಿ ರವಿ ಕುಮಾರ್ ಅಪಘಾತದಲ್ಲಿ ನಾಲ್ವರು ಮೃತಪಟ್ಟಿರುವುದಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಸುದ್ದಿ ಓದಿ