ಶಿಗ್ಗಾವ್

ಸರ್ಕಾರಿ ಸೇವೆಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವ ವಿಶೇಷ ಅಭಿಯಾನ: ಶಾಸಕ ಪಠಾಣ

ಸರ್ಕಾರಿ ಸೇವೆಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವ ವಿಶೇಷ ಅಭಿಯಾನ: ಶಾಸಕ ಪಠಾಣ

 

              ಶಿಗ್ಗಾವಿ   21: ಸಾರ್ವಜನಿಕರ ಕುಂದುಕೊರತೆಗಳನ್ನು ಸ್ಥಳದಲ್ಲೇ ತ್ವರಿತವಾಗಿ ಬಗೆಹರಿಸಲು ಮತ್ತು ಸರ್ಕಾರಿ ಸೇವೆಗಳನ್ನು ಜನರ ಮನೆಬಾಗಿಲಿಗೆ ತಲುಪಿಸಲು ಹಮ್ಮಿಕೊಂಡಿರುವ ವಿಶೇಷ ಅಭಿಯಾನವೇ ಪ್ರಜಾ ಸೇವಾ ಆಂದೋಲನವಾಗಿದೆ ಎಂದು ಶಾಸಕ ಯಾಸೀರ ಅಹ್ಮದಖಾನ ಪಠಾಣ ಹೇಳಿದರು.  ತಾಲೂಕಿನ ದುಂಡಶಿಯಲ್ಲಿ ಹೋಬಳಿ ಮಟ್ಟದ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ತಾಲೂಕಿನ ಎಲ್ಲಾ ಇಲಾಖೆಗಳ ಸೇವೆಗಳು ಒಂದೇ ಸೂರಿನಡಿ ಸಾರ್ವಜನಿಕರಿಗೆ ಲಭ್ಯವಾಗಿ ತ್ವರಿತವಾಗಿ ಪರಿಹಾರ ಸಿಗಲಿ ಎಂಬ ಸಂಕಲ್ಪ ಸಿ.ಎಂ. ಡಿ.ಕೆ.ಶಿವಕುಮಾರ್ ಅವರದ್ದಾಗಿದೆ.

             ಆದ್ದರಿಂದ ತಾಲೂಕಮಟ್ಟ, ಹೊಬಳಿಮಟ್ಟ ಹಾಗೂ ಗ್ರಾಮ ಮಟ್ಟದಲ್ಲಿ ಪ್ರಜಾ ಸೇವಾ ಆಂದೋಲನ ಹಮ್ಮಿಕೊಂಡು ಗ್ರಾಮಸ್ಥರ ಜಲ್ವಂತ ಸಮಸ್ಯೆಗಳನ್ನು ಪರಿಹರಿಸಲು ಉತ್ತಮ ವೇದಿಕೆಯಾಗಿದೆ ಎಂದರು.   ಅರ್ಜಿಗಳು ಕಂದಾಯ 25, ಆರ್‌.ಡಿ.ಪಿ.ಆರ್ 15, ಪಡಿತರ ವಿತರಣೆ 10 ಹಾಗೂ ವಿವಿಧ ಇಲಾಖೆಯಿಂದ ತಲಾ 1 ಮತ್ತು 2 ಅರ್ಜಿ ಸೇರಿದಂತೆ ಒಟ್ಟು 62 ಅರ್ಜಿಗಳು ಸಲ್ಲಿಕೆಯಾದವು ಅದರಲ್ಲಿ 18 ಅರ್ಜಿಗಳ ಸಮಸ್ಯೆಗೆ ಪರಿಹಾರ ಸಿಕ್ಕಿತು.    ಈ ಸಂದರ್ಭದಲ್ಲಿ ತಹಶೀಲ್ದಾರ ಡಿ.ಟಿ.ವಾಲ್ಮೀಕಿ, ಇಓ ಮಂಜುನಾಥ ಸಾಳೊಂಕೆ, ಜಿಲ್ಲಾ ಗ್ಯಾರಂಟಿ ಸಮಿತಿ ಉಪಾಧ್ಯಕ್ಷ ಗುಡ್ಡಪ್ಪ ಜಲದಿ, ತಾಲೂಕ ಗ್ಯಾರಂಟಿ ಅಧ್ಯಕ್ಷ ಶೇಖಪ್ಪ ಮಣಕಟ್ಟಿ, ಅಣ್ಣಪ್ಪ ಲಮಾಣಿ, ಆನಂದ ಲಮಾಣಿ ಸೇರಿದಂತೆ ವಿವಿಧ ಇಲಾಖೆಯ ಮುಖ್ಯಸ್ಥರು ಉಪಸ್ಥಿತರಿದ್ದರು. 


ಸುದ್ದಿ ಓದಿ