ಬಿಜೆಪಿ ಪಕ್ಷದವರು ಜನರ ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ : ಶಾಸಕ ಪಠಾಣ
ಶಿಗ್ಗಾವಿ 16 : ಜನರು ಅಧಿಕಾರ ಕೊಟ್ಟಾಗ ಬಿಜೆಪಿ ಸರ್ಕಾರ ಮಾಡದ ಕೆಲಸವನ್ನು ಕಾಂಗ್ರೇಸ್ ಸರ್ಕಾರ ಮಾಡುತ್ತಲಿದೆ. ಕಾಂಗ್ರೇಸ್ ಸರ್ಕಾರ ಮಾಡಿದ ಕೆಲಸವನ್ನು ಬಿಜೆಪಿ ಪಕ್ಷದವರು ನಾವು ಮಾಡಿದ ಕೆಲಸ ಎಂದು ಜನರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಶಾಸಕ ಯಾಸೀರ ಅಹ್ಮದಖಾನ ಪಠಾಣ ಹೇಳಿದರು.
ತಾಲೂಕಿನ ವನಹಳ್ಳಿ, ಕಾಮನಹಳ್ಳಿ, ಗೊಟಗೋಡಿ, ಬಿಶೆಟಿಕೊಪ್ಪ, ಕೃಷಿನಗರ ಹಾಗೂ ಕುಂದೂರ ಗ್ರಾಮಗಳಲ್ಲಿವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು ಈ ತಂತ್ರಜ್ಞಾನದ ಯುಗದಲ್ಲಿ ಸುಳ್ಳುಹೇಳುವವರಿಗೆ ಕಾಲವಿಲ್ಲ. ಕೇವಲ ಶಾಸಕನಾಗಿ 2 ವರ್ಷಗಳ ಅವದಿಯಲ್ಲಿ 2 ಸಾವಿರಕೋಟಿಗಿಂತಲೂ ಹೆಚ್ಚು ಅನುದಾನತಂದು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. 8 ಸಾವಿರ ಕುಟುಂಬಗಳಿಗೆ ಹಕ್ಕು ಪತ್ರ ನೀಡಿದ ಹೆಮ್ಮೆ ಇದೆ ಎಂದರು.