ಒನಕೆ ಓಬವ್ವ ಜಯಂತಿ ಬಹಿಷ್ಕರಿಸಿದ ಮುಖಂಡರು
ಶಿಗ್ಗಾವಿ 11: ಒನಕೆ ಓಬವ್ವ ಜಯಂತಿ ನಿಮಿತ್ತವಾಗಿ ಚಲವಾದಿ ಸಮಾಜದ ಮುಖಂಡರಿಗೆ ಶಿಗ್ಗಾವಿ ತಹಶೀಲ್ದಾರ್ ಯಾವುದೇ ಪೂರ್ವಭಾವಿ ಸಭೆ ಮಾಡದೆ ಚಲವಾದಿ ಸಮಾಜದ ಮುಖಂಡರಿಗೆ ದಿ 11 ಬೆಳಿಗ್ಗೆ 10 ಗಂಟೆಗೆ ಮೂರು ಜನಕ್ಕೆ ಮಾತ್ರ ಫೋನ್ ಮಾಡಿದ್ದು ತಾಲೂಕಿನ ಎಲ್ಲಾ ಮುಖಂಡರಿಗೂ ಯಾವ ವಿಷಯ ತಿಳಿಸಿಲ್ಲ ಅದಕ್ಕಾಗಿ ಸಮಾಜದ ಪ್ರಮುಖರು ತಹಶೀಲ್ದಾರ ಕಾರ್ಯಾಲಯದಲ್ಲಿ ಜಯಂತಿ ಮಾಡುವುದನ್ನು ಸಮಾಜದ ಮುಖಂಡರ ಗಮನಕ್ಕೆ ತರದೆ ಜಯಂತಿ ಆಚರಣೆ ಮಾಡುವುದನ್ನು ಖಂಡಿಸಿ ಬಹಿಷ್ಕರಿಸಿದರು.
ಈ ಸಂದರ್ಭದಲ್ಲಿ ಚಲವಾದಿ ಮುಖಂಡರಾದ ಪರಶುರಾಮ್ ಕಾಳೆ, ಶಂಕರಣ್ಣ ಇಂಗಳಗಿ, ತಾಲೂಕ ಅಧ್ಯಕ್ಷ ಪ್ರಮೋದ ಚಲವಾದಿ, ಅಶೋಕ ಕಾಳೆ, ಸಿಎನ್ ಕಲಕೋಟಿ, ಕರ್ನಾಟಕ ಅಂಬೇಡ್ಕರ್ ಹಿಂದುಳಿದ ವೇದಿಕೆ ರಾಜ್ಯ ಸಂಘಟನೆ ಸಂಚಾಲಕ ಮುಕ್ತಾರಖಾನ ತಿಮ್ಮಾಪುರ್, ನಾಗರಾಜ ಚನ್ನದಾಸರ್,ಹನುಮಂತ ಕಾಳೆ, ಅಬ್ದುಲ್ ಕಾನ್ ಪಟಾಣ, ನೀಲಮ್ಮ ಕಾಳವಾಡ ಸೇರಿದಂತೆ ಚಲವಾದಿ ಸಮಾಜ ಭಾಂದವರು ಉಪಸ್ಥಿತರಿದ್ದರು.