ಆರ್ ಎಂ ಶಹಾ ಸ್ಕೂಲಿನಲ್ಲಿ ರಾಷ್ಟ್ರೀಯ ಶಿಕ್ಷಣ ದಿನದ ಆಚರಣೆ
ಲೋಕದರ್ಶನ ವರದಿ
ಇಂಡಿ 11: ನವೆಂಬರ್ 11, 2026: ಆರ್. ಎಂ. ಶಹಾ. ಪಬ್ಲಿಕ್ ಸ್ಕೂಲ್ ಮತ್ತು ಎಫ್. ಕೆ. ದೋಶಿ ಸೈನ್ಸ್ ಪಿಯು ಕಾಲೇಜಿನಲ್ಲಿ ರಾಷ್ಟ್ರೀಯ ಶಿಕ್ಷಣ ದಿನವನ್ನು ಉತ್ಥಾನ ಪ್ರಾರ್ಥನಾ ಹಾಡಿನ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಮಾಡಿ ಮೌಲನಾ ಅಬುಲ್ ಕಲಾಂ ಆಜಾದ್ ಕೊಡುಗೆ ಎಂದು ಸ್ಮರಿಸಲಾಯಿತು ಇವರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಪ್ರತಿಯೊಬ್ಬ ವ್ಯಕ್ತಿಗೆ ಶಿಕ್ಷಣ ಹಕ್ಕು ದೊರಕಬೇಕು ಎಲ್ಲರೂ ಮೌಲ್ಯಾಧಾರಿತ ಶಿಕ್ಷಣ ಪಡೆಯಬೇಕು.
ಆಗ ಮಾತ್ರ ವ್ಯಕ್ತಿಯು ಉತ್ತಮ ವ್ಯಕ್ತಿತ್ವವನ್ನು ಹೊಂದಲು ಸಾಧ್ಯ ಶಿಸ್ತು, ಸಮಯ ಪ್ರಜ್ಞೆ, ಸಂಸ್ಕಾರ ಈ ಎಲ್ಲಾ ಗುಣಗಳು ಅಳವಡಿಸಿಕೊಳ್ಳಬೇಕು ಎಂದು ಈ ಮೂಲಕ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಕಾಲೇಜಿನ ಪ್ರಾಚಾರ್ಯರಾದ ಸುನಿತಾ ತುಂಬಳ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಾಲೆಯ ಪ್ರಾಚಾರ್ಯರಾದ ಪ್ರಕಾಶ್ ಪಾಟೀಲ ಶೈಕ್ಷಣಿಕ ಸಲಹೆಗಾರರಾದ ನಜೀರ್ ಹುಂಡೆಕರ್ ಉಪ ಪ್ರಾಂಶುಪಾಲರಾದ ಅನಿಷಾ ಮೇಡಂ, ಶಾಲಾ ಸಂಯೋಜಕರು ಅಲ್ಲಾಭಕ್ಷ ಉಕ್ಕಲಿ ಹಾಗೂ ಶಾಲಾ ಕಾಲೇಜಿನ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಕಾರ್ಯಕ್ರಮದ ಫಲಕದಲ್ಲಿ ಎಂಬ ಸಂದೇಶವನ್ನು ಪ್ರದರ್ಶಿಸಲಾಗಿತ್ತು. ಶಿಕ್ಷಣದ ಮಹತ್ವವನ್ನು ಸಾರುವ ಈ ದಿನವನ್ನು ಶಾಲಾ ಆವರಣದಲ್ಲಿ ಆಚರಿಸಲಾಯಿತು.