ಶಿಗ್ಗಾವ್

ರಾಜ್ಯ ಸಂಘಟನಾ ಸಂಚಾಲಕರಾಗಿ ಮುಕ್ತಾರಖಾನ ತಿಮ್ಮಾಪೂರ ನೇಮಕ

ರಾಜ್ಯ ಸಂಘಟನಾ ಸಂಚಾಲಕರಾಗಿ ಮುಕ್ತಾರಖಾನ ತಿಮ್ಮಾಪೂರ ನೇಮಕ


 ಶಿಗ್ಗಾವಿ 07: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಅಂಬೇಡ್ಕರ್ ಹಿಂದುಳಿದವರ ಜೀವಿಕೆ (ರಿ) ಬೆಂಗಳೂರು, ಸಂಸ್ಥಾಪಕ ರಾಜ್ಯಾಧ್ಯಕ್ಷೆ ಜಯಮ್ಮ.ಎಸ್‌. ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ ಬಿ.ವಿ ನೇತೃತ್ವದಲ್ಲಿಬಿ.ಆರ್ ಅಂಬೇಡ್ಕರ್ ರವರ ತತ್ವ ಸಿದ್ಧಾಂತಗಳಿಗೆ ಬದ್ಧವಾಗಿ ಸತ್ಯ ಪ್ರಮಾಣಿಕತೆಯಿಂದ ನೊಂದವರಿಗೆ ಸಾಮಾಜಿಕ ನ್ಯಾಯ ನೀಡುವ ನಿಟ್ಟಿನಲ್ಲಿ ಸಂಘಟನೆಯನ್ನು ಸದೃಡಗೋಳಿಸಲು ಕರ್ನಾಟಕ ರಾಜ್ಯ ಸಮೀತಿ ಆದೇಶದ ಮೇರೆಗೆ ಪಟ್ಟಣದ ಸಮಾಜಸೇವಕ ಮುಕ್ತಾರಖಾನ.ಪಿ. ತಿಮ್ಮಾಪೂರ ಅವರನ್ನು ರಾಜ್ಯ ಸಂಘಟನಾ ಸಂಚಾಲಕರಾಗಿ ನೇಮಕ ಮಾಡಿ ಆದೇಶ ಪತ್ರ ನೀಡಲಾಗಿದೆ. 


ಸುದ್ದಿ ಓದಿ