ಬೆಳಗಾವಿ

ಬೆಳಗಾವಿಯಲ್ಲಿ ‘ಅಳಿಯ ಬಂದ ಮೋಜನು ತಂದ’ ಹಾಸ್ಯ ಕಾರ್ಯಕ್ರಮ

ಬೆಳಗಾವಿಯಲ್ಲಿ ‘ಅಳಿಯ ಬಂದ ಮೋಜನು ತಂದ’ ಹಾಸ್ಯ ಕಾರ್ಯಕ್ರಮ

ಲೋಕದರ್ಶನ ವರದಿ 

            ಬೆಳಗಾವಿ 11: ನಗರದ ಹಾಸ್ಯಕೂಟ ಹಾಗೂ ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ವತಿಯಿಂದ ದೀಪಾವಳಿ ನಿಮಿತ್ತ ಇದೇ 14ರಂದು ಶನಿವಾರ ಸಂಜೆ 4.30ಕ್ಕೆ ಚೆನ್ನಮ್ಮ ವೃತ್ತದ ಬಳಿಯ ಕನ್ನಡ ಸಾಹಿತ್ಯ ಭವನದಲ್ಲಿ ‘ಅಳಿಯ ಬಂದ ಮೋಜನು ತಂದ’ ಎಂಬ ಹಾಸ್ಯ ಕಾರ್ಯಕ್ರಮ ಆಯೋಜಿಸಲಾಗಿದೆ.

        ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರ್‌ಎಲ್‌ಎಸ್ ಕಾನೂನು ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಪ್ರೊ. ವಿ.ಎನ್‌. ಜೋಶಿ ವಹಿಸಲಿದ್ದಾರೆ. ನಿವೃತ್ತ ಬ್ಯಾಂಕ್ ಮುಖ್ಯ ಪ್ರಬಂಧಕ ಆರಿ​‍್ವ. ಭಟ್ಟ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿಕೊಂಡಿದ್ದಾರೆ.  

         ನಗೆಮಾತುಗಾರರಾದ ಯಶವಂತ ವಾಜಂತ್ರಿ, ಪ್ರೊ. ಜಿ.ಕೆ. ಕುಲಕರ್ಣಿ ಹಾಗೂ ಎಂ.ಬಿ. ಹೊಸಳ್ಳಿ ಅವರು ಅಳಿಯನ ಅವಾಂತರಗಳನ್ನು ಹಾಸ್ಯಮಯವಾಗಿ ಹಂಚಿಕೊಂಡು ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಚಿದಂಬರ ಮುನವಳ್ಳಿ ಕಾರ್ಯಕ್ರಮ ನಿರೂಪಿಸಲಿದ್ದು, ರಾಮಚಂದ್ರ ಕಟ್ಟಿ ಉಪಸ್ಥಿತರಿರಲಿದ್ದಾರೆ.

            ಗುಂಡೇನಟ್ಟಿ ಮಧುಕರ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಹಾಸ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ನಗೆಹಬ್ಬದಲ್ಲಿ ಭಾಗಿಯಾಗಿ ಮನಸ್ಸನ್ನು ಹಗುರಾಗಿಸಿಕೊಳ್ಳುವಂತೆ ಸಂಘಟಕರಾದ ಜಿ.ಎಸ್‌. ಸೋನಾರ, ಅರವಿಂದ ಹುನಗುಂದ ಹಾಗೂ ತಾನಾಜಿ ಮನವಿ ಮಾಡಿದ್ದಾರೆ. 


ಸುದ್ದಿ ಓದಿ