ಬೆಳಗಾವಿ

ಭಾಷಣ ಸ್ಪರ್ಧೆಯಲ್ಲಿ ತೇಜಸ್ ದೀಲೀಪ್ ಕೊಡಗ್ ಗೆ ದ್ವಿತೀಯ ಸ್ಥಾನ ಹಿ ರಾಜ್ಯಮಟ್ಟದ ಯುವ ಸಂಸತ್‌ಗೆ ಆಯ್ಕೆ

ಭಾಷಣ ಸ್ಪರ್ಧೆಯಲ್ಲಿ  ತೇಜಸ್ ದೀಲೀಪ್ ಕೊಡಗ್ ಗೆ ದ್ವಿತೀಯ ಸ್ಥಾನ ಹಿ ರಾಜ್ಯಮಟ್ಟದ ಯುವ ಸಂಸತ್‌ಗೆ ಆಯ್ಕೆ
Tejas Dileep Kodag secures second place in speech competition; selected for state-level Youth Parlia


       ಬೆಳಗಾವಿ   11: ಬೆಳಗಾವಿಯ ಕೆಎಲ್‌ಎಸ್ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿ ತೇಜಸ್ ದೀಲೀಪ್ ಕೊಡಗ್ ಅವರು ವಿಕಸಿತ ಭಾರತ ಯಂಗ್ ಇಂಡಿಯನ್ ಡೈಲಾಗ್ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗಿದ್ದ ಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು, ರಾಜ್ಯಮಟ್ಟದ ಯುವ ಸಂಸತ್‌ಗೆ ಆಯ್ಕೆಯಾಗಿದ್ದಾರೆ.   

          ಭಾರತ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಯುವ ವ್ಯವಹಾರಗಳ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ’ಮೇರಾ ಯುವ ಭಾರತ್‌’ ಸಂಸ್ಥೆಯು ಬಾಗಲಕೋಟೆಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬಿಐಎಂಎಸ್) ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. 

           ತೇಜಸ್ ದೀಲೀಪ್ ಕೊಡಗ್ ಅವರ ಈ ಸಾಧನೆಗೆ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಆರ್‌. ಎಸ್‌. ಮುತಾಲಿಕ್, ಪ್ರಾಂಶುಪಾಲ ಡಾ. ಎ. ಎಚ್‌. ಹವಾಲ್ದಾರ್, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಡಾ. ಸಮೀನಾ ಎನ್‌. ಬೈಗ್ ಹಾಗೂ ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಮುಂಬರುವ ರಾಜ್ಯಮಟ್ಟದ ಯುವ ಸಂಸತ್‌ನಲ್ಲಿ ಅವರು ಉತ್ತಮ ಸಾಧನೆ ಮಾಡಲಿ ಎಂದು ಶುಭ ಹಾರೈಸಿದ್ದಾರ.ೆ 


ಸುದ್ದಿ ಓದಿ