ಬೆಳಗಾವಿ

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಡಾ.ಕೃಷ್ಣಶರ್ಮರು ಅವಿಸ್ಮರಣೀಯ:

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಡಾ.ಕೃಷ್ಣಶರ್ಮರು ಅವಿಸ್ಮರಣೀಯ:

ಲೋಕದರ್ಶನ ವರದಿ 

ವರದಿ: ಅಡಿವೇಶ ಮುಧೋಳ   

ಬೆಟಗೇರಿ 09:  ಪ್ರತಿಯೊಬ್ಬರೂ ಇಂದು ಸಾಹಿತ್ಯಾಭಿರುಚಿ ಮತ್ತು ಕನ್ನಡಾಭಿಮಾನ ಬೆಳಸಿಕೊಳ್ಳಬೇಕು. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕೃಷ್ಣಶರ್ಮರು ಅವಿಸ್ಮರಣೀಯ. ಕನ್ನಡ ನಾಡು, ನುಡಿಗಾಗಿ ತಮ್ಮ ಬದುಕನ್ನೆ ತ್ಯಾಗ ಮಾಡಿದ ಮಹಾನ್ ವ್ಯಕ್ತಿಗಳನ್ನು ಸ್ಮರಿಸೋಣ ಎಂದು ಯುವಮುಖಂಡ ಸವೋತ್ತಮ ಜಾರಕಿಹೊಳಿ ಹೇಳಿದರು. 

   ಗೋಕಾಕ ತಾಲೂಕಿನ ಬೆಟಗೇರಿ ಕರ್ನಾಟಕ ರಕ್ಷಣಾ ವೇದಿಕೆ, ಗ್ರಾಮ ಪಂಚಾಯತಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಹಾಲು ಉತ್ಪಾದಕರ ಸಹಕಾರಿ ಸಂಘ ಹಾಗೂ ಬೆಳಗಾವಿ ಡಾ.ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್‌ ಇವರ ಸಂಯುಕ್ತ ಆಶ್ರಯದಲ್ಲಿ ಸ್ಥಳೀಯ ಶ್ರೀ ಗಜಾನನ ವೇದಿಕೆಯಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ನ.7ರಂದು ನಡೆದ ಡಾ.ಬೆಟಗೇರಿ ಕೃಷ್ಣಶರ್ಮರ ದಿವ್ಯ ಸ್ಮರಣೋತ್ಸವ ಹಾಗೂ ಮುಕ್ತ ಸಾಮೂಹಿಕ ನೃತ್ಯ ಸ್ಪರ್ಧೆ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಸ್ಥಳೀಯ ಕರ್ನಾಟಕ ರಕ್ಷಣಾ ವೇದಿಕೆಯವರು ಪ್ರತಿ ವರ್ಷ ಬೆಟಗೇರಿಯಲ್ಲಿ ಕೃಷ್ಣಶರ್ಮರ ದಿವ್ಯ ಸ್ಮರಣೋತ್ಸವ ಮಾಡುತ್ತಿರುವದು ಕಾರ್ಯ ಶ್ಲಾಘನೀಯ. ಜಾರಕಿಹೊಳಿ ಕುಟುಂಬ ಸದಾ ತಮ್ಮೊಂದಿಗೆ ಇರುತ್ತದೆ. ತಮ್ಮ ಸಹಕಾರದಿಂದ ಇನ್ನಷ್ಟು ಅಭಿವೃದ್ಧಿ ಪರ ಕಾರ್ಯಗಳನ್ನು ಮಾಡೋಣ ಎಂದರು.   

             ಸುಣಧೋಳಿ ಅಭಿನವ ಶಿವಾನಂದ ಮಹಾಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಸ್ಥಳೀಯ ಕರವೇ ಸದಸ್ಯರಲ್ಲಿ ಮತ್ತು ಯುವಕರ ಕ್ರೀಯಾಶೀಲ ವ್ಯಕ್ತಿತ್ವ ಮತ್ತು ಒಗ್ಗಟ್ಟುತನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಡಾ. ಬೆಟಗೇರಿ ಕೃಷ್ಣಶರ್ಮರ ದಿವ್ಯಸ್ಮರಣೋತ್ಸವ ಕಾರ್ಯಕ್ರಮದ ಮೂಲಕ ಇಂದಿನ ಯುವಪೀಳಿಗೆಗೆ ಪರಿಚಯಿಸುತ್ತಿರುವದು ಶ್ಲಾಘನೀಯವಾಗಿದೆ. ಕೃಷ್ಣಶರ್ಮರ ಹೆಸರಲ್ಲಿ ಪ್ರಶಸ್ತಿ ನೀಡುವಂತೆ ಸಲಹೆ ನೀಡಿ, ಸ್ಥಳೀಯರು ವಿವಿಧ ಕಾರ್ಯಕ್ರಮಗಳಿಗೆ ನೀಡುತ್ತಿರುವ ಸಹಾಯ, ಸಹಕಾರ ಮೆಚ್ಚುವಂತದ್ದಾಗಿದೆ ಎಂದರು.   

           ಬೆಳಗಾವಿ ಡಾ.ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಪ್ರತಿಷ್ಠಾನ ಸದಸ್ಯ ಡಾ.ಎಚ್‌.ಬಿ.ಕೋಲಕಾರ, ಗೋಕಾಕ ಕಸಾಪ ಅಧ್ಯಕ್ಷೆ ಭಾರತಿ ಮದಭಾಂವಿ ಗೌರವಾನ್ವಿತ ಅತಿಥಿಗಳಾಗಿ ಮಾತನಾಡಿದರು. ಸ್ಥಳೀಯ ಕರವೇ ಅಧ್ಯಕ್ಷ ಈರಣ್ಣ ಬಳಿಗಾರ ಅಧ್ಯಕ್ಷತೆ ವಹಿಸಿದ್ದರು. ಕಲ್ಲೋಳ್ಳಿ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ.ಸುರೇಶ ಹನಗಂಡಿ ಅವರು ಡಾ.ಬೆಟಗೇರಿ ಕೃಷ್ಣಶರ್ಮರ ಬದುಕು ಮತ್ತು ಬರಹದ ಕುರಿತು ಉಪನ್ಯಾಸ ನೀಡಿದರು. ಶ್ರೀಗಳು, ಗಣ್ಯರು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರನ್ನು ಇಲ್ಲಿಯ ಕರವೇ ವತಿಯಿಂದ ಸತ್ಕರಿಸಿದರು. ಮುಕ್ತ ಸಾಮೂಹಿಕ ನೃತ್ಯ ಸ್ಪರ್ಧೆ ಕಾರ್ಯಕ್ರಮ ಜರುಗಿತು.  

              ರಂಗಭೂಮಿ ಹಿರಿಯ ಕಲಾವಿದ ಈಶ್ವರಚಂದ್ರ ಬೆಟಗೇರಿ, ಗೋಕಾಕ ತಾಲೂಕಾ ಪಶು ವೈದ್ಯಾಧಿಕಾರಿ ಡಾ.ಮೋಹನ ಕಮತ, ರಮೇಶ ಅಳಗುಂಡಿ, ಬಸವಂತ ಕೋಣಿ, ಸಿದ್ಧೇಶ್ವರ ಕುರಬೇಟ, ಬಸವರಾಜ ಪಣದಿ, ಮಂಜು ಪತ್ತಾರ, ವಿಜಯ ಹಿರೇಮಠ, ಭರಮಣ್ಣ ಪೋಜೇರಿ, ಮಾಯಪ್ಪ ಕೋಣಿ, ಶಂಭು ಹಿರೇಮಠ, ಗೀರೀಶ ಗಾಣಗಿ, ವೀರಭದ್ರ ದೇಯಣ್ಣವರ, ರಾಘು ಬೆಟಗೇರಿ, ಮಹಾದೇವ ತಪಸಿ, ಫಿರೋಜ್ ಮಿರ್ಜಾನಾಯ್ಕ, ಶಿವು ನಾಯ್ಕರ, ಕಾರ್ತಿಕ ತೆರದಾಳ, ಬಸವರಾಜ ದೇಯನ್ನವರ, ಈರಣ್ಣ ದಂಡಿನ, ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಗಣ್ಯರು, ಸ್ಥಳೀಯ ಕರವೇ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು ಇದ್ದರು. 


ಸುದ್ದಿ ಓದಿ