ಬ್ರಹ್ಮದೇವರ ದೇವಸ್ಥಾನದ ಕಳ ಸಾರೋಹಣ ಸಮಾರಂಭ
ಯಮಕನ ಮರಡಿ 07 : ಸ್ಥಳೀಯಮತ ಕ್ಷೇತ್ರದ ಪಾಶ್ಚಾಪೂರ ಗ್ರಾಮದಲ್ಲಿ ನೂತನ ಬ್ರಹ್ಮದೇವರ ದೇವಸ್ಥಾನದ ಕಳಸಾರೋಹನ ಸಮಾರಂಭವು ಯಶಸ್ವಿಯಾಗಿ ಜರುಗಿತು ನಾಡಿನ ಹೆಸರಾಂತ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಯುವ ನಾಯಕ ರಾಹುಲ್ ಅಣ್ಣ ಜಾರಕಿಹೊಳಿ ಭಾಗಿ ಯಾಗಿ ಸನ್ಮಾನ ಸ್ವೀಕರಿಸಿದರು ಸದರಿಯವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿಗಳು ಹಾಗೂ ಅಪೇಕ್ಸ ಮತ್ತು ಡಿಸಿಸಿ ಬ್ಯಾಂಕಿನ ನಿರ್ದೇಶಕ ರಾಧ ರಾಹುಲ್ ಅಣ್ಣಾ ಜಾರಕಿಹೊಳಿ ನಾಡಿನ ಯುವ ನಾಯಕರು ದಿನಾಂಕ ಏಳರಂದು ಯಮಕನಮರಡಿ ಕ್ಷೇತ್ರದ ಪಾಶ್ಚಾಪೂರ ಗ್ರಾಮದ ಬ್ರಹ್ಮದೇವರ ದೇವಸ್ಥಾನದ ನೂತನ ಶಿಖರದ ಕಳಸಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ, ದೇವರ ದರ್ಶನ ಪಡೆದು ಆಶೀರ್ವಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯವರು ಸನ್ಮಾನಿಸಿ, ಗೌರವಿಸಿದರು. ಈ ವೇಳೆ ಮರಾಠಾ ಮತ್ತು ಗೊಂಧಳಿ ಹಾಗೂ ಸ್ಥಳೀಯ ಮುಖಂಡರು ಮತ್ತು ಹಿರಿಯರು ಉಪಸ್ಥಿತರಿದ್ದರು.