ವಿಜಯಪುರ

ವಾಹನಗಳಿಂದ ಉಂಟಾಗುವ ವಾಯು ಮಾಲಿನ್ಯ ನಿಯಂತ್ರಣಕ್ಕೆ ಆದ್ಯತೆ ನೀಡಿ: ವಸೀಮ್ ಬಾಬಾ ಮುದ್ದೇಬಿಹಾಳ

ವಾಹನಗಳಿಂದ ಉಂಟಾಗುವ ವಾಯು ಮಾಲಿನ್ಯ ನಿಯಂತ್ರಣಕ್ಕೆ ಆದ್ಯತೆ ನೀಡಿ: ವಸೀಮ್ ಬಾಬಾ ಮುದ್ದೇಬಿಹಾಳ

ಲೋಕದರ್ಶನ ವರದಿ 

         ವಿಜಯಪುರ 07 : ವಾಹನಗಳಿಂದ ಹೊರಸೂಸುವ ಹೊಗೆ ವಾಯು ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿದ್ದು, ಅದರ ನಿಯಂತ್ರಣಕ್ಕೆ ವಾಹನ ಮಾಲೀಕರು ಹಾಗೂ ಚಾಲಕರು ಹೆಚ್ಚಿನ ಆದ್ಯತೆ ನೀಡಬೇಕು. ವಾಹನಗಳನ್ನು ನಿಯಮಿತವಾಗಿ ತಪಾಸಣೆಗೊಳಪಡಿಸಿ, ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ಪಡೆಯುವ ಮೂಲಕ ಪರಿಸರ ಸಂರಕ್ಷಣೆಗೆ ಸಹಕರಿಸಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ವಸೀಮ್ ಬಾಬಾ ಮುದ್ದೇಬಿಹಾಳ ಹೇಳಿದರು. 

ನಗರದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನ.6ರಂದು ಆಯೋಜಿಸಿದ್ದ ವಾಯು ಮಾಲಿನ್ಯ ನಿಯಂತ್ರಣ ಮಾಸಾಚರಣೆ-2026ರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಾಹನಗಳಿಂದ ಉಂಟಾಗುವ ವಾಯು ಮಾಲಿನ್ಯವನ್ನು ತಡೆಗಟ್ಟಲು ಪ್ರತಿಯೊಬ್ಬರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ವಾಹನಗಳ ಸಮರ​‍್ಕ ನಿರ್ವಹಣೆ ಹಾಗೂ ಮಾಲಿನ್ಯ ನಿಯಂತ್ರಣ ನಿಯಮಗಳ ಪಾಲನೆಗೆ ಗಮನ ನೀಡಬೇಕು ಎಂದು ತಿಳಿಸಿದರು. 

ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಲಾಯಿತು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ವಾಯು ಮಾಲಿನ್ಯ ನಿಯಂತ್ರಣಾಧಿಕಾರಿ ವಿವೇಕ ಅವರು ವಾಯು ಮಾಲಿನ್ಯ ನಿಯಂತ್ರಣದ ಮಹತ್ವದ ಕುರಿತು ಮಾತನಾಡಿದರು. ಮೋಟಾರು ವಾಹನ ನೀರೀಕ್ಷಕರಾದ ಸಂತೋಷ ಪಾಟೀಲ, ವಾಗೇಶ ಹಿರೇಮಠ, ಕಚೇರಿ ಅಧೀಕ್ಷಕರಾದ ಬಿ.ಕೆ. ಉಮ್ಮಣ್ಣವರ, ವೈ.ಬಿ. ಮೂಡಗಿ, ವಿಜಯಲಕ್ಷ್ಮೀ ಬುಸಾರಿ, ರಾಘವೇಂದ್ರ ಯಡಹಳ್ಳಿ ಸೇರಿದಂತೆ ಕಚೇರಿಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. 

ಅಧೀಕ್ಷಕ ಮುತ್ತುರಾಜ್ ಬಿ.ಎನ್‌. ಕಾರ್ಯಕ್ರಮ ನಿರೂಪಿಸಿದರು. ಪ್ರಥಮ ದರ್ಜೆ ಸಹಾಯಕ ಪಿ.ಆರ್‌. ನಂದಿಬಿಷ್ಟಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ದ್ವಿತೀಯ ದರ್ಜೆ ಸಹಾಯಕ ಎಂ.ಎಸ್‌. ಇಂಗಳೇಶ್ವರ ಸ್ವಾಗತಿಸಿ, ವಂದಿಸಿದರು. 


ಸುದ್ದಿ ಓದಿ